ಬೆಂಗಳೂರು: ಕರಾವಳಿ ಮಲೆನಾಡಿನಲ್ಲಿ ಭಾರೀ ಮಳೆಯಾಗಿದ್ದು ಹಳ್ಳ ಕೋಲ್ಲ್ಗಳು ತುಂಬಿ ಹರಿಯುತ್ತಿವೆ. ಚಿಕ್ಕ ಮಗಳೂರು ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗಿದ್ದು ಎಲ್ಲಾ ನದಿಗಳೂ ತುಂಬಿ ಹರಿಯುತ್ತಿವೆ.
ಈ ಬಾರಿಯ ವರ್ಷಧಾರೆಯಿಂದಾಗಿ ಯಗಚಿ ಜಲಾಶ ಕೂಡಾ ಜಲ ಶ್ರೀಮಂತಿಕೆಯಿಂದ ಕಂಗೊಳಿಸುತ್ತಿದೆ.ಭರ್ತಿಯಾಗಿರುವ ಯಗಚಿ ಜಲಾಶಯಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ಹಾಗೂ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ ಗೋಪಾಲಯ್ಯ ಅವರು ಬಾಗಿನ ಸಮರ್ಪಿಸಿದರು. ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.