60% ಕಮಿಷನ್‌ ಆರೋಪ; ಸಿದ್ದುಗೆ ಬಿಜೆಪಿ ಗುದ್ದು

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ 40% ಕಮೀಷನ್ ಆರೋಪ ಬಗ್ಗೆ ಅಭಿಯಾನ ನಡೆಸಿ ಗೆದ್ದು ಬಂದ ಸಿದ್ದರಾಮಯ್ಯ ಅವರಿಗೆ ಇದೀಗ ತಾವು ಬಿಟ್ಟ ಬಾಣವೇ ತಿರುಗಿ ಬಂದಂತಾಗಿದೆ. ಗುತ್ತಿಗೆದಾರರು ಬರೆದಿರುವ ಪತ್ರವನ್ನು ಮುಂದಿಟ್ಟು ಪ್ರತಿಪಕ್ಷ ಬಿಜೆಪಿ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ 60% ಕಮಿಷನ್‌ ಆರೋಪ ಬಗ್ಗೆ ಅಭಿಯಾನ ಆರಂಭಿಸಿದಂತಿದೆ. ಈ ಕುರಿತಂತೆ ಬಿಜೆಪಿಯು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಕಮಿಷನ್‌ ಕಳ್ಳಾಟ ಭರ್ಜರಿಯಾಗಿ ನಡೆಯುತ್ತಿದೆ. ಗುತ್ತಿಗೆದಾರರ ಸಂಘವೇ ಮುಖ್ಯಮಂತ್ರಿಗಳಿಗೆ ಪತ್ರ ಬರೆದು 60% ಕಮಿಷನ್‌ ಆರೋಪವನ್ನು ಅಧಿಕೃತಗೊಳಿಸಿದೆ’ ಎಂದು ಬಿಜೆಪಿ ಬರೆದುಕೊಂಡಿದೆ.

ಈ ಹಿಂದೆ ವಿಪಕ್ಷದಲ್ಲಿದ್ದಾಗ ಸುಳ್ಳು ಆರೋಪ ಮಾಡಿ Pay-CM ಅಭಿಯಾನ ನಡೆಸಿದ್ದ ಕಾಂಗ್ರೆಸ್ ನಾಯಕರಿಗೆ ಅದೇ ತಿರುಗುಬಾಣವಾಗಿದೆ. ಭ್ರಷ್ಟಾಚಾರವನ್ನೇ ಆಡಳಿತ ಎಂದುಕೊಂಡು ಗುತ್ತಿಗೆದಾರರಿಂದ 60% ಕಮಿಷನ್‌ ಪೀಕುತ್ತಿದ್ದಾರೆ. ಅಭಿವೃದ್ಧಿ ಮರೀಚಿಕೆಯಾಗಿರುವ ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ರಾರಾಜಿಸುತ್ತಿದೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ.

Related posts