ಉಡುಪಿ: ಆಧ್ಯಾತ್ಮಿಕ ಪರಂಪರೆಯಲ್ಲಿ ದೇವರ ನಾಡು ಎಂದೇ ಪ್ರಸಿದ್ಧಿಯಾಗಿರುವ ಉಡುಪಿ ಪರ್ಯಾಯ ಮಹೋತ್ಸವ ದೇಶದ ಗಮನಸೆಳೆಯಿತು. ಶಿರೂರು ಪರ್ಯಾಯ 2026ರ ಶುಭ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ವೈಭವವು ಈ ಮಹಾಕೈಂಕರ್ಯಕ್ಕೆ ಆಕರ್ಷಣೆ ತುಂಬಿತು. ಶ್ರೀ ದುರ್ಗಾ ಮ್ಯೂಸಿಕ್ ಮೀಟ್ ತಂಡ ಆಯೋಜಿಸಿದ ವಿಶಿಷ್ಟ ಸಂಗೀತ ರಸಮಂಜರಿ ಕಾರ್ಯಕ್ರಮ ಪರ್ಯಾಯ ಇತಿಹಾಸದಲ್ಲೇ ವಿಶಿಷ್ಟ ಎನಿಸಿತು. ಉಡುಪಿ ಪರ್ಯಾಯದ ಇತಿಹಾಸದಲ್ಲೇ ಮೊದಲ ಬಾರಿಗೆ 40ಕ್ಕೂ ಹೆಚ್ಚು ಹವ್ಯಾಸಿ ಗಾಯಕರನ್ನು ಒಂದೇ ವೇದಿಕೆಯಲ್ಲಿ ಕರೆತರಲಾಗಿತ್ತು, 70ಕ್ಕೂ ಹೆಚ್ಚು ಹಾಡುಗಳು ಸಂಗೀತಾಸಕ್ತರ ಮನಸೂರೆಗೊಳಿಸಿತು. ಒಂದೇ ವೇದಿಕೆಯಲ್ಲಿ ಇಷ್ಟು ಸಂಖ್ಯೆಯ ಗಾಯಕರ ಸಮ್ಮಿಲನವು ಸಂಸ್ಕೃತಿಕ ವೈಭವಕ್ಕೆ ಸಾಕ್ಷಿಯಾಯಿತು. ಶ್ರೀಕೃಷ್ಣನ ನಾಡಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೊಸ ಪ್ರತಿಭೆಗಳು ತಮ್ಮ ಗಾಯನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು ವಿಶೇಷ. ಪ್ರಸಾದ್ ನೇತ್ರಾಲಯ, ಯುನೈಟೆಡ್ ರೆಡಿಮಿಕ್ಸ್ ಕಾಂಕ್ರೀಟ್ ಕಂಪನಿ ಹಾಗೂ ಯೋಶಿಕಾ ಕನ್ಸಕ್ಷನ್ ಮತ್ತು ಫ್ಯಾಬ್ರಿಕೇಶನ್ಸ್ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆದ…
