ದೊಡ್ಡಬಳ್ಳಾಪುರ. ಮಕ್ಕಳಿಗೆ ಸಾಮೂಹಿಕ ಅಕ್ಷರಾಭ್ಯಾಸ ಮಾಡಿಸುವ ಮೂಲಕ ದೊಡ್ಡಬಳ್ಳಾಪುರ ನಗರದ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ವರ್ಷದ ಮೊದಲ ದಿನ ತರಗತಿಗೆ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು.
ಮಕ್ಕಳ ಜೊತೆ ಕುಳಿತ ಪೋಷಕರು ಸ್ಲೇಟ್ನಲ್ಲಿ ತಮ್ಮ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು, ಮೊದಲ ಅಕ್ಷರವಾಗಿ ಮಕ್ಕಳು ಕನ್ನಡ ವರ್ಣಮಾಲೆಯ ‘ಅಆಇಈ’ಯನ್ನ ಸ್ಲೇಟ್ನಲ್ಲಿ ಬರೆದು ಶಾಸ್ತ್ರೋದಕವಾಗಿ ಶಾಲೆಯ ಮೊದಲ ದಿನ ಆರಂಭಿಸಿದರು.
ದೊಡ್ಡಬಳ್ಳಾಪುರದಲ್ಲಿ ಇದೇ ಮೊದಲ ಬಾರಿಗೆ ಅಕ್ಷರಾಭ್ಯಾಸ ಆಚರಣೆಯನ್ನ ಪ್ರಾರಂಭಿಸಲಾಗಿದೆ, ಈ ಬಗ್ಗೆ ಮಾತನಾಡಿದ ಶಾಲೆಯ ಕಾರ್ಯದರ್ಶಿ ಸತೀಶ್ ನಮ್ಮದು ಸರ್ವ ಧರ್ಮ ಸಮನ್ವಯ ಶಾಲೆಯಾಗಿದೆ. ಇಲ್ಲಿ ಮುಸ್ಲಿಂ ಮಕ್ಕಳು ಶ್ಲೋಕವನ್ನ ಕಲಿಯುತ್ತಾರೆ. ಹಿಂದೂ ಮಕ್ಕಳು ದುವಾ ಕಲಿಯುತ್ತಾರೆ. ಹಾಗೇಯೇ ಕ್ರಿಶ್ಚಿಯನ್ ಧರ್ಮದ ಬೈಬಲ್ ನಲ್ಲಿರುವ ಪ್ರಾರ್ಥನೆಯನ್ನು ಮಕ್ಕಳಿಗೆ ಹೇಳಿ ಕೊಡಲಾಗುತ್ತಿದೆ.
ಜ್ಞಾನದ ದೇವತೆ ಸ್ವರಸ್ವತಿ ದೇವಿಯ ಅಶೀರ್ವಾದದೊಂದಿಗೆ ವಿದ್ಯಾಭ್ಯಾಸ ಆರಂಭಿಸುವ ಧಾರ್ಮಿಕ ಆಚರಣೆಯನ್ನ ಅಕ್ಷರಾಭ್ಯಾಸ ಎನ್ನಲಾಗಿದ್ದು, ಸಾಮಾನ್ಯವಾಗಿ ಜನರು ಶೃಂಗೇರಿಯ ಶಾರದಾಂಬೆಯ ಸನ್ನಿಧಿಯಲ್ಲಿ ಪೋಷಕರು ತಮ್ಮ ಮಕ್ಕಳ ಅಕ್ಷರಾಭ್ಯಾಸವನ್ನ ಮಾಡುತ್ತಾರೆ, ಆದರೆ ಈ ಶಾಲೆಯಲ್ಲಿ ಪ್ರತಿಯೊಂದು ಮಗುವಿನ ಅಕ್ಷರಾಭ್ಯಾಸವನ್ನ ಸಾಮೂಹಿಕವಾಗಿ ಮಾಡಲಾಗಿದೆ ಎಂದರು. ಹಿಂದೂ,ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಕ್ಕಳು ಸಹ ಸಾಮೂಹಿಕ ಅಕ್ಷರಾಭ್ಯಾಸದಲ್ಲಿ ಭಾಗವಹಿಸುವ ಮೂಲಕ ಭಾವಕೈತೆ ಸಾರಿದರು. ಇನ್ನು ಶಾಲೆಗೆ ಬಂದ ಮಕ್ಕಳು ಮೊದಲ ಬಾರಿಗೆ ತರಗತಿಯೊಳಗೆ ಹೆಜ್ಜೆ ಇಡುತ್ತಿದ್ದಾರೆ. ಈ ದಿನವನ್ನ ಪೋಷಕರಿಗೆ ಸದಾ ನೆನೆಪಿನ ದಿನವನ್ನಾಗಿ ಮಾಡಲು ಮಕ್ಕಳು ತರಗತಿಯೊಳಗೆ ಇಟ್ಟ ಮೊದಲ ಹೆಜ್ಜೆಯ ಪುಟ್ ಪ್ರಿಂಟ್ ತೆಗದುಕೊಂಡು ತರಗತಿಯಲ್ಲಿ ದಾಖಲು ಮಾಡಲಾಯಿತು.