ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಲ್ಲೆಗೆ ಆಗಮಿಸುತ್ತಿದ್ದು, ಪ್ರಧಾನಿಯನ್ನು ಸ್ವಾಗತಿಸಲು ಸಕ್ಕರೆ ನಾಡು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಸುಮಾರು 40 ವರ್ಷಗಳ ನಂತರ ದೇಶದ ಪ್ರಧಾನಿಯವರು ಮಂಡ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಎಂದೇ ಹೇಳಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದೆ ಸುಮಲತಾ ಅಂಬರೀಶ್, ಈ ಅಪೂರ್ವ ಸನ್ನಿವೇಶವನ್ನು ಸಾಕ್ಷೀಕರಿಸುವಂತೆ ಮಂಡ್ಯಾದ ಸ್ವಾಭಿಮಾನಿ ಜನರಲ್ಲಿ ಮನವಿ ಮಾಡಿರುವ ವೈಖರಿಯೂ ಗಮನಸೆಳೆದಿದೆ.
A great moment for my constituency #Mandya which will see a PM's visit after 41 years . Appealing to all my #Swabhimani #mandya people to be there early and make this event a showcase for our great district.#PMInMandya @narendramodi@PMOIndia @BJP4India @BJP4Karnataka https://t.co/ugk7WJwC8v
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) March 11, 2023
ವಿಧಾನಸಭಾ ಚುನಾವಣೆ ಎದುರಾಗಿರುವಂತೆಯೇ ಪ್ರಧಾನಿ ಮೋದಿಯವರ ಈ ಭೇಟಿ ಹಳೇ ಮೈಸೂರು ಭಾಗದಲ್ಲಿ ಸಂಚಲನ ಉಂಟುಮಾಡಿದೆ. ಪ್ರಧಾನಿಯವರ ಈ ಮಂಡ್ಯ ಭೇಟಿಯು ಬಿಜೆಪಿ ಪಾಲಿಗೆ ವರದಾನವಾಗಲಿದೆಯೇ ಎಂಬ ವಿಶ್ಲೇಷಣೆಯೂ ನಡೆದಿದೆ.
ಇದೇ ವೇಳೆ, ಪ್ರಧಾನಿಯವರನ್ನು ಸ್ವಾಗತಿಸಲು ಮಂಡ್ಯದಲ್ಲಿ ಉರಿಗೌಡ, ದೊಡ್ಡ ನಂಜೇಗೌಡರ ಹೆಸರಲ್ಲಿ ಸ್ವಾಗತ ಕಮಾನು ಹಾಕಲಾಗಿದೆ. ಟಿಪ್ಪು ಬಗ್ಗೆ ಕಾಂಗ್ರೆಸ್ ನಾಯಕರು ಒಲವು ಹೊಂದಿದ್ದಾರೆಂದು ಆರೋಪಿಸುತ್ತಿರುವ ಬಿಜೆಪಿ ನಾಯಕರು. ಟಿಪ್ಪು ಶ್ರೇಷ್ಟ ಅಲ್ಲ, ಮತಾಂಧನಾಗಿದ್ದ ಟಿಪ್ಪುನನ್ನು ವಧೆ ಮಾಡಿದ್ದ ಉರಿಗೌಡರು ಮತ್ತು ದೊಡ್ಡ ನಂಜೇಗೌಡರೇ ಶ್ರೇಷ್ಠ ಎಂದು ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಎದಿರೇಟು ನೀಡುತ್ತಿರುವ ಕಾಂಗ್ರೆಸ್ ನಾಯಕರು, ಉರಿಗೌಡರು ಮತ್ತು ದೊಡ್ಡ ನಂಜೇಗೌಡರು ಎಂಬ ಪಾತ್ರ ಬಿಜೆಪಿಯ ಸೃಷ್ಯೇ ಹೊರತು ಇತಿಹಾಸದಲ್ಲಿ ಇಲ್ಲ ಎಂದಿದ್ದಾರೆ.
ಈ ನಡುವೆ, ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಮಂಡ್ಯದಲ್ಲಿ ಉರಿಗೌಡ, ದೊಡ್ಡ ನಂಜೇಗೌಡರ ಹೆಸರಲ್ಲಿ ಹಾಕಲಾಗಿರುವ ಸ್ವಾಗತ ಕಮಾನು ಗಮನಸೆಳೆದಿದೆ. ಬಿಜೆಪಿ ನಾಯಕರ ಈ ಪ್ರಯತ್ನ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೂ ಕಾರಣವಾಗಿದೆ. ‘ಪ್ರಧಾನಿಯ ಸ್ವಾಗತಕ್ಕಾಗಿ ಕಪೋಲ ಕಲ್ಪಿತ ಪಾತ್ರಗಳಾದ ಉರಿಗೌಡ-ನಂಜೇಗೌಡ ಹೆಸರಿನ ಕಮಾನು ಹಾಕಿರುವುದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಮಂಡ್ಯಕ್ಕೆ ಮಾತ್ರವಲ್ಲ ಇಡೀ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ’ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ. ತಕ್ಷಣ ಮಧ್ಯೆ ಪ್ರವೇಶಿಸಿ ಈ ಸ್ವಾಗತ ಕಮಾನನ್ನು ಕಿತ್ತು ಹಾಕಿಸುವಂತೆ ಮುಖ್ಯಮಂತ್ರಿಯನ್ನು ಅವರು ಒತ್ತಾಯಿಸಿದ್ದಾರೆ.
