ಬೆಂಗಳೂರು: ಯಡಿಯೂರಪ್ಪ ಸಂಪುಟಕ್ಕೆ 7 ಮಂದಿ ಸೇರ್ಪಡೆಯಾಗಿದ್ದು ಇದೀಗ ರಾರಿಗೆ ಯಾವ ಖಾತೆ ಎಂಬ ಲೆಕ್ಕಾಚಾರ ಸಾಗಿದೆ. ಆದರೆ ತಕ್ಷಣಕ್ಕೆ ಈ ನೂತನ ಸಚಿವರಿಗೆ ಖಾತೆಗಳನ್ನು ಯಡಿಯೂರಪ್ಪ ಅವರು ಹಂಚಿಕೆ ಮಾಡಿಲ್ಲ. ಈ ನಡುವೆ ನೂತನ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ
ಸಚಿವರಿಗೆ ಹಂಚಿಕೆ ಮಾಡಲಾದ ಕೊಠಡಿಗಳ ಸಂಖ್ಯೆ ಹೀಗಿದೆ:
- ಎಸ್ ಅಂಗಾರ: ವಿಧಾನಸೌಧ – ಕೊಠಡಿ ಸಂಖ್ಯೆ 252, 253ಎ
- ಅರವಿಂದ್ ಲಿಂಬಾವಳಿ: ವಿಧಾನಸೌಧ – ಕೊಠಡಿ ಸಂಖ್ಯೆ 344,344ಎ
- ಸಿ.ಪಿ. ಯೋಗೇಶ್ವರ್: ವಿಧಾನಸೌಧ – ಕೊಠಡಿ ಸಂಖ್ಯೆ 336, 336ಎ
- ಮುರುಗೇಶ್ ನಿರಾಣಿ: ವಿಧಾನಸೌಧ – ಕೊಠಡಿ ಸಂಖ್ಯೆ 307, 307ಎ
- ಆರ್ ಶಂಕರ್: ವಿಧಾನಸೌಧ – ಕೊಠಡಿ ಸಂಖ್ಯೆ 305, 305ಎ
- ಎಂಟಿಬಿ ನಾಗರಾಜ್: ವಿಧಾನಸೌಧ – ಕೊಠಡಿ ಸಂಖ್ಯೆ 330, 330ಎ
ಇನ್ನೊಂದೆಡೆ ಖಾತೆಗಳನ್ನು ಪಡೆಯಲೂ ನೂತನ ಸಚಿವರು ಲಾಭಿ ನಡೆಸುತ್ತಿದ್ದಾರೆನ್ನಲಾಗಿದೆ. ಬೆಂಗಳೂರು ನಗರಾಭಿವೃದ್ಧಿ, ಇಂಧನ, ಅಬಕಾರಿ ಖಾತೆಗಳ ಮೇಲೆ ಹಲವಾರು ಕಣ್ಣಿಟ್ಟಿದ್ದಾರೆ. ಈ ಅಪಿಕಿ ಬೆಂಗಳೂರು ಅಭಿವೃದ್ಧಿ ಇಲಾಖೆ ಅರವಿಂದ ಲಿಂಬಾವಲಿಗೆ ಸಿಗುವ ಸಾಧ್ಯತೆಗಳಿದ್ದು, ಮುರುಗೇಶ್ ನಿರಾಣಿಯವರಿಗೆ ಇಂಧನ ಖಾತೆ ಹಂಚಿಕೆಯಾಗುವ ಸಂಭವವಿದೆ ಎನ್ನಲಾಗುತ್ತಿದೆ.
ಸಂಭವನೀಯ ಖಾತೆಗಳ ವಿವರ ಹೀಗಿದೆ.
- ಎಸ್ ಅಂಗಾರ: ಕನ್ನಡ ಮತ್ತು ಸಂಸ್ಕೃತಿ
- ಅರವಿಂದ್ ಲಿಂಬಾವಳಿ: ಬೆಂಗಳೂರು ಅಭಿವೃದ್ಧಿ
- ಸಿ.ಪಿ. ಯೋಗೇಶ್ವರ್: ಯುವಜನ ಮತ್ತು ಕ್ರೀಡೆ
- ಮುರುಗೇಶ್ ನಿರಾಣಿ: ಇಂಧನ
- ಉಮೇಶ್ ಕತ್ತಿ: ಪ್ರವಾಸೋದ್ಯಮ
- ಆರ್ ಶಂಕರ್: ಅಬಕಾರಿ
- ಎಂಟಿಬಿ ನಾಗರಾಜ್: ಹಿಂದುಳಿದ ವರ್ಗಗಳ ಕಲ್ಯಾಣ