ಬೆಂಗಳೂರು: ರಾಜಧಾನಿ ಬೆಂಗಳೂರು ಇತಿಹಾಸದಲ್ಲೇ ಕರಾಳ ಎಂಬಂತೆ ಅಧ್ವಾನಕ್ಕೆ ಸಾಕ್ಷಿಯಾಗಿದೆ. ‘ಪ್ರಗತಿಯ ಪ್ರತಿಮೆ’ ಅನಾವರಣ ಮಾಡಿದ ಸರ್ಕಾರವು ಅಭ್ಯುದಯದ ಪಾಠ ಹೇಳಿಕೊಡುತ್ತಿರುವುದು ಕುರುಡರಿಗೆ ಇರಬಹುದೇನೋ ಎಂಬ ವ್ಯಂಗ್ಯದ ವ್ಯಾಖ್ಯಾನಗಳಿಗೆ ಉದ್ಯಾನ ನಗರಿ ಉದಾಹರಣೆಯಾಗುತ್ತಿದೆ.
ಬಿಬಿಎಂಪಿ ಅಧಿಕಾರಿಗಳನ್ನು ಹೇಳೋರಿಲ್ಲ ಕೇಳೋರಿಲ್ಲ. ಅಕ್ರಮಗಳ ಮಹಾಕೂಪವಾಗಿ ಬೆಂಗಳೂರು ಗಮನಸೆಳೆಯಲು ಈ ಅಧಿಕಾರಿಗಳೇ ಕಾರಣ? ಬೆಂಗಳೂರು ನಗರದಲ್ಲಿ ನಡೆದಿರುವ ಕಾಮಗಾರಿಗಳು ಕಳಪೆ ಮಟ್ಟದ್ದಾಗಿದೆ ಎಂಬ ಆರೋಪಗಳು ಪ್ರತಿಧ್ವನಿಸುತ್ತಿದ್ದರೂ ತಪ್ಪುಗಳನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗದಿರುವುದು ಬೊಮ್ಮಾಯಿ ಸರ್ಕಾರದ ಆಡಳಿತದ ವೈಫಲ್ಯವಲ್ಲದೆ ಮತ್ತಿನ್ನೇನೂ ಅಲ್ಲ ಎಂಬುದು ಸ್ವತಃ ಬಿಜೆಪಿ ನಾಯಕರದ್ದೇ ಮಾತು. ಸಾರ್ವಜನಿಕರಂತೂ ಸರಣಿ ಪ್ರಕರಣಗಳತ್ತ ಬೊಟ್ಟು ಮಾಡುತ್ತಲೇ ಇದ್ದಾರೆ.
ನಮಗೆ ಬಂದ ಮಾಹಿತಿ ಪ್ರಕಾರ ಇಡೀ ಬೆಂಗಳೂರಿನಲ್ಲಿ ಈ ರೀತಿ ಕಳಪೆ ಕಾಮಗಾರಿ ನಡೆಯುತ್ತಿದೆ. ಇಂದು ಹಾಕಿರುವ ಡಾಂಬರು ಕೈಯಲ್ಲೇ ಕಿತ್ತಬಹುದಾಗಿದೆ! @BBMPCOMM ಈ ಕಾಮಗಾರಿಗಳು #PayCM ಅಡಿ ಬರುತ್ತಾ!@CMofKarnataka pic.twitter.com/owfVXsgLm1
— GC ChandraShekhar (@GCC_MP) November 10, 2022
ಇದೇ ವೇಳೆ, ಬಿಜೆಪಿ ಸರ್ಕಾರವನ್ನು ಅಭಿವೃದ್ಧಿಯ ಸಂಕೇತ ಎಂಬಂತೆ ಪ್ರಚಾರ ಮಾಡುತ್ತಿರುವ ಸೋಷಿಯಲ್ ಮೀಡಿಯಾ ಶೂರರೂ ಬೆಂಗಳೂರಿನ ರಸ್ತೆಗಳ ವಿಚಾರದಲ್ಲಿ ಬಿಬಿಎಂಪಿಯ ಎದುರಾಳಿಗಳಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕಾಮಗಾರಿ ನಡೆದಿರುವ ಕಡೆ ಕಲ್ಲುಗಳು ಕಳಚಿಹೋಗಿವೆ, ಡಾಂಬರು ಎದ್ದುಹೋಗಿವೆ. ಪುಟ್ಟ ಮಕ್ಕಳೂ ಮುಖ್ಯಮಂತ್ರಿಗಳತ್ತಲೇ ಬೊಟ್ಟು ಮಾಡುತ್ತಿದ್ದಾರೆ.
