ಮಣಿಪುರದ ಸರ್ಕಾರವನ್ನುಉಚ್ಚಾಟಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿ; ಮೋದಿಗೆ ಕಾಂಗ್ರೆಸ್ ಆಗ್ರಹ

ಬೆಂಗಳೂರು: “ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಭಾರತೀಯ ಜನತಾ ಪಕ್ಷದವರಿಗೆ ಸಂವಿಧಾನದಲ್ಲಿ ಮತ್ತು ಪ್ರಜಾಪ್ರಭುತ್ವದಲ್ಲಿ ಬದ್ಧತೆಯಿದ್ದರೆ ಈ ಕೂಡಲೇ ಮಣಿಪುರದ ಸರ್ಕಾರವನ್ನು ಉಚ್ಚಾಟನೆ ಮಾಡಿ, ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿ ಶಾಂತಿ ಕಾಪಾಡಲಿ” ಎಂದು ಮಾಜಿ ಸಂಸದರು ಹಾಗೂ ಕಾಂಗ್ರೆಸ್ ವಕ್ತಾರರಾದ ಉಗ್ರಪ್ಪನವರು ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲ ಮಾತನಾಡಿದ ಮಾಜಿ ಸಂಸದದ ಉಗ್ರಪ್ಪ, “ಪ್ರಧಾನಿ ಮೋದಿಯವರು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ, ಪ್ರಕೃತಿ ವಿಕೋಪದಿಂದ ಅನೇಕ ಜನ ಸಾಯುತ್ತಾ ಇದ್ದಾರೆ ಅದಕ್ಕೆ ಪ್ರತಿಕ್ರಿಯಿಸಲು ಸಹ ನಮ್ಮ ಪ್ರಧಾನಿಯವರಿಗೆ ಸಮಯವಿಲ್ಲ. ‘ವೆನ್ ರೂಂ ವಾಸ್ ಬರ್ನಿಂಗ್ ನೇರೋ ಪ್ಲೇಯಿಂಗ್ ಪಿಯಾನೋ’ ಎನ್ನುವಂತೆ ಮೋದಿಯವರು ಮೆಡಲ್ ಗಳ ಜೊತೆಗೆ ಆಟವಾಡುತ್ತಿದ್ದಾರೆ. ನೆನ್ನೆ ತಿಲಕರ ಮೆಡಲ್ ಪಡೆಯಲು ಪೂನಾಗೆ ಹೋಗಿದ್ದಾರೆ. ಆದರೆ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲಿಕ್ಕೆ ಬದ್ದತೆ ಇರುವಂತಹ ರಾಜಕಾರಣಿಯಾಗಿ ಅವರು ನನಗೆ ಕಾಣುತ್ತಿಲ್ಲ. ಈ ದೇಶ ಕಂಡಂತಹ ಅತ್ಯಂತ ಶೋಕಿಲಾಲ್ ಪ್ರಧಾನಿ ಯಾರಾದರೂ ಇದ್ದರೆ ಅದು ಮಿಸ್ಟರ್ ಮೋದಿ.” ಎಂದು ಟೀಕಿಸಿದರು.

“ನಾನು ಇವತ್ತು ಮನೆಯಿಂದ ಹೊರಡುವಾಗ ಯಾರೋ ಕೆಲವು ಹೆಣ್ಣು ಮಕ್ಕಳು ಕೆಲವು ಸಮಸ್ಯೆಗಳನ್ನು ತೆಗೆದುಕೊಂಡು ಬಂದಿದ್ದರು ನಾನು ಪೇಪರ್ ಓದುತ್ತಿರುವಾಗ ಅವರು ಹೇಳಿದರು ‘ಸರ್ ಅವರ ತನ್ನ ಕುಟುಂಬದವರನ್ನೇ ಪಾಲನೆ, ಪೋಷಣೆ ಮತ್ತು ರಕ್ಷಣೆ ಮಾಡದೇ ಇರುವಂತಹ ಪ್ರಧಾನಿಗಳು, ಇನ್ನು ದೇಶದ, ಮಣಿಪುರವೋ, ಹರಿಯಾಣವೋ, ಅಥವಾ ಈ ದೇಶದ ಹೆಣ್ಣು ಮಕ್ಕಳ ರಕ್ಷಣೆ ಮಾಡಲಿಕ್ಕೆ ಅವರಿಂದ ಸಾಧ್ಯವೇ’ ಎಂದು ನನ್ನ ಗಮನಕ್ಕೆ ತಂದರು. ನನಗೆ ಇದು ನಿಜಕ್ಕು ಸತ್ಯವಾದ ಮಾತು ಎನಿಸುತ್ತಿದೆ. ನಿಜಕ್ಕು ನಮ್ಮ ಸಂವಿಧಾನದ ಮೇಲೆ ಬದ್ಧತೆ ಇದ್ದರೆ ಮೊದಲು ಪ್ರಧಾನಿಯವರು ಪಾರ್ಲಿಮೆಂಟಿಗೆ ಹಾಜಾರಾಗಬೇಕು. ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದಂತೆ ಸಂವಿಧಾನದ ಸಂಸ್ಥೆಗಳು ಮುರಿದು ಬಿದ್ದಿರುವ ಹಿನ್ನಲೆಯಲ್ಲಿ ಮಣಿಪುರ ಸರ್ಕಾರವನ್ನು ಉಚ್ಚಾಟನೆ ಮಾಡಿ ರಾಷ್ಟ್ರಪತಿ ಆಡಳಿತವನ್ನು ತಂದು ಅಲ್ಲಿರುವಂತಹ ಎಲ್ಲಾ ಜನರ ರಕ್ಷಣೆ ಮಾಡಬೇಕಾದಂತಹ ಕೆಲಸ ಮಾಡಬೇಕು ಮತ್ತು ಯಾರೆಲ್ಲಾ ತಪ್ಪಿತಸ್ಥರು ಇದ್ದಾರೆ ಅಂತವರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಉಗ್ರಪ್ಪ ಒತ್ತಾಯಿಸಿದರು.

Related posts