ಬೆಂಗಳೂರು: ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519 ಮೀಟರ್‌ನಿಂದ 524 ಮೀಟರ್‌ಗೆ ಹೆಚ್ಚಿಸುವ ಯೋಜನೆಗೆ ಆಂಧ್ರಪ್ರದೇಶ ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ (D.K. Shivakumar) ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಆಂಧ್ರಪ್ರದೇಶ ಸರ್ಕಾರವು ಗೆಜೆಟ್ ಅಧಿಸೂಚನೆ ಹೊರಡಿಸದಂತೆ ಹಾಗೂ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದೆ ಎಂದು ಅವರು ತಿಳಿಸಿದರು. “ನ್ಯಾಯಮಂಡಳಿಯ ಆದೇಶದಂತೆ ಕೇಂದ್ರವು ಮಧ್ಯಪ್ರವೇಶಿಸಿ ಯೋಜನೆ ಮುಂದುವರಿಯಲು ಅವಕಾಶ ನೀಡಬೇಕು” ಎಂದು ಮನವಿ ಮಾಡಿದರು. ಸೆಪ್ಟೆಂಬರ್ 16, 2025ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಾಗಿ 1.33 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಮೂರು ಹಂತಗಳಲ್ಲಿ 70,000 ಕೋಟಿ ರೂಪಾಯಿ ಬಿಡುಗಡೆ ಮಾಡುವ ಯೋಜನೆಯೂ ಇದೆ ಎಂದು ಅವರು ವಿವರಿಸಿದರು. 2010ರಲ್ಲಿ ನ್ಯಾಯಮಂಡಳಿಯು ನೀರಿನ ಬಳಕೆಯನ್ನು 177 ಟಿಎಂಸಿಯಿಂದ 330 ಟಿಎಂಸಿಗೆ ಹೆಚ್ಚಿಸಲು…
Day: March 4, 2026
ಮಟ್ಕಾ ಅಡ್ಡೆ ಮೇಲೆ ದಾಳಿ; ಬುಕ್ಕಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಶಾಸಕ
ಹಾವೇರಿ: ಹಾವೇರಿ ತಾಲೂಕಿನ ಗುತ್ತಲ ಪಟ್ಟಣದಲ್ಲಿ ಅಕ್ರಮ ಮಟ್ಕಾ ದಂಧೆ ನಡೆಯುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಶಾಸಕ ಹಾಗೂ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ (Rudrappa Lamani) ಸ್ವತಃ ದಾಳಿ ನಡೆಸಿ ಬುಕ್ಕಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ. ಗುತ್ತಲ ಪಟ್ಟಣದ ಪ್ರಾಥಮಿಕ ಮಕ್ಕಳ ಶಾಲೆಯ ಸಮೀಪದ ಕೊಠಡಿಯೊಂದರಲ್ಲಿ ಮಟ್ಕಾ ಬರೆಯಲಾಗುತ್ತಿದೆ. ಇದನ್ನು ಯಾರೂ ತಡೆಯುತ್ತಿಲ್ಲ ಎಂದು ಸ್ಥಳೀಯ ಮಹಿಳೆಯರು ಸೋಮವಾರ ಶಾಸಕರ ಗಮನಸೆಳೆದರು. ನಾಡ ಕಚೇರಿ ಉದ್ಘಾಟನೆ ಹಾಗೂ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ವೇಳೆ, ಸ್ಥಳೀಯರು ಈ ಸಮಸ್ಯೆಯನ್ನು ಮತ್ತೊಮ್ಮೆ ಅವರ ಗಮನಕ್ಕೆ ತಂದರು. ಕೂಡಲೇ ಕಾರ್ಯಪ್ರವೃತ್ತರಾದ ರುದ್ರಪ್ಪ ಲಮಾಣಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿದಾಗ ವ್ಯಕ್ತಿಯೋರ್ವ ಮಟ್ಕಾ ಬರೆಯುತ್ತಿರುವುದು ಕಂಡುಬಂದಿದೆ. ಕೂಡಲೇ ಆತನನ್ನು ಗುತ್ತಲ ಪೊಲೀಸ್ ಠಾಣೆ (Guttal Police Station) ಸಿಬ್ಬಂದಿಗೆ ಒಪ್ಪಿಸಿದರು. ಈ ವೇಳೆ ಪಿಎಸ್‌ಐಗೆ ತರಾಟೆಗೆ…
ಅನುಚಿತ ಚಿತ್ರೀಕರಣಕ್ಕೆ ಖಂಡನೆ: ರುಕ್ಮಿಣಿ, ಆಶಿಕಾ, ಸಪ್ತಮಿ ಒಗ್ಗಟ್ಟಿನ ಸಂದೇಶ
ಬೆಂಗಳೂರು: ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಟಿಯರನ್ನು ಅನುಚಿತ ಕೋನಗಳಿಂದ ಚಿತ್ರೀಕರಿಸಿ, ಉದ್ದೇಶಪೂರ್ವಕ ಜೂಮ್-ಇನ್‌ಗಳ ಮೂಲಕ ದೃಶ್ಯಗಳನ್ನು ಪ್ರಸಾರ ಮಾಡುವ ಪ್ರಕ್ರಿಯೆಯನ್ನು ನಟಿಯರಾದ ರುಕ್ಮಿಣಿ ವಸಂತ್ (Rukmini Vasanth), ಆಶಿಕಾ ರಂಗನಾಥ್ (Ashika Ranganath) ಮತ್ತು ಸಪ್ತಮಿ ಗೌಡ (Saptami Gowda) ತೀವ್ರವಾಗಿ ಖಂಡಿಸಿದ್ದಾರೆ. ಮಂಗಳವಾರ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಒಗ್ಗಟ್ಟಿನ ಹೇಳಿಕೆಯಲ್ಲಿ ನಟಿಯರು, “ಚಲನಚಿತ್ರೋದ್ಯಮದ ಮಹಿಳೆಯರಾಗಿ ನಾವು ಪುನರಾವರ್ತಿತ ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಪದೇ ಪದೇ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಹಿಳಾ ನಟಿಯರನ್ನು ಸೂಕ್ತವಲ್ಲದ ಕೋನಗಳಿಂದ ಚಿತ್ರೀಕರಿಸಲಾಗುತ್ತದೆ. ಅನಗತ್ಯ ಜೂಮ್‌ಗಳು ನಮ್ಮ ಕೆಲಸದ ಬದಲು ನಮ್ಮ ದೇಹದ ಮೇಲೆ ಕೇಂದ್ರೀಕರಿಸುತ್ತವೆ,” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಕೆಲವು ವ್ಯಕ್ತಿಗಳ ಈ ನಡವಳಿಕೆ ಅಗೌರವಕಾರಿ ಹಾಗೂ ಸಂಪೂರ್ಣವಾಗಿ ಅಸ್ವೀಕಾರಾರ್ಹ. ನಾವು ನಮ್ಮ ಸಿನಿಮಾಗಾಗಿ ಇಲ್ಲಿದ್ದೇವೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಉದ್ದೇಶಪೂರ್ವಕ ಜೂಮ್-ಇನ್‌ಗಳು ಮತ್ತು ಅನುಚಿತ ಕೋನಗಳನ್ನು ಘನತೆಯ ಉಲ್ಲಂಘನೆ ಎಂದು ಕರೆಯಿರುವ ನಟಿಯರು,…
