ಶಿಮ್ಲಾ: ಈಶಾನ್ಯ ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇನ್ನೊಂದೆಡೆ ಹಿಮಾಚಲ ಪ್ರದೇಶದಲ್ಲಿ ವರುಣನ ಅಬ್ಬರವೂ ಪ್ರಳಯಕಾರಿ ಸನ್ನಿವೇಶಕ್ಕೆ ಸಾಕ್ಷಿಯಾಗುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆಯಾಗುತ್ತಿದ್ದು, ಇದೀಗ ಸಂಭವಿಸಿದ ಮತ್ತೊಂದು ಮೇಘಸ್ಪೋಟದಲ್ಲಿ ಭಾರೀ ಸಾವು ನೋವು ಉಂಟಾಗಿದೆ. ಸೋಲನ್ ಜಿಲ್ಲೆಯ ಕಂದಘಾಟ್ ಬಳಿ ಜಾಡೋನ್ ಗ್ರಾಮ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಹಲವೆಡೆ ಭೂಕುಸಿತ ಸಂಭವಿಸಿ ಮನೆಗಳು, ರಸ್ತೆಗಳು, ಕಟ್ಟಡಗಳು ಹಾನಿಗೊಳಗಾಗಿವೆ, ಪ್ರವಾಹದಲ್ಲಿ ಹತ್ತಾರು ವಾಹನಗಳು ಕೊಚ್ಚಿಹೋಗಿವೆ. ಸರಣಿ ಅವಘಡಗಳಲ್ಲಿ 9 ಮಂದಿ ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Visual of Pandoh Himachal Pradesh right now pic.twitter.com/KQ2Tn9sz9B
— Go Himachal (@GoHimachal_) August 14, 2023