ಹೊಸ ಕಾಯ್ದೆಯು ರಾಜ್ಯವು ತನ್ನ ಮಾನದಂಡ ಹಂಚಿಕೆಯನ್ನು ಮೀರಿ ಭರಿಸಬೇಕಾದ ಯಾವುದೇ ವೆಚ್ಚವನ್ನು ಕೇಂದ್ರ ಸರ್ಕಾರವು ನಿರ್ದೇಶಿಸಿದ ಕ್ರಮಗಳ ಪ್ರಕಾರ ರಾಜ್ಯಗಳೇ ಹೊರಬೇಕು ಎಂದು ಹೇಳುತ್ತದೆ. ಇದು ಕೇಂದ್ರವು ನಿಗದಿಪಡಿಸಿದ ಮಿತಿಯನ್ನು ಮೀರಿದ ಬೇಡಿಕೆಗೆ 100% ಜವಾಬ್ದಾರಿಯನ್ನು ರಾಜ್ಯಗಳು ಹೊರುವಂತೆ ಮಾಡಬಹುದು. ರಾಜ್ಯವು ನಿಗದಿತ ಅಥವಾ ಅದನ್ನು ಮೀರಿದ ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದರೆ, ಜನರ ಅರ್ಹ ಕೂಲಿ ಅವಧಿಯ ಹಕ್ಕನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ಇದು ಬೇಡಿಕೆ ಇರುವ ಕಡೆಗಳಲ್ಲಿ ಅನುದಾನ ನೀಡಲೇಬೇಕು ಎಂಬ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪದ ಬದಲಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಈ ಕಾಯ್ದೆಯು ಬಿತ್ತನೆ ಮತ್ತು ಕೊಯ್ಲು ಹೆಚ್ಚಾಗಿ ನಡೆಯುವ ಸಮಯದಲ್ಲಿ ಒಟ್ಟು 60 ದಿನಗಳ ಅವಧಿ ಕಾಮಗಾರಿಗಳನ್ನು ನಡೆಸದಿರುವ ಬಗ್ಗೆ ಮುಂಚಿತವಾಗಿ ಅಧಿಸೂಚಿಸಬೇಕು…
Year: 2026
ಯಾರದ್ದೋ ಸಾಲ, ಇನ್ಯಾರಿಗೋ ಕಿರುಕುಳ; ಪೊಳಲಿ ಸೊಸೈಟಿ ಬಗ್ಗೆ ಸಿಐಡಿ ತನಿಖೆಗೆ CRF ಆಗ್ರಹ
ಮಂಗಳೂರು: ಹಣಕಾಸು ವಹಿವಾಟು ಹೆಸರಿನಲ್ಲಿ ಅಮಾಯಕರನ್ನು ಪೀಡಿಸದಂತೆ ರಾಜ್ಯ ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತಂದಿದ್ದರೂ ಸಹಕಾರಿ ಸಂಘಗಳು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಸಾಲ ವಸೂಲಾತಿ ಹೆಸರಲ್ಲಿ ಅಮಾಯಕ (ಸಾಲವನ್ನೇ ಪಡೆಯದ) ವೃದ್ಧೆಯನ್ನು ಪೀಡಿಸಿರುವ ಅಮಾನವೀಯ ಕೃತ್ಯವೊಂದು ಮಂಗಳೂರು ಬಳಿ ನಡೆದಿದೆ. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರ ಸಚಿವಾಲಯವನ್ನೇ ಮುಜುಗರಕ್ಕೀಡು ಮಾಡಿದೆ. ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಫೆರ್ನಾಂಡೀಸ್ ಎಂಬವರು ನಕಲಿ ದಾಖಲೆಗಳನ್ನು ಹಿಡಿದುಕೊಂಡು ವೃದ್ಧೆಯನ್ನು ಪೀಡಿಸಿ ಇದೀಗ ಬಂಧನ ಭೀತಿಗೆ ಸಿಲುಕಿದ್ದಾರೆ. ಬುಧವಾರ (31.12.2025) ಬೆಳಿಗ್ಗೆ ಅಧಿಕಾರಿಗಳ ಸೋಗಿನಲ್ಲಿ ಮನೆ ಆವರಣಕ್ಕೆ ಅತಿಕ್ರಮಣ ಪ್ರವೇಶ, ಮನೆ ಜಪ್ತಿ ಹೆಸರಿನಲ್ಲಿ ಸಾಲ ವಸೂಲಿಗೆ ಯತ್ನಿಸಿರುವ ಹಾಗೂ ವಯೋವೃದ್ಧೆ ಎಂದೂ ಗಮನಿಸದೆ ಬೆದರಿಕೆ ಒಡ್ಡಿರುವ ಬಗ್ಗೆ ಬಂಟ್ವಾಳ ಗ್ರಾಮೀಣ ಪೊಲೀಸ್…
ಕೋಗಿಲು ವಿವಾದ; ಎಲ್ಲಾ ಒತ್ತುವರಿಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆಯೇ? ಬಿಜೆಪಿ ಪ್ರಶ್ನೆ
ಬೆಂಗಳೂರು: ಕೋಗಿಲು ಬಡಾವಣೆಯ ಅಕ್ರಮ ಒತ್ತುವರಿದಾರರಿಗೆ ಪುನರ್ವಸತಿ ನೀಡುವುದೇ ರಾಜ್ಯ ಸರ್ಕಾರದ ನೀತಿಯಾದರೆ, ರಾಜ್ಯದಾದ್ಯಂತ ತೆರವುಗೊಂಡ ಎಲ್ಲಾ ಒತ್ತುವರಿಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆಯೇ? ಎಂದು ಪ್ರತಿಪಕ್ಷ ಬಿಜೆಪಿ ಪ್ರಶ್ನಿಸಿದೆ. ರಾಜಕಾಲುವೆ ನುಂಗಿದ ಪ್ರಭಾವಿ ಬಿಲ್ಡರ್‌ಗಳ ಮೇಲೂ ಇದೇ ‘ಮಾನವೀಯತೆ’ ತೋರುತ್ತೀರಾ? ಮನೆ ಕಳೆದುಕೊಂಡು ಬೀದಿಗೆ ಬಿದ್ದ ಸಾವಿರಾರು ಬಡ ಕನ್ನಡಿಗರಿಗಿಲ್ಲದ ನ್ಯಾಯ, ವಲಸಿಗರಿಗೆ ಮಾತ್ರವೇಕೆ? ಎಂದು ಬಿಜೆಪಿ ಮಾಧ್ಯಮದಲ್ಲಿ ಪ್ರಶ್ನೆಗಳ ಸುರಿಮಳೆಗೈದಿದೆ. ಕನ್ನಡಿಗರ ಹಿತ ಕಾಯಬೇಕಾದ ಸರ್ಕಾರಕ್ಕೆ ನೆರೆಯ ರಾಜ್ಯದವರ ಒತ್ತಡವೇ ದೊಡ್ಡದಾಯಿತೇ? ದಶಕಗಳಿಂದ ಸ್ವಂತ ಸೂರಿಲ್ಲದೆ ಕಾಯುತ್ತಿರುವ ಲಕ್ಷಾಂತರ ಬಡ ಕನ್ನಡಿಗರನ್ನು ಕಡೆಗಣಿಸಿ, ಕಾನೂನುಬಾಹಿರವಾಗಿ ಒತ್ತುವರಿ ಮಾಡಿದವರಿಗೆ ‘ವಿಶೇಷ ಆತಿಥ್ಯ’ ನೀಡುತ್ತಿರುವುದು ನಾಚಿಕೆಗೇಡು ಎಂದಿರುವ ಬಿಜೆಪಿ, ತಕ್ಷಣವೇ ಈ ವಿಶೇಷ ಪುನರ್ವಸತಿ ತೀರ್ಮಾನವನ್ನು ಹಿಂಪಡೆಯಿರಿ. ಕಾನೂನು ಎಲ್ಲರಿಗೂ ಒಂದೇ ಆಗಿರಲಿ ಮತ್ತು ನಮ್ಮ ನೆಲದ ಬಡವರಿಗೆ ವಸತಿ ಯೋಜನೆಗಳಲ್ಲಿ ಮೊದಲ ಆದ್ಯತೆ ಸಿಗಲಿ ಎಂದು ಸಲಹೆ…
