ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂಪಾಯಿ ನೋಟು ಚಲಾವಣೆಯನ್ನು ಹಿಂಪಡೆಯುವ ನಿರ್ಧಾರ ಪ್ರಕಟಿಸಿರುವ ಕ್ರಮಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವು ಆತುರರದ ಕ್ರಮ ಕೈಗೊಂಡಿದೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.
ಇತ್ತ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಈ ನೋಟ್ ರದ್ದತಿ ಕ್ರಮದ ಬಗ್ಗೆ ತಮ್ಮದೇ ಶೈಲಿಯಲ್ಲಿ ವ್ಯಂಗ್ಯವಾಡಿದ್ದಾರೆ. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಕಾಂಗ್ರೆಸ್ ಇದೀಗ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಯಾರಿ ಸಿದ್ದತೆ ನಡೆಸಿದೆ. ಅದೇ ಸಂದರ್ಭದಲ್ಲಿ ನೋಟ್ ಚಲಾವಣೆಗೆ ಬ್ರೇಕ್ ಹಾಕುವ ನಿರ್ಧಾರ ಪ್ರಕಟಿಸಿರುವ ಬಗ್ಗೆ ರಮೇಶ್ ಬಾಬು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಮೇಶ್ ಬಾಬು, ‘ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಯಾರು ತಲೆ ಕೆಡಿಸಿದರೋ ಗೊತ್ತಿಲ್ಲ! 2000 ರೂ ನೋಟು ಬ್ಯಾನ್ ಮಾಡಿದರೆ KPCC ಗೃಹಲಕ್ಷ್ಮಿ ಯೋಜನೆ ತಡೆಯಬಹುದೆಂದು ಬ್ಯಾನ್ ಮಾಡಿದ್ದಾರೆ’ ಎಂದು ಟೀಕಿಸಿದ್ದಾರೆ. ‘ರಾಜ್ಯಸಭಾ ಸದಸ್ಯೆ ನಿರ್ಮಲಕ್ಕ ಅರ್ಜಿ ಹಾಕಿದರೆ ಪ್ರಿಯಾಂಕ ಗಾಂಧಿ ಶಿಫಾರಸ್ಸು ಮೂಲಕ 2ಸಾವಿರ ರೂಪಾಯಿ ಖಾತರಿ ಯೋಜನೆ ಅವರಿಗೂ ನೀಡೋಣ’ ಎಂದವರು ಕೆಣಕಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಯಾರು ತಲೆ ಕೆಡಿಸಿದರೋ ಗೊತ್ತಿಲ್ಲ! 2000 ರೂ ನೋಟು ಬ್ಯಾನ್ ಮಾಡಿದರೆ KPCC ಗೃಹಲಕ್ಷ್ಮಿ ಯೋಜನೆ ತಡೆಯಬಹುದೆಂದು ಬ್ಯಾನ್ ಮಾಡಿದ್ದಾರೆ!
ರಾಜ್ಯಸಭಾ ಸದಸ್ಯೆ ನಿರ್ಮಲಕ್ಕ ಅರ್ಜಿ ಹಾಕಿದರೆ ಪ್ರಿಯಾಂಕ ಗಾಂಧಿ ಶಿಫಾರಸ್ಸು ಮೂಲಕ 2ಸಾವಿರ ರೂಪಾಯಿ ಖಾತರಿ ಯೋಜನೆ ಅವರಿಗೂ ನೀಡೋಣ! #congress #aicc #media pic.twitter.com/KK3rS140Oc— Ramesh Babu (@RameshBabuKPCC) May 19, 2023