ಬೆಂಗಳೂರು: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕೆಲವು ತಿಂಗಳ ಕಾಲ ಚಾಲಕರನ್ನು ಭೌತಿಕವಾಗಿ ತಡೆದು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ಪೊಲೀಸರು ದಾಖಲು ಮಾಡುತ್ತಿರಲಿಲ್ಲ. ಇದನ್ನೇ ಗಮನಿಸಿ ಸಾರ್ವಜನಿಕರು ಪರಿಸ್ಥಿತಿಯನ್ನು ದುರುಪಯೋಗಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಕಠಿಣ ಕಾರ್ಯಾಚರಣೆಗೆ ಇಳಿದಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ, ತನ್ನ ಸಹೋದ್ಯೋಗಿಗಳಿಗೆ ಖಡಕ್ ಆರೇಶವನ್ನು ನೀಡಿ ನಿಸ್ಪಕ್ಷಪಾತ ಕಾರ್ಯಾಚರಣೆಗೆ ಸೂಚಿಸಿದ್ದಾರೆ.
ಜಂಟಿ ಆಯುಕ್ತರ ಸೂಚನೆಯಂತೆ ಬೆಂಗಳೂರಿನ ಎಲ್ಲೆಡೆ ಸಂಚಾರ ವಿಭಾಗದ ಪೊಲೀಸರು ನಿಷ್ಠುರ ಕಾರ್ಯಾಚರಣೆಗಿಳಿದಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬೆಂಗಳೂರು ಟ್ರಾಫಿಕ್ ಪೊಲೀಸರು ಒಂದೇ ವಾರದಲ್ಲಿ ಭಾರಿ ಮೊತ್ತದ ದಂಡ ವಸೂಲಿ ಮಾಡಿದ್ದಾರೆ.
ವಾರದಲ್ಲಿ ಬರೋಬ್ಬರಿ 3.34 ಕೋ ರೂ ದಂಡ
ನವೆಂಬರ್ ಕೊನೆಯ ವಾರದಲ್ಲಿ ಅಂದರೆ ನವೆಂಬರ್ 23ರಿಂದ 29ರವರೆರಗೆ ಬರೋಬ್ಬರಿ 79,359 ಪ್ರಕರಣಗಳನ್ನು ಪತ್ತೆ ಮಾಡಿರುವ ಪೊಲೀಸರು, ಈ ವಧಿಯ್ಲಲಿ ಬರೋಬ್ಬರಿ 3 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತದ ದಂಡವನ್ನು ಸಂಚಾರಿ ಪೊಲೀಸರು ಸಂಗ್ರಹಿಸಿದ್ದಾರೆ.
- ಹೆಲ್ಮೆಟ್ ಧರಿಸದ 26,118 ಪ್ರಕರಣ
- ಸಿಗ್ನಲ್ ಜಂಪ್ ಮಾಡಿರುವ ಬಗ್ಗೆ 8,635 ಪ್ರಕರಣ
- ನೋ ಎಂಟ್ರಿ ಬಗ್ಗೆ 3,877 ಪ್ರಕರಣ