ಕತಾರ್‌ನಲ್ಲಿ ಅನನ್ಯ ‘ಬುಧವಾರ ಉತ್ಸವ’; ಭಾರತೀಯ ಕಲಾವಿದರಿಗೆ ಸನ್ಮಾನ

ದೋಹ- ಕತಾರ್: ಭಾರತೀಯ ಸಾಂಸ್ಕೃತಿಕ ಕೇಂದ್ರ ಕತಾರ್ ನೀರಂತರವಾಗಿ ಕತಾರ್‌ನಲ್ಲಿ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುವ ಕಾರ್ಯದಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡ ಅನಿವಾಸಿ ಭಾರತೀಯರ ಹೆಮ್ಮೆಯ ಸಂಸ್ಥೆ. ಭಾರತೀಯ ಸಾಂಸ್ಕೃತಿಕ ಕೇಂದ್ರ ಆಯೋಜಿಸಿದ “ಬುಧವಾರ ಉತ್ಸವ” ಗಮಸೆಳೆಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರಖ್ಯಾತ ಚಲನಚಿತ್ರ, ಕಿರುತೆರೆ ನಟ-ನಟಿಯರು ಮತ್ತು ಹೆಸರಾಂತ ನೃತ್ಯ ಕಲಾವಿದರೂ ಆದ ವಿಕ್ರಮ ಸೂರಿ ಮತ್ತು ನಮಿತಾ ರಾವ್ ದಂಪತಿ ಸ್ಥಳೀಯ ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಶೋಕ ಸಭಾಂಗಣ ದಲ್ಲಿ ನೃತ್ಯ ಕಾರ್ಯಕ್ರಮ ಪ್ರಸ್ತುತಿಪಡಿಸಿದರು, ಈ ದಂಪತಿ ನಡೆಸಿಕೊಟ್ಟ ಅಮೋಘ ಪ್ರದರ್ಶನ ಕಲಾಭಿಮಾನಿಗಳ ಹೃದಯ ಗೆದ್ದಿತು.

ಇದೇ ವೇಳೆ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಮಣಿಕಂಠ ಮತ್ತು ಉಪಾಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಮತ್ತು ಕರ್ನಾಟಕ ಸಂಘ ಕತಾರ್ ಅಧ್ಯಕ್ಷ ಮಹೇಶ್ ಗೌಡ ಅವರು ಕಲಾ ದಂಪತಿಗ ವಿಕ್ರಮ್ ಸೂರಿ ಮತ್ತು ನಮಿತಾ ರಾವ್ ಅವರನ್ನು ಕತಾರ್ ನಲ್ಲಿರುವ ಸಮಸ್ತ ಭಾರತೀಯರ ಪರವಾಗಿ ಸನ್ಮಾನಿಸಿದರು.

Related posts