‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

ನವದೆಹಲಿ: ಭಾರತೀಯ ರೈಲ್ವೆಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪ್ರವಾಸೋದ್ಯಮ ಉಪಕ್ರಮವನ್ನು ಪರಿಚಯಿಸುವ “Karnataka Bharat Gaurav Train – Journey of a Thousand Shrines” ಎಂಬ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಈ ಪುಸ್ತಕವು ಕೇವಲ ರೈಲು ಸೇವೆಯ ದಾಖಲೆಯಲ್ಲ; ನಂಬಿಕೆ, ಸಂಸ್ಕೃತಿ, ಪರಂಪರೆ ಹಾಗೂ ಆಧುನಿಕ ರೈಲ್ವೆ ಮೂಲಸೌಕರ್ಯಗಳ ಸಮನ್ವಯದ ಹಿಂದೆ ಇರುವ ದೃಷ್ಟಿ ಮತ್ತು ಸಾಮೂಹಿಕ ಪ್ರಯತ್ನಗಳನ್ನು ಚಿತ್ರಿಸುತ್ತದೆ. ಐಆರ್‌ಟಿಎಸ್ (ನಿವೃತ್ತ) ಡಾ. ಅನುಪ್ ದಯಾನಂದ ಅವರ ಪರಿಕಲ್ಪನೆಯಲ್ಲಿ ಪುಸ್ತಕ ಮೂಡಿ ಬಂದಿದೆ. ಬಿಡುಗಡೆ ಕಾರ್ಯಕ್ರಮದಲ್ಲಿ ರೈಲ್ವೆಯ ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ ಸಮಿತಿಯ ಸದಸ್ಯ ಹರಿಶಂಕರ್ ವರ್ಮಾ, ಎನ್‌ಎಚ್‌ಎಂ ಹೆಚ್ಚುವರಿ ಸದಸ್ಯ ಕೆ.ಎಸ್. ಜೈನ್, ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಸಿಎಂಡಿ ಎಸ್.ಕೆ. ಜೈನ್ ಹಾಗೂ ಪ್ರವಾಸೋದ್ಯಮ ನಿರ್ದೇಶಕ ರಾಹುಲ್ ಹಿಮಾಲಯನ್ ಉಪಸ್ಥಿತರಿದ್ದರು. ಭಾರತೀಯ ರೈಲ್ವೆ…

ಜೂನ್ ಮುನ್ನ ಪಂಚಾಯಿತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

ಕಾರವಾರ: ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಚುನಾವಣೆಗಳನ್ನು ಮುಂದಿನ ಜೂನ್ ತಿಂಗಳೊಳಗೆ ನಡೆಸಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಂಜಗುಣಿ–ಗಂಗಾವಳಿ ಸೇತುವೆ ಉದ್ಘಾಟನೆ ಬಳಿಕ ಅವರು ಮಾತನಾಡಿದರು. ಗೋಕರ್ಣವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸುವ ಬೇಡಿಕೆ ಇದ್ದು, ಚುನಾವಣೆಗಳ ಬಳಿಕ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು. ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದರಿಂದ ಪುನಃ ಪ್ರಸ್ತಾವ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದೂ ತಿಳಿಸಿದರು. ಈ ವೇಳೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು ಹಾಗೂ ಶಾಸಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

‘ಟಾಕ್ಸಿಕ್’ ಹಾಡುಗಳ ಹಕ್ಕು ₹42 ಕೋಟಿ: ಇದು ‘ಧುರಂಧರ್ 2’ಗಿಂತ ಹೆಚ್ಚು

ಬೆಂಗಳೂರು: ನಟ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಹಾಡುಗಳ ಹಕ್ಕು ಭಾರೀ ಮೊತ್ತಕ್ಕೆ ಮಾರಾಟವಾಗಿದ್ದು, ಚಿತ್ರತಂಡದಲ್ಲಿ ಸಂಭ್ರಮ ಮನೆ ಮಾಡಿದೆ. ಚಿತ್ರದ ಸಂಗೀತ ಹಕ್ಕುಗಳನ್ನು ಜೀ ಮ್ಯೂಸಿಕ್ ಕಂಪನಿ ₹42 ಕೋಟಿಗೆ ಖರೀದಿಸಿದೆ ಎಂದು ತಂಡ ಮಾಹಿತಿ ನೀಡಿದೆ. ಹೋಲಿಕೆಗೆ, ‘ಧುರಂಧರ್ 2’ ಚಿತ್ರದ ಹಾಡುಗಳ ಹಕ್ಕು ₹27 ಕೋಟಿಗೆ ಮಾರಾಟವಾಗಿತ್ತು. ಈ ಮೂಲಕ ‘ಟಾಕ್ಸಿಕ್’ ಚಿತ್ರಕ್ಕೆ ₹15 ಕೋಟಿ ಹೆಚ್ಚುವರಿ ಆದಾಯ ಲಭಿಸಿದೆ. ‘ಧುರಂಧರ್ 2’ ಚಿತ್ರದ ಮೊದಲ ಭಾಗದ ಹಾಡುಗಳು ಸೂಪರ್ ಹಿಟ್ ಆದ ಬಳಿಕವೂ ಕಡಿಮೆ ಮೊತ್ತಕ್ಕೆ ಹಕ್ಕು ಮಾರಾಟವಾಗಿದ್ದ ಹಿನ್ನೆಲೆ, ‘ಟಾಕ್ಸಿಕ್’ಗೆ ದೊರೆತ ಮೊತ್ತ ಗಮನ ಸೆಳೆದಿದೆ. ಸಂಗೀತದ ವಿಚಾರದಲ್ಲೂ ಚಿತ್ರ ವಿಶೇಷತೆ ಹೊಂದಿದೆ. ಬಾಲಿವುಡ್‌ನ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಮತ್ತೊಂದು ಹಾಡಿಗೆ ತನಿಷ್ಕ್ ಬಾಗ್ಜಿ ಅವರು ಅರ್ಸ್ಲಾನ್ ನಿಜಾಮಿ ಹಾಗೂ…