ಮುಂದಿನ ವರ್ಷ ಆಗಸ್ಟ್‌ 15ಕ್ಕೆ ದೇಶಕ್ಕೆ ಆಗಮಿಸಲಿದೆ ಮೊದಲ ಬುಲೆಟ್ ರೈಲು: ಅಶ್ವಿನಿ ವೈಷ್ಣವ್

ನವದೆಹಲಿ: 2027ರ ಆಗಸ್ಟ್‌ 15ರಂದು ಭಾರತಕ್ಕೆ ಮೊದಲ ಬುಲೆಟ್ ರೈಲು ಲಭ್ಯವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಗುರುವಾರ ಮಾತನಾಡಿದ ಅವರು, “ಮುಂದಿನ ವರ್ಷ ಬುಲೆಟ್ ರೈಲು ಹಳಿಗಳ ಮೇಲೆ ಓಡಲು ಆರಂಭವಾಗಲಿದೆ. 2027ರ ಸ್ವಾತಂತ್ರ್ಯ ದಿನದಂದು ದೇಶದ ಮೊದಲ ಬುಲೆಟ್ ರೈಲಿನಲ್ಲಿ ಪ್ರಯಾಣಿಸುವ ಅವಕಾಶ ನಾಗರಿಕರಿಗೆ ದೊರೆಯಲಿದೆ” ಎಂದು ಹೇಳಿದರು. ವಂದೇ ಭಾರತ್ ಎಕ್ಸ್‌ಪ್ರೆಸ್ ಚೇರ್ ಕಾರ್ ರೈಲುಗಳು ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಜನರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿವೆ ಎಂದು ವೈಷ್ಣವ್ ಹೇಳಿದರು. “ವಂದೇ ಭಾರತ್ ರೈಲುಗಳನ್ನು ಓಡಿಸಲು ಈಗ ದೇಶದಾದ್ಯಂತ ಬೇಡಿಕೆ ಬರುತ್ತಿದೆ. ಬಹುತೇಕ ಎಲ್ಲಾ ಸಂಸದರೂ ತಮ್ಮ ಕ್ಷೇತ್ರಕ್ಕೆ ವಂದೇ ಭಾರತ್ ರೈಲು ಬಯಸುತ್ತಿದ್ದಾರೆ. ಇದೇ ಮಾನದಂಡ, ಸೌಕರ್ಯ ಮತ್ತು ಸುರಕ್ಷತೆಯೊಂದಿಗೆ ವಂದೇ ಭಾರತ್ ಸ್ಲೀಪರ್ ರೈಲುಗಳ ಮೂಲಕ ರಾತ್ರಿ ಪ್ರಯಾಣಕ್ಕೂ ಶೀಘ್ರದಲ್ಲೇ ಚಾಲನೆ…

ಕಲಬುರಗಿ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಸವಲತ್ತು ಆರೋಪ; ಶೀಘ್ರವೇ ಅಲೋಕ್ ಸ್ಥಳ ಪರಿಶೀಲನೆ