ದಿನನಿತ್ಯದ ಗೋಳು…@CMofKarnataka @drashwathcn @BBMPCOMM @BJP4Karnataka @INCKarnataka @PMOIndia pic.twitter.com/q5MwO8yjkU
— Venky_Adiga (@Anchor_Venky) November 5, 2022
ಬೆಂಗಳೂರಿನ ‘ಗುಂಡಿ ಗಂಡಾಂತರ’ಗಳಿಗೆ ಬಲಿಯಾದವರ ಸಂಖ್ಯೆ ಒಂದೆರಡಲ್ಲ. ನೂರಾರು ಮಂದಿಯ ಸಾವಿಗೆ ಬಿಬಿಎಂಪಿ ಹೊಣೆಯಲ್ಲವೇ ಎಂಬ ಪ್ರಶ್ನೆಗಳು ಮಾರ್ಧನಿಸುತ್ತಲೇ ಇವೆ. ಹೀಗಾಗಿಯೇ ಬಿಬಿಎಂಪಿ ಎಂಬುದು ಮರಣ ಮೃದಂಗದ ಕೂಪ ಎಂದೇ ಗುರುತಾಗಿದೆ. ಈ ಅವಾಂತರಗಳ ನಡುವೆ ಕೆಲವು ದಿನಗಳ ಹಿಂದೆ ಹಲಸೂರು ಬಳಿ ರಸ್ತೆ ಗುಂಡಿಗೆ ಬಿದ್ದವರು ಸ್ಥಳದಲ್ಲೇ ಗಂಟೆಗಟ್ಟಲೆ ನಡೆಸಿದ ಪ್ರತಿಭಟನೆಯ ವೈಖರಿಯು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಬೆಂಗಳೂರಿನ ಹಲಸೂರಿನಲ್ಲಿನ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಸುಮಾರು ಅರ್ಧ ದಿನ ಬಿದ್ದ ಜಾಗದಲ್ಲೇ ಕುಳಿತು ಪ್ರತಿಭಟಿಸಿದ್ದಾರೆ.
ಮೋದಿ ಭೇಟಿಗಾಗಿ ತೇಪೆ ಹಾಕುವ ಸರ್ಕಾರ ಜನ ಸಾಯುತ್ತಿದ್ದರೂ ಗುಂಡಿ ಮುಚ್ಚುವುದಿಲ್ಲವೇಕೆ? ಜನರ ಹಿತ ಬಿಜೆಪಿಗೆ ಬೇಕಿಲ್ಲವೇ?
"ಮಾನ, ಮರ್ಯಾದೆ, ನಾಚಿಕೆ"
ಈ ಮೂರನ್ನೂ ಬಿಟ್ಟಿದೆ#TroubleEngineSarkara pic.twitter.com/hHnzRDgrTO— Gagan Yadav INC (@reachgaggan) November 12, 2022
ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಟೀಕೆಗಳಿಗೆ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ ಎಂಬುದೇ ದುರಾದೃಷ್ಟಕರ. ಈ ಅವಾಂತರ ಬಗ್ಗೆ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಮಾಡಿರುವ ಟ್ವೀಟ್ ಸರ್ಕಾರದ ರಹಸ್ಯವನ್ನು ಬೆತ್ತಲಾಗಿಸಿದೆ. ‘ಹೊಸ ಕಲ್ಲು ಬರುತ್ತೆ ಅಂತ ಹೇಳಿದ್ರು ಬರ್ಲಿಲ್ಲ. ಅದಕ್ಕೆ ಇದನ್ನೇ ಹಾಕಿ ಅಂತ ಹೇಳಿದ್ದಾರೆ” ಎಂಬ ಸ್ಥಳೀಯತ ಹೇಳಿಕೆಗಳನ್ನು ಮುಂದಿಟ್ಟ ಈ ನಾಯಕ, “ಬೆಂಗಳೂರಿನಲ್ಲಿ ಯಾವ ರೀತಿ ಕೆಲಸಗಳು ಆಗುತ್ತಿವೆ.? ಸಾಮಗ್ರಿಗಳು ಹೊಸ ಬಿಲ್..!” ಎಂದು ಒಗಟು ಒಗಟಾಗಿ ಟ್ವೀಟ್ ಮಾಡಿ ಸರ್ಕಾರವನ್ನು ಚುಚ್ಚಿದ್ದಾರೆ.
"ಹೊಸ ಕಲ್ಲು ಬರುತ್ತೆ ಅಂತ ಹೇಳಿದ್ರು ಬರ್ಲಿಲ್ಲ ಅದಕ್ಕೆ ಇದನ್ನೇ ಹಾಕಿ ಅಂತ ಹೇಳಿದ್ದಾರೆ", @BBMPCOMM ನೋಡಿ ಬೆಂಗಳೂರಿನಲ್ಲಿ ಯಾವ ರೀತಿ ಕೆಲಸಗಳು ಆಗುತ್ತಿವೆ ಅಂತ!
