CT, MRI ಸ್ಕ್ಯಾನಿಂಗ್ ಪರ್ಯಾಯ ವ್ಯವಸ್ಥೆ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಸರ್ಕಾರದ ಹಣದ ಸರಿಯಾದ ಸದ್ಬಳಕೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ನಮ್ಮ ಬದ್ಧತೆ. CT ಮತ್ತು MRI ಸ್ಕ್ಯಾನಿಂಗ್ ಸೇವೆ ಪಡೆಯಲು ಜನರಿಗೆ ಯಾವುದೇ ಅಡಚಣೆ ಆಗಬಾರದು ಎಂಬ ಉದ್ದೇಶದಿಂದ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸಲಾಗಿದೆ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. CT ಮತ್ತು MRI ಸೇವೆ ನೀಡುತ್ತಿದ್ದ Krsnaa Diagnostics Ltd ಸಂಸ್ಥೆ ಸರಿಯಾದ ದಾಖಲೆ ಹಾಗೂ ದೃಢೀಕರಣ ಪದ್ಧತಿಗಳನ್ನು ಪಾಲಿಸದ ಹಿನ್ನೆಲೆಯಲ್ಲಿ, ನಮ್ಮ ಸರ್ಕಾರ ಸ್ಕ್ಯಾನಿಂಗ್ ಪ್ರಕ್ರಿಯೆಗೆ ವ್ಯವಸ್ಥಿತ ನಿಯಮಾವಳಿ ಮತ್ತು ಪರಿಶೀಲನಾ ಕ್ರಮಗಳನ್ನು ಆಗಸ್ಟ್ 30, 2024ರಂದು ಜಾರಿಗೆ ತಂದಿತು. ಇದರ ಪರಿಣಾಮವಾಗಿ 2024ರ ಏಪ್ರಿಲ್‌ನಿಂದ 2025ರ ಡಿಸೆಂಬರ್ ತನಕ ಅಗತ್ಯವಿರುವಷ್ಟೇ ಸಿಟಿ ಸ್ಕ್ಯಾನಿಂಗ್ ನಡೆಯಿತು. ಏಪ್ರಿಲ್‌ 2024 ರಿಂದ ಜುಲೈ 2024ರ ಅವಧಿಯಲ್ಲಿ ಒಟ್ಟು 98,311 ಸ್ಕ್ಯಾನಿಂಗ್ ನಡೆದು, ಅದಕ್ಕೆ 15.24 ಕೋಟಿ…

ಜಮಖಂಡಿ ಸಮೀಪ ಭೀಕರ ಅಪಘಾತ: ಎರಡು ವರ್ಷದ ಮಗು ಸೇರಿ ನಾಲ್ವರು ಸಾವು

ಬಾಗಲಕೋಟೆ: ಜಮಖಂಡಿ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ದುರ್ಮರಣ ಹೊಂದಿದ್ದಾರೆ. ಬಾಗಲಕೋಟೆ ತಾಲೂಕಿನ ಕಟ್ಟೆಕೆರೆ ಸಮೀಪ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ. ಮೃತರನ್ನು ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಹಾಗೂ ರೇಖಾ ಭೂಕೆ ಎಂದು ಗುರುತಿಸಲಾಗಿದೆ. ಮೃತರು ಮಹಾರಾಷ್ಟ್ರ ರಾಜ್ಯದ ಯುವತ್ಮಾಳ್ ಜಿಲ್ಲೆಯ ಬೂಸಾ ತಾಲ್ಲೂಕಿನ ಗುಪವಾಡಿ ಗ್ರಾಮದ ನಿವಾಸಿಗಳಾಗಿದ್ದು, ಕಬ್ಬಿನ ಕಟಾವು ಕೆಲಸಕ್ಕಾಗಿ ಜಮಖಂಡಿ ಭಾಗಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ. ಕಬ್ಬಿನ ಕಟಾವು ಕಾರ್ಯಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ ಟ್ರ್ಯಾಲಿ ಏಕಾಏಕಿ ಕಟ್‌ ಆಗಿ ಪಲ್ಟಿಯಾದ ಪರಿಣಾಮ ದುರ್ಘಟನೆ ಸಂಭವಿಸಿದೆ. ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ…