ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇರಬಹುದೆಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಬಿಜೆಪಿಗೆ ಸೇರಲು ಕಾನೂನು ತೊಡಕು ಇದೆ ಎಂದರು. ‘ನಾನು ಪಕ್ಷೇತರ ಸದಸ್ಯೆ ಆಗಿದ್ದೇನೆ. ಪಕ್ಷೇತರ ಸದಸ್ಯರು ಜಯಗಳಿಸಿದ 6 ತಿಂಗಳ ಒಳಗಡೆ ಸೇರಿದರೆ ಮಾತ್ರ ಅದು ಮಾನ್ಯವಾಗುತ್ತದೆ. ಈ ಕಾನೂನು ಸಮಸ್ಯೆ ಇರುವ ಕಾರಣ ನಾನು ಈಗ ಬಿಜೆಪಿ ಸೇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸದ್ಯಕ್ಕೆ ಬಿಜೆಪಿ ಸೇರಲ್ಲ, ಬಿಜೆಪಿಯನ್ನು ಬೆಂಬಲಿಸುತ್ತೇನೆ ಎಂದ ಅವರು, ಮಂಡ್ಯದ ಕಲುಷಿತ ರಾಜಕೀಯವನ್ನು ಸ್ವಚ್ಛಗೊಳಿಸಲು ಮೋದಿ ಅವರಿಗೆ ಬೆಂಬಲ ನೀಡುತ್ತೇನೆ ಎಂದರು.
ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ. ನಾನು ಭಾರತೀಯ ಎಂದು ತಲೆ ಎತ್ತುವಂತೆ ಮೋದಿ ಮಾಡಿದ್ದಾರೆ. ಮಂಡ್ಯ ಅಭಿವೃದ್ಧಿ ಆಗಿರಿವುದು ಬಿಜೆಪಿಯಿಂದ. ನನಗೂ ಬಿಜೆಪಿ ಬೆಂಬಲ ನೀಡಿದೆ. ಅಭಿವೃದ್ಧಿ ಆಗಬೇಕು ಅಂದರೆ ಬಿಜೆಪಿ ಬೇಕು. ಅದಕ್ಕೆ ನಾನು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬೆಂಬಲಿಸುತ್ತಿದ್ದೇನೆ ಎಂದು ತಿಳಿಸಿದರು.