ಬೆಂಗಳೂರು: ಕಲಬುರಗಿ ಜೈಲಿನಲ್ಲಿ ಕೈದಿಗಳಿಗೆ ವಿಶೇಷ ಸವಲತ್ತು ದೊರಕುತ್ತಿರುವ ಆರೋಪಗಳ ಕುರಿತು ಹಿನ್ನೆಲೆಯಲ್ಲಿ ಮಹಾನಿರ್ದೇಶಕ ಅಲೋಕ್ ಕುಮಾರ್ ಶೀಘ್ರವೇ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡ ಗೃಹ ಸಚಿವ ಪರಮೇಶ್ವರ್, ಹೊಸ ಜೈಲು ಮಹಾನಿರ್ದೇಶಕ ಅಲೋಕ್ ಕುಮಾರ್ ಅವರಿಗೆ ಜೈಲುಗಳಿಗೆ ಭೇಟಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು. “ಅವರು ಶುಕ್ರವಾರ ಕಲಬುರಗಿ ಜೈಲಿಗೆ ಭೇಟಿ ನೀಡಲಿದ್ದು, ಬೆಳಗಾವಿ ಹಾಗೂ ಕಲಬುರಗಿಯ ಜೈಲುಗಳನ್ನು ವೈಯಕ್ತಿಕವಾಗಿ ಪರಿಶೀಲಿಸಲಿದ್ದಾರೆ,” ಎಂದರು. ರಾಜ್ಯದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪರಮೇಶ್ವರ, “ಕೆಲವು ಸಂಘಟಿತ ತಂಡಗಳು ರಾಜ್ಯದ ಹೊರಗಿನಿಂದ ಬಂದಿರಬಹುದೆಂಬ ಅನುಮಾನವಿದೆ. ನಾವು ನಿಗಾ ಇಟ್ಟಿದ್ದು, ಪತ್ತೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದರು.

ಕೆಎಸ್‌ಆರ್‌ಟಿಸಿ ‘ಸಾರಿಗೆ ಮಿತ್ರ’ HRMS ಮೊಬೈಲ್ ಆಪ್ 2.0 ಬಿಡುಗಡೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ನೌಕರರ ಸೇವಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ‘ಸಾರಿಗೆ ಮಿತ್ರ’ HRMS ಮೊಬೈಲ್ ಆಪ್ (ಆವೃತ್ತಿ 2.0.0) ಅನ್ನು ಇಂದು ಬಿಡುಗಡೆ ಮಾಡಿದೆ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಆಪ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದರು. ಡಿಜಿಟಲ್ ಪರಿವರ್ತನೆ, ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ವೃದ್ಧಿಯೊಂದಿಗೆ ನೌಕರರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಹೊಸ ವರ್ಷದ ಆರಂಭದಲ್ಲೇ ಈ ನವೀಕರಿತ ಆಪ್ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು. ಸ್ಮಾರ್ಟ್‌ಫೋನ್ ಮೂಲಕ ಮಾನವ ಸಂಪನ್ಮೂಲ ಸೇವೆಗಳನ್ನು ತ್ವರಿತವಾಗಿ ನೌಕರರಿಗೆ ಒದಗಿಸುವ ಉದ್ದೇಶದಿಂದ ಈ HRMS ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ನೌಕರರಿಗೆ ಬೆರಳಂಚಿನಲ್ಲೇ ಸಮಗ್ರ ಮಾಹಿತಿ ಲಭ್ಯವಾಗುವಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಪ್ರಮುಖ ವೈಶಿಷ್ಟ್ಯಗಳು ಜಿಯೋ–ಫೆನ್ಸಿಂಗ್ ಆಧಾರಿತ ಹಾಜರಾತಿ ವ್ಯವಸ್ಥೆ ಮಾಸಿಕ ಹಾಜರಾತಿ…

