ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಸಿಡಿದೆದ್ದಿವೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕೆರಳಿರುವ ಕನ್ನಡ ಸಂಘಟನೆಗಳು ಕರ್ನಾಟಕ ಬಂದ್’ಗೆ ಕರೆ ನೀಡುವ ಎಚ್ಚರಿಕೆ ನೀಡಿವೆ.
ಮರಾಠರಿಗಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸಿ 50 ಕೋಟಿ ರೊಪಾಯಿ ಅನುದಾನ ಘೋಷಿಸಿರುವ ಸರ್ಕಾರದ ತೀರ್ಮಾನ ವಿರುದ್ಧ ಕನ್ನಡ ಪರ ಸಂಘಟನೆಗಳು ಕೆಲವು ದಿನಗಳಿಂದ ಪ್ರಟಿಭಟನೆ ನಡೆಸುತ್ತಿವೆ. ಇದೀಗ ಈ ತೀರ್ಮಾನವನ್ನು ಹಿಂಪಡೆಯಲು ನವೆಂಬರ್ 27ರ ಗಡುವು ನೀಡಿರುವ ಕನ್ನಡ ಸಂಘಟನೆಗಳು, ಸರ್ಕಾರ ನಿರ್ಧಾರ ಹಿಂಪಡೆಯದೇ ಹೋದರೆ ಡಿ.5ರಂದು ಕರ್ನಾಟಕ ಬಂದ್ ನಡೆಸುವ ಚಿಂತನೆ ನಡೆಸಿವೆ.
ಈ ಬಗ್ಗೆ ಹೇಳಿಕೆ ನೀಡಿರುವ ವಾಟಾಳ್ ನಾಗರಾಜ್, ಕರ್ನಾಟಕದಲ್ಲಿ ಮರಾಠಿಗರ ಅಭಿವೃದ್ಧಿಗೆ ಪ್ರಾಧಿಕಾರ ರಚನೆ ಮಾಡಲು ಮುಂದಾಗಿರುವುದು ಕನ್ನಡಿಗರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ರಾಜ್ಯದಲ್ಲಿ ಮರಾಠ ಪ್ರಾಧಿಕಾರ ರಚನೆಯಾದರೆ ಕನ್ನಡಿಗರಿಗೆ ಅಂತ್ಯ ಹಾಡಿದಂತೆ ಎಂದು ಹೇಳಿದ್ದಾರೆ. ನವೆಂಬರ್ 27ರೊಳಗೆ ಸರ್ಕಾರ ತನ್ನ ನಿರ್ಧಾರವನ್ನು ವಾಪಸ್ ಪಡೆಯದಿದ್ದರೆ ಡಿಸೇಂಬರ್ 5ರಂದು ಕರ್ನಾಟಕ ಬಂದ್ ನಡೆಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.