ಆಗಲೆ ತಿ ಉರೀತಿದೆಯಾ
ಮುಂದಿದೆ ಮಾರಿ ಹಬ್ಬ
ಅಲ್ಪಸಂಖ್ಯಾತರ ಓಟ್ ಗಳಿಗಾಗಿ ಪರಾಕ್ರಮಿ ಗೌಡರನ್ನ ಮೂಲೆಗುಂಪು ಮಾಡಿ ಅವರಿಗೆ ಅವಮಾನ ಮಾಡಿದ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ಈ ಸಲದ ಚುಣಾವಣೆಯಲ್ಲಿ ಉರಿಗೌಡ ಮತ್ತು ನಂಜೇಗೌಡರ ಆತ್ಮಗಳು ಸರಿಯಾದ ಪಾಠ ಕಲಿಸುತ್ತವೆ
ಆ ಕಮಾನುಗಳನ್ನ ಮುಟ್ಟಿ ನೊಡಿ ಆಮೇಲೆನಾಗುತ್ತೊ ಯೊಚನೆ ಮಾಡಿ— ಸತ್ಯ-Sathya-ಮೊದಿಜಿ ಹಾಗೂ ಅಪ್ಪು ಅಭಿಮಾನಿ (@sathyanathkp) March 11, 2023
ಸಿದ್ದಾರಾಮಯ್ಯ ಅವರ ಆಕ್ರೋಶ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ‘ಉರಿಗೌಡರ ಬಗ್ಗೆ, ಕೆಲವರು ಉರ್ಕೊಂಡಿದ್ದಾರೆ’ ಎದುದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಸಿದ್ದರಾಮಯ್ಯತಿಗೆ ತಮ್ಮದೇ ದಾಟಿಯಲ್ಲಿ ಎದಿರೇಟು ನೀಡಿದ್ದಾರೆ.
ಬೆಂಗಳೂರು- ಮೈಸೂರು ದಶಪಥಕ್ಕೆ ಮಂಡ್ಯದಲ್ಲಿ ಉರಿಗೌಡ ಮತ್ತು ನಂಜೇಗೌಡರ ಹೆಸರಿನ ದ್ವಾರ ನೋಡಿ ಕೆಲವರಿಗೆ ಉರಿ ಹತ್ತಿಕೊಂಡಿದೆ. ದ್ವಾರ ತೆಗೆಸುವಂತೆ @siddaramaiah ಆಗ್ರಹಿಸಿದ್ದಾರೆ. ನರಹಂತಕ , ಧರ್ಮಾಂಧ ಟಿಪ್ಪುವನ್ನು ಸೆದೆಬಡಿದ ಮಂಡ್ಯದ ವೀರರಿಗೆ ನಾಡ ಗೌರವ ಸಿಗುವುದನ್ನೂ ಇವರಿಂದ ಸಹಿಸಲಾಗುವುದಿಲ್ಲ.
1/5 pic.twitter.com/yvrZwXO5rO
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) March 11, 2023
ಆದರೆ ಬಹಳಷ್ಟು ಮಂದಿ, ‘ಇಲ್ಲದ ಪಾತ್ರಗಳನ್ನು ಸೃಷ್ಟಿಸಿ ಒಕ್ಕಲಿಗರಿಗೆ ಅಪಮಾನ ಮಾಡಲಾಗಿದೆ’ ಎಂದು ಸಿಟ್ಟು ವ್ಯಕ್ತಪಡಿಸಿದ್ದಾರೆ.
ಮಂಡ್ಯ ಯಾವತ್ತೂ ಸಕ್ಕರೆ ನಗರ
ಅಲ್ಲಿಯ ಜನ ನೆಮ್ಮದಿಯಿಂದ ನೂರಾರು ವರ್ಷಗಳಿಂದ ಪ್ರೀತಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ.
ಈಗ ಸಕ್ಕರೆಗೆ ವಿಷ ತುಂಬುವ ಕೆಲಸ ಬೇಡ.
ತಮಿಳುನಾಡಿನ ವೀರರಾದ ಮರುದು ಪಾಂಡ್ಯರ್ ಸಹೋದರರನ್ನು ಎರವಲು ತಂದು ಇಲ್ಲದ ‘ಉರಿಗೌಡ, ನಂಜೇಗೌಡ’ರನ್ನು ಸೃಷ್ಟಿಸಿದ ವಾಟ್ಸಾಪ್ ವಿದ್ಯಾಲಯದ ಕಥೆ ಇಲ್ಲಿಗ್ ಬಂದ್ ನಿಂತಿದೆ 😃 pic.twitter.com/CK3ynpcaU3— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) March 11, 2023
ಈ ನಡುವೆ, ಮೋದಿ ಅವರನ್ನು ಸ್ವಾಗತಿಸಲು ಹಾಕಲಾಗಿದ್ದ ಉರಿಗೌಡ, ದೊಡ್ಡನಂಜೇಗೌಡರ ಹೆಸರಿದ್ದ ಕಮಾನು ರಾತ್ರೋ ರಾತ್ರಿ ಮಾಯವಾಗಿದೆ. ಸ್ಥಳೀಯ ಆಡಳಿತ ಈ ತೆರವು ಮಾಡಿದೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳ ಈ ಕ್ರಮಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆಯೂ ಕುತೂಹಲ ಮೂಡಿಸಿದೆ.
https://twitter.com/kantharaj553/status/1634753609333354496?t=sJ3HHn5-T_jChpMfwzlYgA&s=19