ಬೆಂಗಳೂರು: ಕೈಗಾರಿಕೆ ಹೆಸರಲ್ಲಿ ಭೂಸವಾಧೀನ ಮಾಡಿಸಿ ವೈಯಕ್ತಿಕ ಬ್ಯುಸಿನೆಸ್ ನಡೆಸುವ ರಿಯಲ್ ಎಸ್ಟೇಟ್ ಉದ್ಯಮಿ ದಯಾನಂದ್ ಪೈ ಪ್ರಯತ್ನಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಮಹತ್ವದ ಆದೇಶವೊಂದರಲ್ಲಿ ಬೆಂಗಳೂರಿನ ಹೆಬ್ಬಾಳ ಬಳಿ ಲೇಕ್ ವ್ಯೂ ಪ್ರವಾಸೋದ್ಯಮ ನಿಗಮಕ್ಕೆ ನೂರಾರು ಕೋಟಿ ಬೆಲೆಬಾಳುವ ಜಾಮೀನು ಸ್ವಾಧೀನ ಅಧಿಸೂಚನೆಯನ್ನೇ ಹೈಕೋರ್ಟ್ ರದ್ದುಪಡಿಸಿದೆ. ಅಷ್ಟೇ ಅಲ್ಲ ಉದ್ಯಮಿ ದಯಾನಂದ್ ಪೈ ಅವರಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ದಂಡ ವಿಧಿಸಿದ್ದಲ್ಲದೆ, ಸಿಬಿಐ ತನಿಖೆಗೂ ಆದೇಶಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ. ಹೆಬ್ಬಾಳದಲ್ಲಿ ಸ್ಥಳೀಯರ ಆಕ್ಷೇಪದ ನಡುವೆಯೂ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗಾಗಿ 63.33 ಎಕರೆ ಭೂಮಿಯನ್ನು ಸ್ವಾಧೀನ ಕುರಿತು KIADBಯು 2002ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಅದೇ ಜಮೀನನ್ನು ಬಿಡಿಡಿಎಯು 2004ರಲ್ಲಿ ಅರ್ಕಾವತಿ ಲೇಔಟ್ ನಿರ್ಮಾಣಕ್ಕೂ ಅಧಿಸೂಚನೆ ಹೊರಡಿಸಿದೆ. ಅದಾಗಿಯೂ KIADBಯು ಕಾಯ್ದೆಯ ಸೆಕ್ಷನ್ 28 (ಎ) ರ ಅಡಿಯಲ್ಲಿ 63.33 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು…
Day: April 12, 2026
ವಿಶೇಷ ಸಂಸತ್ ಅಧಿವೇಶನ; ಬಿಜೆಪಿ ಮೂರು ಸಾಲಿನ ವಿಪ್ ಜಾರಿ
ನವದೆಹಲಿ: ಏಪ್ರಿಲ್ 16ರಿಂದ ಆರಂಭವಾಗಲಿರುವ ವಿಶೇಷ ಸಂಸತ್ ಅಧಿವೇಶನಕ್ಕೂ ಮುನ್ನ ಬಿಜೆಪಿ ತನ್ನ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದರಿಗೆ ಕಟ್ಟುನಿಟ್ಟಾದ ಮೂರು ಸಾಲಿನ ವಿಪ್ ಜಾರಿ ಮಾಡಿದೆ. ಏಪ್ರಿಲ್ 16ರಿಂದ 18ರವರೆಗೆ ನಡೆಯುವ ಅಧಿವೇಶನದ ಅವಧಿಯಲ್ಲಿ ಎಲ್ಲ ಸಂಸದರೂ ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು ಎಂದು ಪಕ್ಷ ಸೂಚಿಸಿದೆ. ಯಾವುದೇ ರಜೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪಕ್ಷದ ಕಚೇರಿ ಕಾರ್ಯದರ್ಶಿ ಶಿವಶಕ್ತಿ ನಾಥ್ ಬಕ್ಷಿ ಸಹಿ ಮಾಡಿದ ಅಧಿಕೃತ ನೋಟಿಸ್‌ನಲ್ಲಿ, “ಎಲ್ಲಾ ಕೇಂದ್ರ ಸಚಿವರು ಹಾಗೂ ಸಂಸದರು ಈ ಮೂರು ದಿನಗಳಲ್ಲೂ ಸದನದಲ್ಲಿ ನಿರಂತರವಾಗಿ ಹಾಜರಿರಬೇಕು” ಎಂದು ತಿಳಿಸಲಾಗಿದೆ. ಬಜೆಟ್ ಅಧಿವೇಶನದ ವಿರಾಮದ ಬಳಿಕ ಲೋಕಸಭೆ ಮತ್ತು ರಾಜ್ಯಸಭೆ ಏಪ್ರಿಲ್ 16ರಂದು ಮತ್ತೆ ಸಭೆ ಸೇರುವುದರೊಂದಿಗೆ ಈ ವಿಶೇಷ ಅಧಿವೇಶನ ಆರಂಭವಾಗಲಿದೆ. ಸರ್ಕಾರ ಪ್ರಮುಖ ಮಸೂದೆಗಳು ಮತ್ತು ಸುಧಾರಣಾ ಕ್ರಮಗಳನ್ನು ಮುಂದಿಡುವ ಸಾಧ್ಯತೆ ಇದೆ. ಮುಖ್ಯವಾಗಿ ಮಹಿಳೆಯರಿಗೆ…
ದಿಗ್ಗಜ ಗಾಯಕಿ ಆಶಾ ಭೋಸ್ಲೆ ವಿಧಿವಶ; ಶ್ರದ್ದಾಂಜಲಿಯ ಮಹಾಪೂರ
ಮುಂಬೈ,: ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ (Asha Bhosle) ಅವರು ಭಾನುವಾರ ನಿಧನ ಹೊಂದಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಕಳೆದ ಕೆಲವು ದಿನಗಳಿಂದ ತೀವ್ರ ಉಸಿರಾಟದ ಸಮಸ್ಯೆ ಮತ್ತು ಎದೆನೋವಿನಿಂದ ಬಳಲುತ್ತಿದ್ದ ಅವರು ಮುಂಬೈನ Breach Candy Hospitalನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ನಿಗಾ ಘಟಕದಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮಧ್ಯಾಹ್ನದ ವೇಳೆಗೆ ಕೊನೆಯುಸಿರೆಳೆದರು. ಆಶಾ ಭೋಸ್ಲೆ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಚಿತ್ರರಂಗದ ಗಣ್ಯರು ಹಾಗೂ ಸಂಗೀತ ಕ್ಷೇತ್ರದ ಅನೇಕರು ಅವರ ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಆ ಪ್ರಾರ್ಥನೆ ಫಲಕಾರಿಯಾಗದೆ, ಸಂಗೀತ ಲೋಕವು ತನ್ನ ಅಮೂಲ್ಯ ಧ್ವನಿಯನ್ನು ಕಳೆದುಕೊಂಡಂತಾಗಿದೆ. ಹಿಂದಿ ಸೇರಿದಂತೆ ಕನ್ನಡ, ತಮಿಳು, ತೆಲುಗು, ಮರಾಠಿ, ಮಲಯಾಳಂ, ಬೆಂಗಾಲಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಲಕ್ಷಾಂತರ ಹಾಡುಗಳನ್ನು ಹಾಡಿರುವ ಆಶಾ ಭೋಸ್ಲೆ, ಭಾರತೀಯ ಸಂಗೀತಕ್ಕೆ ಅಪಾರ ಕೊಡುಗೆ…
ಜಬ್ಬಾರ್ ರಾಜೀನಾಮೆ ಅಂಗೀಕಾರ; ನೂತನ ಸಮಿತಿ ರಚನೆಗೆ ಡಿಕೆಶಿ ಕಸರತ್ತು
