ನವೆಂಬರ್ 2 ರಿಂದ 15 ರವರೆಗೆ ಹಾಸನಾನೆಂಬೆ ಜಾತ್ರೆ; ಮಹಾ ವೈಭವಕ್ಕೆ ತಯಾರಿ

ಹಾಸನ: ಪುರಾಣ ಪ್ರಸಿದ್ಧ ಹಾಸನಾಂಬೆ ಜಾತ್ರಗೆ ಮುಹೂರ್ತ ನಿಗದಿಯಾಗಿದ್ದು, ಈ ಬಾರಿ ನವೆಂಬರ್ 2 ರಿಂದ ನವೆಂಬರ್ 15ರವರೆಗೆ ವಿಶೇಷ ಮಹೋತ್ಸವ ನಡೆಯಲಿದೆ.

ಹಾಸನಾಂಬೆ ಜಾತ್ರೆಯ ತಯಾರಿ ಸಂಬಂಧ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ರಾಜಣ್ಣ ಅವರ ನೇತೃತ್ವದಲ್ಲಿ ಹಾಸನ ಜಿಲ್ಲಾ ಪಂಚಾಯಿತಿಯ ಹೇಮಾವತಿ ಸಭಾಂಗಣದ ಸಭೆ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಗಳಿರುವುದರಿಂದ ಸುಸೂತ್ರ ತಯಾರಿ ನಡೆಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನಾಂಬೆ ಜಾತ್ರೆಯಲ್ಲಿ ಈ ವರ್ಷ 14 ದಿನಗಳು 24 ಗಂಟೆ ದೇವಿಯ ದರ್ಶನ ಮಾಡಬಹುದಾಗಿದೆ.

Related posts