ಮಂಗಳೂರು: ಷಷ್ಠಿ ಹಿನ್ನೆಲೆಯಲ್ಲಿ ಕರಾವಳಿಯ ದೇವಾಲಯಗಳಲ್ಲಿ ವಿಶೇಷ ಮಹೋತ್ಸವ ನೆರವೇರಿತು. ಬಂಟ್ವಾಳ ಸಮೀಪದ ರಾಯಿಯ ಪ್ರಸಿದ್ಧ ಕ್ಷೇತ್ರ ಬದನಡಿಯಲ್ಲಿ ಸುಮಾರು 800 ವರ್ಷಗಳ ಹಿನ್ನೆಲೆ ಹೊಂದಿರುವ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವ ಸಂಭ್ರಮ ಸಡಗರದಿಂದ ನೆರವೇರಿತು.
ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ತಂತ್ರಿ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನ ನೆರವೇರಿಸಿತು. ದೇವರಿಗೆ ಸ್ಕಂದ ಯಾಗ, ಸಾಮೂಹಿಕ ಆಶ್ಲೇಷ ಬಲಿ, ಪಲ್ಲಕಿ ಉತ್ಸವ ಸಹಿತ ದೇವರ ಬಲಿ ಉತ್ಸವ, ಮಹಾಪೂಜೆಯಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು. ಪ್ರಧಾನ ಅರ್ಚಕ ಕೆ.ಸುಂದರ ರಾವ್, ಆಡಳಿತಾಧಿಕಾರಿ ನವೀನ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಪ್ರಕಾಶ ಕುಮಾರ್ ಜೈನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಪ್ರಮುಖರಾದ ಜಗದೀಶ ಕೊಯಿಲ, ರಶ್ಮಿತ್ ಶೆಟ್ಟಿ ಕೈತ್ರೋಡಿ, ರವೀಂದ್ರ ಪೂಜಾರಿ, ನಾಗೇಶ ರಾವ್, ಮೋಹನ್ ಕೆ.ಶ್ರೀಯಾನ್ ಕೈತ್ರೋಡಿ, ದಿನೇಶ ಸುವರ್ಣ ಕುದ್ಕೋಳಿ ಮೊದಲಾದವರು ಭಾಗವಹಿಸಿದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ, ಬಿಜೆಪಿ ಘಟಕ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಜಿಲ್ಲಾ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಸಂತ ಕುಮಾರ್ ಅಣ್ಣಳಿಕೆ, ಅಕ್ರಮ ಸಕ್ರಮ ಸಮಿತಿ ಸದಸ್ಯ ರಮಾನಾಥ ರಾಯಿ, ತಾ.ಪಂ.ಸದಸ್ಯೆ ಮಂಜುಳಾ ಸದಾನಂದ ಮೊದಲಾದವರು ಈ ಉತ್ಸವ ಕೈಂಕರ್ಯವನ್ನು ಸಾಕ್ಷೀಕರಿಸಿದರು.
ರಾತ್ರಿ ಪರಿವಾರ ದೈವ ರಕ್ತೇಶ್ವರಿ, ಮೈಸಂದಾಯ, ಕಲ್ಲುರ್ಟಿ, ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ಕೂಡಾ ಶ್ರದ್ದಾ ಭಕ್ತಿಯಿಂದ ನೆರವೇರಿತು.