ಬೆಂಗಳೂರು: ಜನತೆಯ ಎದುರು ಸುಳ್ಳಿನ ಸರಮಾಲೆಗಳೆನ್ನೇ ಹಣೆದು, ಬಿಬಿಎಂಪಿ ಆಸ್ತಿಗಳನ್ನೇ ಅಡವಿಟ್ಟು ಆಡಳಿತ ನಡೆಸಿದ್ದು ನಿಮ್ಮ ಜಾಯಮಾನ. 2008- 2013ರ ನಿಮ್ಮ ಅವಧಿಯಲ್ಲಿ ಅದೆಷ್ಟು ಆಸ್ತಿಗಳನ್ನು ಅಡವಿಟ್ಟಿದ್ರಿ ಎನ್ನೋದನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. ಆ ಆಸ್ತಿಗಳನ್ನು ಸಾಲಮುಕ್ತಗೊಳಿಸಿದ್ದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆಸ್ಪತ್ರೆಗಳ ಅವ್ಯವಸ್ಥೆ ಕುರಿತ ಬಿಜೆಪಿ ಟೀಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ದಿನೇಶ್ ಗುಂಡೂರಾವ್, ಯುಪಿಎ ಸರ್ಕಾರ ಇದ್ದಾಗ 2014ರಲ್ಲಿ ಭಾರತದ ಸರ್ಕಾರದ ಸಾಲ ₹55 ಲಕ್ಷ ಕೋಟಿ ಇತ್ತು. ನಿಮ್ಮ ಆಡಳಿತದ ಹತ್ತು ವರ್ಷದ ಅದು ಬರೋಬ್ಬರಿ ₹200 ಲಕ್ಷ ಕೋಟಿಗೂ ಅಧಿಕವಾಗಿದೆ. ನಿಮ್ಮದೇ ಕೇಂದ್ರ ಸರ್ಕಾರ ಮಾಡಿರುವ ಈ ಬೆಟ್ಟದಷ್ಟು ಸಾಲ ಎಲ್ಲೆಲ್ಲಿ ವಿನಿಯೋಗವಾಗಿದೆ ಎನ್ನುವ ಲೆಕ್ಕ ಕೊಡ್ತೀರಾ? ಎಂದು ಪ್ರಶ್ನಿಸಿದ್ದಾರೆ. ಜನರಿಗೆ ನಾವು ನೀಡಿದ ಭರವಸೆಯಂತೆ ನಮ್ಮ ಸರ್ಕಾರ ನುಡಿದಂತೆ ನಡೆದುಕೊಂಡು ಬಂದಿದೆ. ಪಂಚ…
Day: February 13, 2026
ಬಾಂಗ್ಲಾದೇಶ ಚುನಾವಣೆ: ಬಿಎನ್‌ಪಿ ಗೆಲುವಿಗೆ ಮೋದಿ ಅಭಿನಂದನೆ
ನವದೆಹಲಿ: ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಐತಿಹಾಸಿಕ ಗೆಲುವು ಸಾಧಿಸಿದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಹಾಗೂ ಅದರ ನಾಯಕ ತಾರಿಕ್ ರೆಹಮಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೂಲಕ ಬಾಂಗ್ಲಾದೇಶದ ಹೊಸ ರಾಜಕೀಯ ನಾಯಕತ್ವದೊಂದಿಗೆ ಕಾರ್ಯನಿರ್ವಹಿಸಲು ಭಾರತ ಸಿದ್ಧವಿರುವುದನ್ನು ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡ ಸಂದೇಶದಲ್ಲಿ ಪ್ರಧಾನಿ ಮೋದಿ, ಭಾರತವು ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಪ್ರಾದೇಶಿಕ ಸ್ಥಿರತೆಗೆ ಬದ್ಧವಾಗಿದೆ ಎಂದು ಹೇಳಿದ್ದಾರೆ. ಈ ಜನಾದೇಶವು ತಾರಿಕ್ ರೆಹಮಾನ್ ಅವರ ನಾಯಕತ್ವದ ಮೇಲೆ ಜನರ ವಿಶ್ವಾಸವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ. ಪ್ರಜಾಸತ್ತಾತ್ಮಕ, ಪ್ರಗತಿಶೀಲ ಮತ್ತು ಸಮಾವೇಶಾತ್ಮಕ ಬಾಂಗ್ಲಾದೇಶ ನಿರ್ಮಾಣಕ್ಕೆ ಭಾರತ ಮುಂದುವರಿದೂ ಬೆಂಬಲ ನೀಡಲಿದೆ. ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಿ, ಸಾಮಾನ್ಯ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಎರಡೂ ದೇಶಗಳು ಸಹಕಾರ ಮುಂದುವರಿಸಲಿವೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ.
ಹೊಸಕೋಟೆ ಬಳಿ ಭೀಕರ ಅಪಘಾತ: ಏಳು ಮಂದಿ ದುರ್ಮರಣ
ಬೆಂಗಳೂರು: ಬೆಂಗಳೂರು ಹೊರವಲಯದ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಸಮೀಪ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ಯಾಂಟರ್ ವಾಹನ, ಬೈಕ್ ಹಾಗೂ ಎಕ್ಸ್‌ಯುವಿ ಕಾರಿನ ನಡುವೆ ಸರಣಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್‌ಗೆ ಎಕ್ಸ್‌ಯುವಿ ಕಾರು ಮೊದಲು ಡಿಕ್ಕಿ ಹೊಡೆದಿದ್ದು, ಬಳಿಕ ನಿಯಂತ್ರಣ ತಪ್ಪಿ ಕ್ಯಾಂಟರ್‌ಗೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮೃತರಲ್ಲಿ ಆರು ಮಂದಿ ಬೆಂಗಳೂರಿನ ಕೊತ್ತನೂರು ನಿವಾಸಿಗಳೆಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