ಬೆಂಗಳೂರು: ದಾವಣಗೆರೆ ಕ್ಷೇತ್ರದ ಉಪಚುನಾವಣೆಯಲ್ಲಿ ನೀಡದ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ತಲ್ಲಣ ಸೃಷ್ಟಿಸಿದೆ. ಅದರಲ್ಲೂ ಮುಸ್ಲಿಂ ನಾಯಕರು ಪಕ್ಷದ ಪ್ರಚಾರದಿಂದ ಉಳಿದಿರುವ ಬೆಳವಣಿಗೆ ಪಕ್ಷದ ವರಿಷ್ಠರಿಗೆ ಮುಜುಗರ ತಂದಿದೆ. ಈ ಬೆಳವಣಿಗೆಯ ನಡುವೆಯೇ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ಅವರು ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅಂಗೀಕರಿಸಿದ್ದಾರೆ. “ಅಬ್ದುಲ್ ಜಬ್ಬಾರ್ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಅಲ್ಪಸಂಖ್ಯಾತ ವಿಭಾಗದ ಸಮಿತಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ ಎಂದು ಡಿ ಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನೂತನ ಸಮಿತಿ ಶೀಘ್ರ ರಚನೆಗೆ ಕ್ರಮ ವಹಿಸಲಾಗಿದೆ” ಎಂದು ಶಿವಕುಮಾರ್ ತಿಳಿಸಿದ್ದಾರೆ.
ಇರಾನ್-ಅಮೇರಿಕ ಜೊತೆಗಿನ ಪಾಕ್ ಸಂಧಾನ ವಿಫಲ
ಇಸ್ಲಾಮಾಬಾದ್: ಇರಾನ್ ಜೊತೆ ನಡೆದ ಮಹತ್ವದ ಮಾತುಕತೆಗಳು ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪಾಕಿಸ್ತಾನ ತೊರೆದಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ನಡೆದ ಇತ್ತೀಚಿನ ಸುತ್ತಿನ ಚರ್ಚೆಗಳಲ್ಲಿ ಅಮೆರಿಕ ತನ್ನ “ಅಂತಿಮ ಮತ್ತು ಉತ್ತಮ ಕೊಡುಗೆ”ಯನ್ನು ಮಂಡಿಸಿದ್ದರೂ, ಇರಾನ್ ಅದನ್ನು ಅಂಗೀಕರಿಸದ ಕಾರಣ ಮಾತುಕತೆಗಳು ಫಲಶೂನ್ಯವಾಗಿ ಅಂತ್ಯಗೊಂಡಿವೆ ಎಂದು ವ್ಯಾನ್ಸ್ ತಿಳಿಸಿದ್ದಾರೆ. ಸುಮಾರು ಒಂದು ದಿನದ ಮ್ಯಾರಥಾನ್ ಮಾತುಕತೆಗಳ ಬಳಿಕವೂ ಪ್ರಮುಖ ವಿಷಯಗಳಲ್ಲಿ ಒಪ್ಪಂದಕ್ಕೆ ಬರಲಾಗಿಲ್ಲ. ಸದ್ಭಾವನೆಯಿಂದ ಚರ್ಚೆಗಳು ನಡೆದರೂ ಅಂತಿಮ ನಿರ್ಧಾರ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಇರಾನ್ ಪರಮಾಣು ಕಾರ್ಯಕ್ರಮವೇ ಮಾತುಕತೆಗಳ ಪ್ರಮುಖ ವಿಷಯವಾಗಿದ್ದು, ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ಮಾಡಬಾರದು ಎಂಬುದರ ಕುರಿತು ದೀರ್ಘಕಾಲೀನ ಭರವಸೆ ಅಗತ್ಯವಿದೆ ಎಂದು ವ್ಯಾನ್ಸ್ ಒತ್ತಿಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇರಾನ್ ಮೂಲಗಳು, ಅಮೆರಿಕದ “ಅತಿಯಾದ ಬೇಡಿಕೆಗಳು” ಮಾತುಕತೆ ವಿಫಲವಾಗಲು ಕಾರಣವಾಗಿವೆ ಎಂದು ಆರೋಪಿಸಿವೆ. ಜೊತೆಗೆ, ತನ್ನ…
