ಬೆಂಗಳೂರು: ಗಾಂಧಿ ಜಯಂತಿ ಅಂಗವಾಗಿ ಪಾಲಿಕೆ ಸಹಯೋಗದಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ವಿಧಾನಸೌಧದಿಂದ ಮಹಾತ್ಮಗಾಂಧಿ ರಸ್ತೆ ಕಬ್ಬನ್ ಪಾರ್ಕ್ ವರೆಗೆ ಶಾಂತಿಗಾಗಿ ಸೈಕಲ್ ಜಾಥಾ ನಡೆಸಲಾಯಿತು.
ಪರಿಸರ ಸ್ನೇಹಿ ಸಂಚಾರ ಮತ್ತು ಸುರಕ್ಷತೆಗಾಗಿ ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೈಕಲ್ ಜಾಥಾ ನಡೆಸಲಾಯಿತು.
ಪಾಲಿಕೆ, ಬೆಂಗಳೂರು ಸ್ಮಾರ್ಟ್ ಸಿಟಿ ಮತ್ತು ಡಲ್ಟ್ ಸಹಯೋಗದಲ್ಲಿ ಮುಂಬರುವ ನವೆಂಬರ್ 1, 2020 ರ ವೇಳೆಗೆ 5 ಕಿಮಿ ಸೈಕಲ್ ಪಥ ನಿರ್ಮಾಣವಾಗಲಿದೆ. ಈ ವರ್ಷಾಂತ್ಯಕ್ಕೆ ಸೈಕಲ್ ಪಥವನ್ನು 25ಕಿಮಿ ವರೆಗೆ ವಿಸ್ತರಿಸುವ ಯೋಜನೆಯಿದೆ. ಸೈಕಲ್ ಬಳಕೆಯ ಮೂಲಕ ಕಸಮುಕ್ತ ರಸ್ತೆ, ಸಾರ್ವಜನಿಕ ಸ್ಥಳಗಳ ಸ್ವಚ್ಚತೆ, ಶಾಂತಿ-ಸೌಹಾರ್ಧ ಜಾಗೃತಿ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವುದು ಸೈಕಲ್ ಜಾಥ ಉದ್ದೇಶವಾಗಿದೆ.