ನವದೆಹಲಿ: ದೇಶಾದ್ಯಂತ ವಾಯು ಮಾಲಿನ್ಯವು ತಮ್ಮ ಆರೋಗ್ಯ ಹಾಗೂ ಕುಟುಂಬದ ಯೋಗಕ್ಷೇಮದ ಮೇಲೆ ಬೀರುತ್ತಿರುವ ಪರಿಣಾಮಗಳ ಕುರಿತು ನಾಗರಿಕರು ತಮ್ಮ ವೈಯಕ್ತಿಕ ಅನುಭವಗಳನ್ನು ‘ಆವಾಜ್ ಭಾರತ್ ಕಿ’ ಪೋರ್ಟಲ್ ಮೂಲಕ ಹಂಚಿಕೊಳ್ಳಬೇಕೆಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾನುವಾರ ಮನವಿ ಮಾಡಿದ್ದಾರೆ. ‘ಆವಾಜ್ ಭಾರತ್ ಕಿ’ ರಾಹುಲ್ ಗಾಂಧಿ ಆರಂಭಿಸಿರುವ ಉಪಕ್ರಮವಾಗಿದ್ದು, ಸಾರ್ವಜನಿಕರು ತಮ್ಮ ಅಭಿಪ್ರಾಯಗಳು, ಸಲಹೆಗಳು ಮತ್ತು ಕಳವಳಗಳನ್ನು ನೇರವಾಗಿ ತಮ್ಮ ಕಚೇರಿಗೆ ತಲುಪಿಸುವ ವೇದಿಕೆಯಾಗಿದ್ದುದು ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ. ಎಕ್ಸ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ಗಾಂಧಿ, ವಾಯು ಮಾಲಿನ್ಯದಿಂದಾಗುವ ಮಾನವೀಯ ಹಾಗೂ ಆರ್ಥಿಕ ನಷ್ಟವನ್ನು ಎತ್ತಿ ತೋರಿಸಿದರು. “ನಾವು ನಮ್ಮ ಆರೋಗ್ಯ ಮತ್ತು ಆರ್ಥಿಕತೆಯೊಂದಿಗೆ ಭಾರಿ ಬೆಲೆ ಪಾವತಿಸುತ್ತಿದ್ದೇವೆ. ಪ್ರತಿದಿನ ಕೋಟ್ಯಂತರ ಸಾಮಾನ್ಯ ಭಾರತೀಯರು ಈ ಹೊರೆಯನ್ನು ಅನುಭವಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ. ಮಾಲಿನ್ಯದ ದುಷ್ಪರಿಣಾಮಗಳು ಸಮಾಜದ ದುರ್ಬಲ ವರ್ಗಗಳ ಮೇಲೆ…