ಮನರೇಗಾ ಮೂಲ ಆಶಯಕ್ಕೆ ಹೊಸ ಕಾಯ್ದೆ ವಿರುದ್ಧ: ಪ್ರಧಾನಿ ಮೋದಿಗೆ ಸಿಎಂ ಪತ್ರ

ಹೊಸ ಕಾಯ್ದೆಯು ರಾಜ್ಯವು ತನ್ನ ಮಾನದಂಡ ಹಂಚಿಕೆಯನ್ನು ಮೀರಿ ಭರಿಸಬೇಕಾದ ಯಾವುದೇ ವೆಚ್ಚವನ್ನು ಕೇಂದ್ರ ಸರ್ಕಾರವು ನಿರ್ದೇಶಿಸಿದ ಕ್ರಮಗಳ ಪ್ರಕಾರ ರಾಜ್ಯಗಳೇ ಹೊರಬೇಕು ಎಂದು ಹೇಳುತ್ತದೆ. ಇದು ಕೇಂದ್ರವು ನಿಗದಿಪಡಿಸಿದ ಮಿತಿಯನ್ನು ಮೀರಿದ ಬೇಡಿಕೆಗೆ 100% ಜವಾಬ್ದಾರಿಯನ್ನು ರಾಜ್ಯಗಳು ಹೊರುವಂತೆ ಮಾಡಬಹುದು. ರಾಜ್ಯವು ನಿಗದಿತ ಅಥವಾ ಅದನ್ನು ಮೀರಿದ ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದರೆ, ಜನರ ಅರ್ಹ ಕೂಲಿ ಅವಧಿಯ ಹಕ್ಕನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ಇದು ಬೇಡಿಕೆ ಇರುವ ಕಡೆಗಳಲ್ಲಿ ಅನುದಾನ ನೀಡಲೇಬೇಕು ಎಂಬ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪದ ಬದಲಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಕಾಯ್ದೆಯು ಬಿತ್ತನೆ ಮತ್ತು ಕೊಯ್ಲು ಹೆಚ್ಚಾಗಿ ನಡೆಯುವ ಸಮಯದಲ್ಲಿ ಒಟ್ಟು 60 ದಿನಗಳ ಅವಧಿ ಕಾಮಗಾರಿಗಳನ್ನು ನಡೆಸದಿರುವ ಬಗ್ಗೆ ಮುಂಚಿತವಾಗಿ ಅಧಿಸೂಚಿಸಬೇಕು…

ಯಾರದ್ದೋ ಸಾಲ, ಇನ್ಯಾರಿಗೋ ಕಿರುಕುಳ; ಪೊಳಲಿ ಸೊಸೈಟಿ ಬಗ್ಗೆ ಸಿಐಡಿ ತನಿಖೆಗೆ CRF ಆಗ್ರಹ

ಮಂಗಳೂರು: ಹಣಕಾಸು ವಹಿವಾಟು ಹೆಸರಿನಲ್ಲಿ ಅಮಾಯಕರನ್ನು ಪೀಡಿಸದಂತೆ ರಾಜ್ಯ ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತಂದಿದ್ದರೂ ಸಹಕಾರಿ ಸಂಘಗಳು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಸಾಲ ವಸೂಲಾತಿ ಹೆಸರಲ್ಲಿ ಅಮಾಯಕ (ಸಾಲವನ್ನೇ ಪಡೆಯದ) ವೃದ್ಧೆಯನ್ನು ಪೀಡಿಸಿರುವ ಅಮಾನವೀಯ ಕೃತ್ಯವೊಂದು ಮಂಗಳೂರು ಬಳಿ ನಡೆದಿದೆ. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರ ಸಚಿವಾಲಯವನ್ನೇ ಮುಜುಗರಕ್ಕೀಡು ಮಾಡಿದೆ. ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಫೆರ್ನಾಂಡೀಸ್ ಎಂಬವರು ನಕಲಿ ದಾಖಲೆಗಳನ್ನು ಹಿಡಿದುಕೊಂಡು ವೃದ್ಧೆಯನ್ನು ಪೀಡಿಸಿ ಇದೀಗ ಬಂಧನ ಭೀತಿಗೆ ಸಿಲುಕಿದ್ದಾರೆ. ಬುಧವಾರ (31.12.2025) ಬೆಳಿಗ್ಗೆ ಅಧಿಕಾರಿಗಳ ಸೋಗಿನಲ್ಲಿ ಮನೆ ಆವರಣಕ್ಕೆ ಅತಿಕ್ರಮಣ ಪ್ರವೇಶ, ಮನೆ ಜಪ್ತಿ ಹೆಸರಿನಲ್ಲಿ ಸಾಲ ವಸೂಲಿಗೆ ಯತ್ನಿಸಿರುವ ಹಾಗೂ ವಯೋವೃದ್ಧೆ ಎಂದೂ ಗಮನಿಸದೆ ಬೆದರಿಕೆ ಒಡ್ಡಿರುವ ಬಗ್ಗೆ ಬಂಟ್ವಾಳ ಗ್ರಾಮೀಣ ಪೊಲೀಸ್…

