ವಾರಣಾಸಿ: ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲಿನ ಮೊದಲ ಟ್ರಿಪ್ ನ ಯಾತ್ರಾರ್ಥಿಗಳನ್ನು ಹೊತ್ತಂತಹ ರೈಲು ಇಂದು ವಾರಣಾಸಿ ಗೆ ಬಂದು ತಲುಪಿತು. ಬನಾರಸ್ ರೈಲು ನಿಲ್ದಾಣದಲ್ಲಿ ಯಾತ್ರಾರ್ಥಿಗಳಿಗೆ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಬನಾರಸ್ನಲ್ಲಿ ಸ್ವಾಗತ ಕೋರಿದರು.
ಪ್ರಥಮ ಟ್ರಿಪ್ ನ ಯಾತ್ರಾರ್ಥಿಗಳು ತಮ್ಮನ್ನು ಸ್ವಾಗತಿಸಲು ಆಗಮಿಸಿದ್ದ ಸಚಿವರನ್ನು ಕಂಡು ಸಂತಸಗೊಂಡರು. ರೈಲು ಪ್ರಯಾಣ ದಲ್ಲಿ ಅವರಿಗೆ ಸಿಕ್ಕಂತಹ ಅತಿಥ್ಯದ ಬಗ್ಗೆ ಸಚಿವ ರಿಗೆ ಮಾಹಿತಿ ನೀಡಿದರು.
ಎರಡು ದಿನಗಳ ಕಾಲ ವಾರಣಾಸಿ ಯಲ್ಲಿ ವಾಸ್ತವ್ಯ ಹೂಡಲಿರುವ ಯಾತ್ರಾರ್ಥಿಗಳು ನಂತರ ಪ್ರಯಾಗರಾಜ್ ಮತ್ತು ಅಯೋಧ್ಯೆ ಗೆ ಭೇಟಿ ನೀಡಿ ನಂತರ ಬೆಂಗಳೂರಿಗೆ ವಾಪಸ್ ತೆರಳಲಿದ್ದಾರೆ.