ಮನೋರಂಜನೆಯ ಮಜಲಲ್ಲಿ ಮತ್ತೆ ‘ಬಣ್ಣ ಬಣ್ಣದ ಬದುಕು’

ದಶಕಗಳ ಹಿಂದೆ ತೆರೆಕಂಡ ಗಿರೀಶ್ ಕಾಸರವಳ್ಳಿಯವರ ‘ಬಣ್ಧದ ವೇಷ’ ಸಿನಿಮಾ ಸ್ಯಾಂಡಲ್‌ವುಡ್ ಜಗತ್ತಲ್ಲಿ ಹೆಗ್ಗುರುತು. ಅದನ್ನು ಮೆಲುಕು ಹಾಕುತ್ತಾ ಸಾಗಿದರೆ ಮತ್ತೆ ಮನಸಿನಂಗಳಕ್ಕೆ ಸಮೀಪವಾಗುವುದೇ ‘ಬಣ್ಣಬಣ್ಣದ ಬದುಕು’ ಚಿತ್ರ. ಇದು ಯಕ್ಷಗಾನದ ಒಳನೋಟ ಮತ್ತು ಕಲಾವಿದನ ಕುಟುಂಬದ ಅಸಹಯಕತೆಯನ್ನು ಜಗತ್ತಿಗೆ ಸಾರಿದ ಚಿತ್ರ.

‘ಬಣ್ಣ ಬಣ್ಣದ ಬದುಕು’ ಬೆಳ್ಳಿತೆರೆಯಲ್ಲಿನ ದಾಖಲೆಗಳನ್ನು ಚಿಂದಿ ಮಾಡಿಲ್ಲವಾದರೂ ವಿಮರ್ಶಕರ ಕಡೆಯಿಂದಂತೂ ಗರಿಷ್ಠ ಅಂಕವನ್ನು ಪಡೆದಿದೆ. ಈ ಯಶಸ್ಸಿನ ಗುಟ್ಟೇ ‘ಇಸ್ಮಾಯಿಲ್ ಮೂಡುಶೆಡ್ಡೆ’

ರಹಸ್ಯದ ಬೆನ್ನತ್ತಿದಾಗ..!!

ಏನಿದು ಈಗ ಮತ್ತೆ ‘ಬಣ್ಣದ ಬದುಕಿನ’ ವಿಷಯ ಅಂತೀರ..? ಇದಕ್ಕೆ ಕಾರಣವೂ ಇದೆ. ಅದ್ಧೂರಿ ಕಮರ್ಷಿಯಲ್ ಸಿನಿಮಾಗಳ ಮುಂದೆ ಸುಂದರ ಕಥಾನಕದ ಸಿನಿಮಾಗಳಿಗೆ ಥಿಯೇಟರ್‌ಗಳು ಕೊಕ್ ನೀಡುವುದು ಅಚ್ಚರಿಯ ವಿಚಾರವೇನಲ್ಲ. ಕ್ರಿಯಾಶೀಲ ನಿರ್ದೇಶಕನ ಗರಡಿಯಲ್ಲು ಪ್ರತಿಭಾನ್ವಿತ ತಾರೆಯರು ಬಣ್ಣ ಹಚ್ಚಿರಿವ ಈ ಸಿನಿಮಾವೂ ನಿಗೂಢ ಲಾಭಿಯಿಂದಾಗಿ ಅಲ್ಪ ಸಮಯದಲ್ಲೇ ಥಿಯೇಟರ್‌ಗಳಿಂದ ಎತ್ತಂಗಡಿಯಾಗಿತ್ತು. ಅದರೆ ಟಿವಿ ರೈಟ್ಸ್ ವಿಚಾರದಲ್ಲಿ ಮಾತ್ರ ಮೇಲ್ಪಂಕ್ತಿಯಲ್ಲೇ ಇತ್ತು. ಅಷ್ಟೇ ಅಲ್ಲ, ಒಟಿಟಿ ಸಂಸ್ಥೆಗಳೂ ಇದನ್ನು ಖರೀದಿಸಲು ಮುಗಿಬಿದ್ದವು. ಆದರೆ ಕೊನೆಗೂ ಇದು ಸೇರಿದ್ದು ಮಾತ್ರ ‘V4Stream’ ಗರಡಿಯನ್ನು. ಅರ್ಥಾತ್, ‘ಬಣ್ಣ ಬಣ್ಣದ ಬದುಕು’ ಚಿತ್ರ ಇದೀಗ V4 ಒಟಿಟಿಯಲ್ಲಿ ಸಿಗುತ್ತಿವೆ.

