ಮೋದಿ ಮಣಿಸಲು ‘INDIA’ ವ್ಯೂಹ; ಮುಂಬೈ ಸಭೆಯ ಬಗ್ಗೆ ‘ಕೈ’ ನಾಯಕರಿಗೆ ಭಾರೀ ನಿರೀಕ್ಷೆ

ಮುಂಬೈ: ಪ್ರಧಾನಿ ನರೇಂದ್ರ ಮೋದಿಯನ್ನು ಮಣಿಸಲು ರಣವ್ಯೂಹ ರಚಿಸುತ್ತಿರುವ ಕಾಂಗ್ರೆಸ್, ‘INDIA’ ಒಕ್ಕೂಟದ ಮುಂಬೈ ಸಭೆಯ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ‘INDIA’ ಸಭೆ ನಡೆಯಲಿದ್ದು ಅದಕ್ಕಾಗಿ ಭರ್ಜರಿ ತಯಾರಿ ನಡೆದಿದೆ.

‘INDIA’ ಮೈತ್ರಿಕೂಟದ ಮುಂಬರುವ ಮೂರನೇ ಸಭೆಯ ಸಿದ್ಧತೆ ಪರಿಶೀಲನೆಗಾಗಿ ಕಾಂಗ್ರೆಸ್ ಹಿರಿಯ ನಾಯಕರು ಸಾಧ್ಯವೇ ಮುಂಬೈಗೆ ಭೇಟಿ ನೀಡಲಿದ್ದಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಮಹಾ ವಿಕಾಸ್ ಅಘಾಡಿ (ಎಂವಿಎ) ನಾಯಕತ್ವದೊಂದಿಗೆ ಚರ್ಚೆ ನಡೆಸಲಿದ್ದಾರೆ. ಮಹಾರಾಷ್ಟ್ರವನ್ನು ತನ್ನ ತೆಕ್ಕೆಗೆ ಪಡೆದಲ್ಲಿ ಬಿಜೆಪಿಯನ್ನು ಕಟ್ಟಿಹಾಕುವ ಕಾರ್ಯದಲ್ಲಿ ಬಹುಪಾಲು ಯಶಸ್ವಿಯಾದಂತೆ ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದು. ಹಾಗಾಗಿ ‘INDIA’ ಮಹಾ ವಿಕಾಸ್ ಅಘಾಡಿ ನಾಯಕರನ್ನು ಹೆಚ್ಚಾಗಿ ಅವಲಂಭಿಸಿದೆ.

‘INDIA’ ಮೈತ್ರಿಕೂಟದ ಈ ಮಹತ್ವದ ಸಭೆಯು ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ನಡೆಯಲಿದೆ. ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಪ್ರಬಲ ಸವಾಲು ಹಾಕುವ ಸಂಬಂಧ ಕಾರ್ಯತಂತ್ರಗಳನ್ನು ರೂಪಿಸುವ ಕುರಿತಂತೆ ಮತ್ತೊಂದು ಸುತ್ತಿನ ಚರ್ಚೆಗಳು ನಡೆಯಲಿದೆ.

ಈ ನಡುವೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ಇತರ ನಾಯಕರೊಂದಿಗೆ ಪಕ್ಷದ ಪ್ರಧಾನ ಕಚೇರಿಯಲ್ಲಿ ದೆಹಲಿ ಮತ್ತು ಜಾರ್ಖಂಡ್‌ನ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ. ‘INDIA’ ಕಾರ್ಯಸೂಚಿಯು ಮುಂಬರುವ 2024 ರ ಲೋಕಸಭಾ ಚುನಾವಣೆಯ ಸಿದ್ಧತೆಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ ಎಂಬ ನಿರೀಕ್ಷೆಯೊಂದಿಗೆ ರಾಹುಲ್ ಗಾಂಧಿ ನಿರಂತರ ಕಾರ್ಯತಂತ್ರದಲ್ಲಿ ನಿರತರಾಗಿದ್ದಾರೆ.

Related posts