ಮಾನ್ಯ @CMofKarnataka ಹಳೆ ಸಾಮಗ್ರಿಗಳು ಹೊಸ ಬಿಲ್ #PayCM pic.twitter.com/hhdoiur1Is— GC ChandraShekhar (@GCC_MP) November 12, 2022
ಇದಕ್ಕೆ ಕಮೆಂಟ್ ಹಾಕಿರುವ ಪ್ರಜ್ಞಾವಂತರು ‘ಇದು ಬೆಂಗಳೂರಿನಲ್ಲಿ ಎಲ್ಲ ಬಡಾವಣೆಗಳಲ್ಲಿ ಕಂಡುಬರುತ್ತಿರುವ ಸರ್ವೇ ಸಾಮಾನ್ಯ ದೃಶ್ಯ .. ಹಳೇ ಕಲ್ಲುಗಳನ್ನೇ ದಿನವಿಡೀ ಪಾಪ ಕೂಲಿ ಕಾರ್ಮಿಕರ ಕೈಯಲ್ಲಿ ಕುಟ್ಟಿಸಿ ಕುಟ್ಟಿಸಿ .. ಈ ಅಧಿಕಾರಿಗಳೆಲ್ಲ ಹೊಸ ಕಲ್ಲಿನ ಬಿಲ್ ಹರಿಯುತ್ತಿದ್ದಾರೆ..’ ಎಂದು ಲೇವಡಿ ಮಾಡಿದ್ದಾರೆ.
ಇದು ಬೆಂಗಳೂರಿನಲ್ಲಿ ಎಲ್ಲ ಬಡಾವಣೆಗಳಲ್ಲಿ ಕಂಡುಬರುತ್ತಿರುವ ಸರ್ವೇ ಸಾಮಾನ್ಯ ದೃಶ್ಯ ..
ಹಳೆ ಕಲ್ಲುಗಳನ್ನೇ ದಿನವಿಡೀ ಪಾಪ ಕೂಲಿ ಕಾರ್ಮಿಕರ ಕೈಯಲ್ಲಿ ಕುಟ್ಟಿಸಿ ಕುಟ್ಟಿಸಿ .. ಈ ಅಧಿಕಾರಿಗಳೆಲ್ಲ ಹೊಸ ಕಲ್ಲಿನ ಬಿಲ್ ಹರಿಯುತ್ತಿದ್ದಾರೆ..
— Bhaskar (@bhaskarvh) November 12, 2022
ಕವನಗಳ ರೂಪದಲ್ಲೂ, ಪ್ರಾಸ ಪದಗಳ ಮೂಲಕವೂ ಬೆಂಗಳೂರು ಮಂದಿ ಸರ್ಕಾರದ ಬಗ್ಗೆ ಲೇವಡಿ ಮಾಡುತ್ತಿದ್ದರೂ ಅಧಿಕಾರಿಗಳು ಮಾತ್ರ ನಡೆಯನ್ನು ಸುಧಾರಿಸಿಲ್ಲ. ಕಳಪೆ ಎಂಬ ಹಳೇ ಚಾಳಿಯಿಂದ ದೂರ ಉಳಿಯಲೂ ಬಯಸಿಲ್ಲ.
ಕೋರ್ಟ್ ಗೆ ಕೂಡಾ ಮಕ್ಮಲ್ ಟೋಪಿ ಹಾಕೋಕೆ ಪ್ರಯತ್ನ ಮಾಡಿದೆ ಬಿಬಿಎಂಪಿ !
ಓವರ್ ಆಲ್ ಬೆಂಗಳೂರಿನ ವಿಷಯ ಹಂಗಿರಲಿ, ಇಡೀ ನಮ್ಮ ದಾಸರಹಳ್ಳಿ ಕ್ಷೇತ್ರದಲ್ಲಿ ಕನಿಷ್ಟ 2% ಗುಂಡಿ ಸಹ ಮುಚ್ಚಿಲ್ಲ. ಇನ್ನು 98% ? ಇದು ಬಹುಶಃ ಬಿಜೆಪಿಯ ಮುಂದಿನ ಕಮಿಷನ್ ಪರ್ಸಂಟೇಜ್ ಇರಬಹುದು.! #saycm #40PercentSarkara #pothole #puppetcm #bbmp pic.twitter.com/7VYw5XeGgU
— Dr Nagalakshmi | ಡಾ. ನಾಗಲಕ್ಷ್ಮಿ (@drnagalakshmi_c) November 5, 2022