ಉದ್ಯೋಗದಾತ ಗೋವಿಂದ ಬಾಬು ಪೂಜಾರಿ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

ಉಡುಪಿ: ಈವರೆಗೂ ಸಾಂಪ್ರದಾಯಿಕ ಗೇರು ಉತ್ಪನ್ನಗಳಿಂದ ದೇಶದ ಗಮನಸೆಳೆಯುತ್ತಿದ್ದ ಕರಾವಳಿ ಇನ್ನು ಮುಂದೆ ‘ಫಿಷ್ ವೇಪರ್ಸ್’ ಉತ್ಪನ್ನಗಳಿಂದಲೂ ಹೆಸರುವಾಸಿಯಾಗಲಿದೆ. ಅರಬ್ಬೀ ಸಮುದ್ರದಿಂದ ಹೇರಳವಾಗಿ ಸಿಗುತ್ತಿರುವ ಮತ್ಸ್ಯ ಸಂಪತ್ತನ್ನು ಆಹಾರವಾಗಿ ಬಳಸುತ್ತಿದ್ದ ಜನರಿಗೆ ಇನ್ನು ಮುಂದೆ ಅದರ ಮೌಲ್ಯವರ್ಧಿತ ಖಾದ್ಯಗಳೂ ಸಿಗಲಿದೆ. ಅರ್ಥಾತ್‌ ಫಿಷ್ ವೇಪರ್ಸ್ ಹಾಗೂ ಚಿಪ್ಸ್ ಸಹಿತ ಮೀನಿನಿಂದ ವಿವಿಧ ಖಾದ್ಯಗಳನ್ನು ತಯಾರಿಸುವ ಘಟಕ ಸ್ಥಾಪನೆಗೆ ಮುನ್ನುಡಿ ಬರೆಯಲಾಗಿದೆ.

ದೇಶದ ಹೆಸರಾಂತ ಆಹಾರೋದ್ಯಮಿ ಗೋವಿಂದ ಬಾಬು ಪೂಜಾರಿಯವರ ಸಾರಥ್ಯದಲ್ಲಿ ಉಡುಪಿ ಜಿಲ್ಲೆ ಬೈಂದೂರು ಸಮೀಪದ ಗೋಳಿಹೊಳೆ ಗ್ರಾಮದ ಎಲ್ಲೂರಿನಲ್ಲಿ ಮಂಗಳವಾರ ಕರಾವಳಿ ಜನರ ಮಹತ್ವಾಕಾಂಕ್ಷೆಯ ಮೀನಿನ ಮೌಲ್ಯವರ್ಧಿತ ಖಾದ್ಯಗಳ ಉತ್ಪನ್ನ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಮತ್ಸ್ಯ ಬಂಧನ ಹೆಸರಿನ ಸಂಸ್ಥೆ ಮೂಲಕ ದೇಶದಲ್ಲೇ ಮೊದಲೆಂಬಂತೆ ಈ ಉದ್ದಿಮೆ ಕಾರ್ಯರೂಪಕ್ಕೆ ಬರಲಿದೆ.

ಏನಿದು ಮತ್ಸ್ಯ ಬಂಧನ?

ChefTalk ಹೆಸರಲ್ಲಿ ಆಹಾರೋದ್ಯಮ ಕ್ಷೇತ್ರವನ್ನು ಮುನ್ನಡೆಸುತ್ತಿರುವ ಕರಾವಳಿ ಮೂಲದ ಗೋವಿಂದ ಬಾಬು ಪೂಜಾರಿಯವರು, ಕಡಲ ತೀರದಲ್ಲಿ ಹೇರಳವಾಗಿ ಸಿಗುವ ಮೀನಿನ ಸಂಪತ್ತನ್ನು ಬಳಸಿ, ಅದರಿಂದಲೇ ವಿವಿಧ ಖಾದ್ಯಗಳನ್ನು ತಯಾರಿಸಬಹುದು, ದೇಶವ್ಯಾಪಿ ಜನರಿಗೆ ಹೊಸರೀತಿಯ ತಿಂಡಿ ತಿನಿಸುಗಳನ್ನು ಪೂರೈಸಬಹುದು. ಜೊತೆಗೆ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸಬಹುದೆಂಬ ಸದುದ್ದೇಶದಿಂದ ‘ಮತ್ಸ್ಯ ಬಂಧನ’ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಇವರ ಪರಿಕಲ್ಪನೆಯ ಮೀನು ಚಿಪ್ಸ್, ವಿಭಿನ್ನ ವೇಫರ್ಸ್ ಸಹಿತ ವಿವಿಧ ತಿನಿಸುಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೆಲವು ತಿಂಗಳ ಹಿಂದೆಯೇ ಬಿಡುಗಡೆ ಮಾಡಿದ್ದಾರೆ. ಇದೀಗ ಅದೇ ತಿನಿಸುಗಳ ಉತ್ಪನ್ನ ಘಟಕ ಸ್ಥಾಪನೆಗೆ ಶಿಲಾನ್ಯಾಸ ನೆರವೇರಿಸಲಾಗಿದೆ.

ಅಪೂರ್ವ ಸನ್ನಿವೇಶ.‌.

‘ಮತ್ಸ್ಯಬಂಧನ’ ಸಂಸ್ಥೆಯ ಉತ್ಪಾದನಾ ಘಟಕದ ಶಿಲಾನ್ಯಾಸ ಸಮಾರಂಭ ಅನನ್ಯ ಹಾಗೂ ಅಪೂರ್ವ ಸನ್ಬಿವೇಶಕ್ಕೆ ಸಾಕ್ಷಿಯಾಯಿತು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಮೀನುಗಾರರು ಹಾಗೂ ಮತ್ಸ್ಯಪ್ರಿಯರ ಪಾಲಿಗೆ ಉತ್ಸವದ ಸಡಗರಕ್ಕೆ ಈ ಸನ್ನಿವೇಶ ಮೀಸಲಾದಂತಿತ್ತು.

ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ಅಣ್ಣಪ್ಪ ಹೆಗ್ಡೆ ಹಾಗೂ ಪುರೋಹಿತರ ಮಾರ್ಗದರ್ಶನದಂತೆ ಈ ಮಹಾತ್ವಾಕಾಂಕ್ಷಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಸಂಸದ ಬಿ.ವೈ.ರಾಘವೇಂದ್ರ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ, ಶಾಸಕರಾದ ಉಮಾನಾಥ ಕೋಟ್ಯಾನ್, ಸುಕುಮಾರ ಶೆಟ್ಟಿ, ಗೋಪಾಲ ಪೂಜಾರಿ, ಕರ್ನಾಟಕ ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ನಿಗಮದ ಎಂಡಿ ಎಂ.ಎಲ್.ದೊಡ್ಮನಿ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಉದ್ಯೋಗಾವಕಾಶದ ಹೆಗ್ಗುರಿ, ಹಾಗೂ ಸ್ವದೇಶಿ ಚಿಂತನೆ ಮೂಲಕ ಮೀನುಗಾರರು ಹಾಗೂ ಮತ್ಸ್ಯ ಪ್ರಿಯರ ನಡುವೆ ಉದ್ಯಮ ಸಂವವಹನ ಸಾಧಿಸಲು ಹೊರಟಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿಯವರ ಪರಿಶ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಹಾಗೂ ಇತರ ಗಣ್ಯರು ಕೊಂಡಾಡಿದರು. ಗೋವಿಂದ ಬಾಬು ಪೂಜಾರಿ ದಂಪತಿಯನ್ನು ಸನ್ಮಾನಿಸಿ ಅಭಿನಂದಿಸಿದರು.

Related posts