ಕೋಗಿಲು ವಿವಾದ; ಎಲ್ಲಾ ಒತ್ತುವರಿಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆಯೇ? ಬಿಜೆಪಿ ಪ್ರಶ್ನೆ

ಬೆಂಗಳೂರು: ಕೋಗಿಲು ಬಡಾವಣೆಯ ಅಕ್ರಮ ಒತ್ತುವರಿದಾರರಿಗೆ ಪುನರ್ವಸತಿ ನೀಡುವುದೇ ರಾಜ್ಯ ಸರ್ಕಾರದ ನೀತಿಯಾದರೆ, ರಾಜ್ಯದಾದ್ಯಂತ ತೆರವುಗೊಂಡ ಎಲ್ಲಾ ಒತ್ತುವರಿಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆಯೇ? ಎಂದು ಪ್ರತಿಪಕ್ಷ ಬಿಜೆಪಿ ಪ್ರಶ್ನಿಸಿದೆ. ರಾಜಕಾಲುವೆ ನುಂಗಿದ ಪ್ರಭಾವಿ ಬಿಲ್ಡರ್‌ಗಳ ಮೇಲೂ ಇದೇ ‘ಮಾನವೀಯತೆ’ ತೋರುತ್ತೀರಾ? ಮನೆ ಕಳೆದುಕೊಂಡು ಬೀದಿಗೆ ಬಿದ್ದ ಸಾವಿರಾರು ಬಡ ಕನ್ನಡಿಗರಿಗಿಲ್ಲದ ನ್ಯಾಯ, ವಲಸಿಗರಿಗೆ ಮಾತ್ರವೇಕೆ? ಎಂದು ಬಿಜೆಪಿ ಮಾಧ್ಯಮದಲ್ಲಿ ಪ್ರಶ್ನೆಗಳ ಸುರಿಮಳೆಗೈದಿದೆ. ಕನ್ನಡಿಗರ ಹಿತ ಕಾಯಬೇಕಾದ ಸರ್ಕಾರಕ್ಕೆ ನೆರೆಯ ರಾಜ್ಯದವರ ಒತ್ತಡವೇ ದೊಡ್ಡದಾಯಿತೇ? ದಶಕಗಳಿಂದ ಸ್ವಂತ ಸೂರಿಲ್ಲದೆ ಕಾಯುತ್ತಿರುವ ಲಕ್ಷಾಂತರ ಬಡ ಕನ್ನಡಿಗರನ್ನು ಕಡೆಗಣಿಸಿ, ಕಾನೂನುಬಾಹಿರವಾಗಿ ಒತ್ತುವರಿ ಮಾಡಿದವರಿಗೆ ‘ವಿಶೇಷ ಆತಿಥ್ಯ’ ನೀಡುತ್ತಿರುವುದು ನಾಚಿಕೆಗೇಡು ಎಂದಿರುವ ಬಿಜೆಪಿ, ತಕ್ಷಣವೇ ಈ ವಿಶೇಷ ಪುನರ್ವಸತಿ ತೀರ್ಮಾನವನ್ನು ಹಿಂಪಡೆಯಿರಿ. ಕಾನೂನು ಎಲ್ಲರಿಗೂ ಒಂದೇ ಆಗಿರಲಿ ಮತ್ತು ನಮ್ಮ ನೆಲದ ಬಡವರಿಗೆ ವಸತಿ ಯೋಜನೆಗಳಲ್ಲಿ ಮೊದಲ ಆದ್ಯತೆ ಸಿಗಲಿ ಎಂದು ಸಲಹೆ…