ಅಮೇಜಾನ್ ಪ್ರೈಮ್‌ಗೆ ಪ್ರಾದೇಶಿಕ ಮಟ್ಟದಲ್ಲಿ ಪೈಪೋಟಿಗಿಳಿಯಲು ಸನ್ನದ್ಧವಾಗಿರುವ ‘V4Stream’ ತನ್ನ ಹಿಟ್ ಸಿನಿಮಾಗಳ, ಕಿರು ಚಿತ್ರಗಳ ಪಂಕ್ತಿಯಲ್ಲೇ ಈ ಸಿನಿಮಾವನ್ನೂ ನೋಡುಗರಿಗಾಗಿ ಪ್ರದರ್ಶನಕ್ಕಿಟ್ಟಿದೆ.

ಏನಿದು ‘ಬಣ್ಣ’ದ ಕಥೆ ಗೊತ್ತಾ?

ಕರಾವಳಿಯ ಗಂಡು ಕಲೆ ಯಕ್ಷಗಾನಕ್ಕೆ ಜಾತಿಯ ಸೀಮೆ ಇಲ್ಲ. ಆದರೆ ಮುಸ್ಲಿಂ ಯುವಕನೊಬ್ಬ ಯಕ್ಷಪಟುವಾಗುವುದಕ್ಕೆ ಸಮುದಾಯದ ವಿರೋಧ. ಆ ವೈರುದ್ಯವನ್ನು ಸಹಿಸುತ್ತಲೇ ಆ ಯುವಕ ಮೇರು ಯಕ್ಷ ಕಲಾವಿದನಾಗುವುದು. ಇದನ್ನು ಸಹಿಸಲಾಗದ ಆತನ ಸಮುದಾಯ ಆತನ ಕುಟುಂಬವನ್ನೇ ಇಕ್ಕಟ್ಟಿಗೆ ಸಿಲುಕಿಸುವುವುದು .. ಹೀಗೆ ಸವಾಲುಗಳ ಮಜಲುಗಳನ್ನು ಕ್ರಮಿಸಿ ಸಾಗುವ ಬಣ್ಣದ ಬದುಕೇ ಈ ಸಿನಿಮಾದ ಥ್ರಿಲ್.

ಮೂವೀ ನೋಡಲು ಈ ಫೊಟೋ ಕ್ಲಿಕ್ ಮಾಡಿ..

ಇಸ್ಮಾಯಿಲ್ ಮೂಡುಶೆಡ್ಡೆ ನಿರ್ದೇಶನದ ಈ ಚಿತ್ರದಲ್ಲಿ ಮುಂಬೈ ಮೂಲದ ಮೋಡೆಲ್ ರವಿರಾಜ್ ಶೆಟ್ಟಿ ನಾಯಕ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸತ್ಯಜಿತ್, ಹೊನ್ನವಳ್ಳಿ ಕೃಷ್ಣ ಮೊದಲಾದ ಖ್ಯಾತ ಕಲಾವಿದರೂ ತೆರೆ ಹಂಚಿಕೊಂಡಿದ್ದಾರೆ. ಹೆಸರಾಂತ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಕಾಟ ಸಿರಿಯ ‘ದೀಪದ ಬೆಳಕೇ’ ಹಾಡು ಹಾಗೂ ಮುಸ್ಲಿಂ ಮಾಡುವೆ ಸನ್ನಿವೇಶದ ಮೆಹಂದಿ ಈ ಸಿನಿಮಾದ ಜೀವಾಳ. ‘V4Stream’ Appನಲ್ಲಿ ಮಾತ್ರ ಈ ಸಿನಿಮಾ ಲಬ್ಯವಿದೆ.

ಇದನ್ನೂ ಓದಿ.. ಕರಾವಳಿ ಪಾತಕಿಯ ಬದುಕಿಗೆ ಹಾಸ್ಯರೂಪ; ‘ಕೋರಿ ಮಂಜೆ’ ಹೊಸ ಅವತಾರ ಸೃಷ್ಟಿಯ ಅಚ್ಚರಿ

 

Related posts