ಬೈರುತ್: ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ಹಾರಿಸಿದ ರಾಕೆಟ್‌ಗಳ ಬೆನ್ನಲ್ಲೇ, ಸೋಮವಾರ ಮುಂಜಾನೆ ಲೆಬನಾನ್ ರಾಜಧಾನಿ ‘ಬೈರುತ್’ನ ದಕ್ಷಿಣ ಉಪನಗರಗಳು ಭಾರೀ ಸ್ಫೋಟಗಳ ನಡುಕದಲ್ಲಿ ತತ್ತರಿಸಿದವು. ಸ್ಥಳೀಯ ವಾಹಿನಿ ಅಲ್-ಜದೀದ್ ವರದಿ ಪ್ರಕಾರ, ಇಸ್ರೇಲಿ ಯುದ್ಧವಿಮಾನಗಳು ತೀವ್ರವಾದ ವಾಯುದಾಳಿ ನಡೆಸಿವೆ. ಇಸ್ರೇಲ್ ದಾಳಿಯ ಪ್ರಮುಖ ಗುರಿಯಾಗಿದ್ದು, ಹೆಜ್ಬೊಲ್ಲಾ ಬಲಗೈ ಎಂದು ಕರೆಯಲ್ಪಡುವ ದಹಿಯೆಹ್ ಪ್ರದೇಶ. ಭಾರೀ ಸ್ಫೋಟಗಳ ಶಬ್ದಕ್ಕೆ ಬೆಚ್ಚಿಬಿದ್ದ ನಿವಾಸಿಗಳು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ಓಡಿಹೋದರು. ಪೀಡಿತ ಪ್ರದೇಶಗಳಿಗೆ ಆಂಬ್ಯುಲೆನ್ಸ್‌ಗಳು ಧಾವಿಸಿದವು. ಸಾವುನೋವುಗಳ ಅಧಿಕೃತ ಅಂಕಿಅಂಶಗಳು ತಕ್ಷಣ ಲಭ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ವರದಿ ತಿಳಿಸಿವೆ. ಲೆಬನಾನ್‌ನ ಶಸ್ತ್ರಸಜ್ಜಿತ ಸಂಘಟನೆ ಹೆಜ್ಬೊಲ್ಲಾ ಹೇಳಿಕೆಯಲ್ಲಿ, ಇಸ್ರೇಲ್ ಕಡೆಗೆ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ಹಾರಿಸಿರುವುದಾಗಿ ಒಪ್ಪಿಕೊಂಡಿದೆ. ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ.…
Day: March 2, 2026
ಕ್ಷಿಪಣಿ ದಾಳಿ: ಇರಾನ್ ವಿರುದ್ಧ ಮುಗಿಬಿದ್ದ ಗಲ್ಫ್ ರಾಷ್ಟ್ರಗಳು
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಉಲ್ಬಣಗೊಂಡಿರುವ ನಡುವೆಯೇ, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಅಮೆರಿಕ ಮತ್ತು ಆರು ಗಲ್ಫ್ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ಈ ದಾಳಿಗಳನ್ನು “ವಿವೇಚನಾರಹಿತ, ಅಜಾಗರೂಕ ಹಾಗೂ ಪ್ರಾದೇಶಿಕ ಸ್ಥಿರತೆಗೆ ಅಪಾಯಕಾರಿ ಉಲ್ಬಣ” ಎಂದು ಕರೆಯಲಾಗಿದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಯುನೈಟೆಡ್ ಸ್ಟೇಟ್ಸ್, ಬಹ್ರೇನ್, ಜೋರ್ಡಾನ್, ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರಗಳು ಇರಾನ್ ನಡೆಸಿದ ದಾಳಿಗಳನ್ನು ಖಂಡಿಸಿವೆ. ದಾಳಿಗಳು ಬಹ್ರೇನ್, ಇರಾಕ್ – ಅದರಲ್ಲೂ ಕುರ್ದಿಸ್ತಾನ್ ಪ್ರದೇಶ – ಜೋರ್ಡಾನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಸೇರಿದಂತೆ ಹಲವು ಸಾರ್ವಭೌಮ ಪ್ರದೇಶಗಳನ್ನು ತಲುಪಿರುವುದಾಗಿ ಹೇಳಿಕೆ ಉಲ್ಲೇಖಿಸಿದೆ. “ನಾಗರಿಕ ಪ್ರದೇಶಗಳು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿರುವುದು ಅಂತರರಾಷ್ಟ್ರೀಯ ಮಾನದಂಡಗಳ ನೇರ ಉಲ್ಲಂಘನೆ,” ಎಂದು ಜಂಟಿ…
ಖಮೇನಿ ಸೇರಿ 48 ಇರಾನಿನ ನಾಯಕರ ಹತ್ಯೆ: ಟ್ರಂಪ್ ಘೋಷಣೆ
ವಾಷಿಂಗ್ಟನ್: ಇರಾನ್ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಯಲ್ಲಿ ಇದುವರೆಗೆ 48 ಇರಾನಿನ ರಾಜಕೀಯ ಹಾಗೂ ಸೈನಿಕ ನಾಯಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ‘ಫಾಕ್ಸ್ ನ್ಯೂಸ್’ಗೆ ನೀಡಿದ ಸಂದರ್ಶನದಲ್ಲಿ ಅವರು, ಕಾರ್ಯಾಚರಣೆಯನ್ನು “ದೊಡ್ಡ ಯಶಸ್ಸು” ಎಂದು ಬಣ್ಣಿಸಿದರು. ಒಂದೇ ದಾಳಿಯಲ್ಲಿ 48 ನಾಯಕರನ್ನು ಹೊಡೆದುರುಳಿಸಲಾಗಿದೆ. ಕಾರ್ಯಾಚರಣೆ ನಿರೀಕ್ಷೆಗಿಂತ ವೇಗವಾಗಿ ಮುಂದುವರಿಯುತ್ತಿದೆ. ನಮ್ಮ ಯಶಸ್ಸನ್ನು ಹಲವರು ನಂಬಲಾರರು ಎಂದು ಟ್ರಂಪ್ ಹೇಳಿದರು. ಇರಾನ್‌ನಲ್ಲಿ ಅಮೆರಿಕ ಮಿಲಿಟರಿ ಕ್ರಮ ನಿಗದಿತ ವೇಳಾಪಟ್ಟಿಗಿಂತ ಮುಂಚೆಯೇ ಸಾಗುತ್ತಿದೆ. ಪ್ರಗತಿ ಉತ್ತಮವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು. ಇದೇ ವೇಳೆ, ಇರಾನ್‌ನ ಹೊಸ ನಾಯಕತ್ವವು ಅಮೆರಿಕದೊಂದಿಗೆ ಸಂಪರ್ಕದಲ್ಲಿದೆ. ಮಾತುಕತೆಗೆ ಸಮ್ಮತಿ ಸೂಚಿಸಿದೆ ಎಂದು ಅವರು ತಿಳಿಸಿದರು. ಹೊಸ ನಾಯಕರು ಸಂಭಾಷಣೆಗೆ ಆಸಕ್ತಿ ತೋರಿದ್ದಾರೆ. ನಾನು ಮಾತುಕತೆಗೆ ಸಿದ್ಧನಿದ್ದೇನೆ ಎಂದು ಅವರು ಹೇಳಿದರು. ಇರಾನ್ ಆಡಳಿತವು ಮೊದಲೇ ರಾಜಿ ಮಾಡಿಕೊಳ್ಳಬಹುದಿತ್ತು. ಆದರೆ ಅವರು…
