ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೆ ಹಠಾತ್ ಬ್ರೇಕ್! ಕಾರಣ..

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಯುಗಾದಿಯಂದು ಅಭ್ಯರ್ಥಿಗಳ ನೊದಲ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ ಆ ಪ್ರಕ್ರಿಯೆಗೆ ದಿಢೀರ್ ಬ್ರೇಕ್ ಬಿದ್ದಿದೆ.

ಅಚ್ಚರಿಯ ನಿರ್ಧಾರದಲ್ಲಿ‌ ಕಾಂಗ್ರೆಸ್ ವರಿಷ್ಠರು ಮೊದಲ ಪಟ್ಟಿ ಬಿಡುಗಡೆ ದಿನಾಂಕವನ್ನು ಮುಂದೂಡಿದ್ದಾರೆ. 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಯುಗಾದಿ  ದಿನದಂದು ಬಿಡುಗಡೆ ಮಾಡುವುದಾಗಿ ಪಕ್ಷದ ಮುಖಂಡರು ತಿಳಿದಿದ್ದರು ಆದರೆ ಯುಗಾದಿ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಬಹುತೇಕ ಪತ್ರಿಕೆಗಳು ಮರುದಿನದ ಸಂಚಿಕೆಯನ್ನು ಪ್ರಕಟಿಸುವುದಿಲ್ಲ. ಹಾಗಾಗಿ ನೊದಲ ಪಟ್ಟಿಯನ್ನು ಬಿಡುಗಡೆ ದಿನಾಂಕವನ್ನು ಮುಂದೂಡಲು ಮುಖಂಡರು ನಿರ್ಧರಿಸಿದ್ದಾರೆ.

ಇದೇ ವೇಳೆ ಹಬ್ಬದಲ್ಲಿ ಭಾಗಿಯಾಗುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕೇಂದ್ರಸ್ಥಾನ ತೊರೆದಿದ್ದಾರೆ. ಹಾಗಾಗಿ ಅವರು ಎಐಸಿಸಿ ಕಚೇರಿಗೆ ಭೇಟಿ ನೀಡಿದ ನಂತರವಷ್ಟೇ ಈ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ

Related posts