ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಇಂದಿನ ಬೆಂಗಳೂರು ಭೇಟಿ ನಿಜಕ್ಕೂ ಇಂದು ಅವಿಸ್ಮರಣೀಯ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉದ್ಯಾನನಗರಿಗೆ ಆಗಮಿಸಿದ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿತು.
ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ ಮೋದಿ ವಿಕಾಸಸೌಧ ಬಳಿ ಕನಕದಾಸ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ನೆರೆದಿದ್ದ ಜನರತ್ತ ಧಾವಿಸಿ ಕೈ ಬೀಸಿ ಆತ್ಮೀಯ ನಗು ಬೀರಿದರು. ನೆರೆದಿದ್ದ ಜನ ಸಮೂಹವು ‘ಮೋದಿ ಮೋದಿ’ ಎಂದು ಘೋಷಣೆ ಕೂಗಿ ಪ್ರಧಾನಿಗೆ ಜೈಕಾರ ಹಾಕಿತು..
ಪ್ರಧಾನಿಯವರು ತಮ್ಮ ಕಾರಿನ ಬಳಿ ನಿಂತು ಜನಸ್ತೋಮದತ್ತ ಕೈ ಬೀಸಿ ಶುಭ ಹಾರೈಸಿದರು. ಅಕ್ಕಪಕ್ಕ ರಸ್ತೆ ಬದಿ ನಿಂತಿದ್ದವರತ್ತ ದೃಷ್ಟಿ ಹಾಯಿಸಿ ತಮ್ಮನ್ನು ಸ್ವಾಗತಿಸಿದ ಬೆಂಗಳೂರು ಮಂದಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಧಾನಿ ಶ್ರೀ @narendramodi ಅವರು ವಿಧಾನಸೌಧದ ಕಾರ್ಯಕ್ರಮ ಮುಗಿಸಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕಾರಿನಿಂದ ಇಳಿದು ಕಾತುರದಿಂದ ಕಾಯುತ್ತಿದ್ದ 'ನಮೋ'ಭಿಮಾನಿಗಳತ್ತ ಕೈ ಬೀಸಿದ ಕ್ಷಣ ಅವಿಸ್ಮರಣೀಯ. ಜನಮನದ ನಾಯಕನನ್ನು ಕಂಡಾಗ ಆದ 'ನಮೋತ್ಸಾಹ' ವಿವರಿಸಲು ಪದಗಳೇ ಸಾಲದು.#KarnatakaWelcomesModi pic.twitter.com/L5R0EgeZO3
— BJP Karnataka (@BJP4Karnataka) November 11, 2022
ಈ ಸನ್ನಿವೇಶ ಬಗ್ಗೆ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ‘ಈ ಕ್ರಿಯಾಶೀಲ ಬೆಂಗಳೂರಿನ ಭೇಟಿಯನ್ನು ಅತ್ಯಂತ ಸ್ಮರಣೀಯವಾಗಿಸಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ.
ಈ ಕ್ರಿಯಾಶೀಲ ಬೆಂಗಳೂರಿನ ಭೇಟಿಯನ್ನು ಅತ್ಯಂತ ಸ್ಮರಣೀಯವಾಗಿಸಿದ್ದಕ್ಕೆ ಧನ್ಯವಾದಗಳು pic.twitter.com/z8I4bcBZzy
— Narendra Modi (@narendramodi) November 11, 2022