ಉಡುಪಿಯ ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ನೀಡಿದ್ದರು? ಮಿಥುನ್ ರೈಗೆ ನಟ ರಕ್ಷಿತ್ ಶೆಟ್ಟಿ ತರಾಟೆ.. ಗರಿಂದ ಕ್ಲಾಸ್

ಬೆಂಗಳೂರು: ಉಡುಪಿಯ ಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿ ನೀಡಿದ್ದರು ಎಂಬ ಕರಾವಳಿಯ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಹೇಳಿಕೆ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮಿಥುನ್ ರೈ ಹೇಳಿಕೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಮಿಥುನ್ ರೈ ಹೇಳಿಕೆಗೆ ಪೇಜಾವರ ಶ್ರೀಗಳೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಕಿರಿಕ್ ಪಾರ್ಟಿ ಖ್ಯಾತಿಯ ನಟ ರಕ್ಷಿತ್ ಶೆಟ್ಟಿ ಕೂಡಾ ಮಿಥುನ್ ರೈ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.‌ ಟ್ವೀಟ್ ಮಾಡಿರುವ ರಕ್ಷಿತ್ ಶೆಟ್ಟಿ, ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಮಾಹಿತಿ ಇಲ್ಲದಿದ್ದರೆ ಸಾರ್ವಜನಿಕ ವೇದಿಕೆಯಲ್ಲಿ ನಾನ್ ಸೆನ್ಸ್ ರೀತಿ ಮಾತಾಡುವುದು ಯಾಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ನಟ ರಕ್ಷಿತ್ ಶೆಟ್ಟಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ತಮ್ಮ ಇತಿಹಾಸದಲ್ಲಿ ಕೊಂಚ ತಪ್ಪಿದೆ. ಉಡುಪಿ ಮಠ 13ನೇ ಶತಮಾನದಲ್ಲಿ ಪ್ರಾರಂಭವಾಗಿದೆ. ಅದನ್ನು ಸಾವಿರಾರು ವರ್ಷ ಎಂದು ಹೇಳುವುದಿಲ್ಲ. ಎಂಟುನೂರು ವರುಷ ಎನ್ನುತ್ತಾರೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಹಾಕಿದ್ದಾರೆ.

ರಕ್ಷಿತ್ ಟ್ವೀಟ್‌ಗೆ ರಿಪ್ಲೈ ಮಾಡಿರುವ ಮತ್ತೊಬ್ಬರು, ‘ಜಾಸ್ತಿ ಯಾರಿಗೂ ಬಕೆಟ್ ಹಿಡಿಯೋಕೆ ಹೋಗ್ಬೇಡಿ ದೇವರು ಮೆಚ್ಚುವಂಥ ಕೆಲಸ ಮಾಡಿ ಅಷ್ಟು ಸಾಕು’ ಎಂದಿದ್ದಾರೆ.

ಈ ಕಮೆಂಟ್‌ನಿಂದ ಕುಪಿತರಾಗಿರುವ ರಕ್ಷಿತ್ ಶೆಟ್ಟಿ,  ಉಡುಪಿ ನನ್ನ ಹುಟ್ಟೂರು. ಬಕೆಟ್ ಅಲ್ಲ, ಟ್ಯಾಕರ್ ಹಿಡೀತೀನಿ…’ ಎಂದು ಎದಿರೇಟು ನೀಡಿದ್ದಾರೆ.

ಕಮೆಂಟ್ ವಿಚಾರದಲ್ಲೂ ತಮಾಷೆ..!?

ಇದೇ ವೇಳೆ, ‘ಪಾಪ ಇವನ ಗೆಳೆಯನಿಗೆ ಪ್ರಶಸ್ತಿ ಬಂತು ಈ ಮನುಷ್ಯನು ಟ್ರೈ ಮಾಡುತ್ತಿರಬೇಕು ಬಿಡು ಗುರು ಮುಂದಿನ ಸಿನಿಮಾಕ್ಕೆ ನಿನ್ನ ಆಯ್ಕೆ ಮಾಡುತ್ತಾರೆ ಜಾಸ್ತಿ ಬಕೆಟ್ ಹಿಡಿಯಬೇಡ’ ಎಂದು ಮತ್ತೊಬ್ಬರು ಪ್ರತಿಕ್ರಿಯಿಸುತ್ತಾ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇನ್ನೊಬ್ಬರು ‘ ಟ್ಯಾಂಕರ್ ಹಿಡಿಯೋಕೆ ಸದ್ಯಕ್ಕೆ ಯಾವುದು ಪ್ರಶಸ್ತಿ ಇಲ್ಲವಲ್ಲ ರಕ್ಷಿತ್ ಅವರೇ ಎಂದು ಪ್ರಶ್ನಿಸಿದ್ದರಲ್ಲದೆ, ‘ಬಕೆಟ್ ಆದ್ರೂ ಹಿಡೀರಿ, ಟ್ಯಾಂಕರ್ ಆದ್ರೂ ಹಿಡೀರಿ, ಸ್ವಲ್ಪ ಯೋಚನೆ ಮಾಡಿ ಹಿಡೀರಿ’ ಎಂದು ಸಲಹೆ ಮಾಡಿದ್ದಾರೆ.

 

Related posts