ಜನಗಣತಿ–2027: ಸ್ವಯಂ-ಗಣತಿ ಪ್ರಾರಂಭ

ಬೆಂಗಳೂರು: ರಾಷ್ಟ್ರೀಯ ಜನಗಣತಿ–2027 ಹಿನ್ನೆಲೆಯಲ್ಲಿ ನಗರದ ವ್ಯಾಪ್ತಿಯಲ್ಲಿ ಮನೆಪಟ್ಟಿ ಮತ್ತು ಮನೆಗಣತಿ ಕಾರ್ಯಗಳು ಬುಧವಾರ ಆರಂಭಗೊಂಡಿವೆ. ಈ ಬಾರಿ ನಾಗರಿಕರಿಗೆ ಸ್ವಯಂ-ಗಣತಿಯ ಆಯ್ಕೆಯನ್ನು ನೀಡಲಾಗಿದ್ದು, ಮನೆಯ ವಿವರಗಳನ್ನು ಆನ್‌ಲೈನ್ ಮೂಲಕಲೇ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 1 ರಿಂದ 15ರವರೆಗೆ ಸ್ವಯಂ-ಗಣತಿ ನಡೆಸಲು https://se.census.gov.in ಪೋರ್ಟಲ್ ಸಕ್ರಿಯವಾಗಿದೆ. ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15–20 ನಿಮಿಷಗಳಲ್ಲಿ ಮಾಹಿತಿಯನ್ನು ದಾಖಲು ಮಾಡಬಹುದು. ನೋಂದಣಿಯ ನಂತರ Self-Enumeration ID ಮೊಬೈಲ್ ಅಥವಾ ಇಮೇಲ್ ಮೂಲಕ ಕಳುಹಿಸಲಾಗುತ್ತದೆ. ಎರಡನೇ ಹಂತವಾಗಿ ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಮನೆ–ಮನೆಗೆ ಭೇಟಿ ನೀಡಿ ಸ್ಥಳೀಯ ಪರಿಶೀಲನೆ ನಡೆಸಲಿದ್ದಾರೆ. ಸ್ವಯಂ-ಗಣತಿ ಮಾಡಿದವರು ತಮ್ಮ Self-Enumeration ID ಅನ್ನು ಗಣತಿದಾರರಿಗೆ ನೀಡುವುದು ಅಗತ್ಯ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೇಳುವಂತೆ, ಜನಗಣತಿಯಲ್ಲಿ ಸಂಗ್ರಹವಾಗುವ ಮಾಹಿತಿ ಭವಿಷ್ಯದ ನಗರ ಯೋಜನೆ, ಸಾರಿಗೆ ವ್ಯವಸ್ಥೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು…