KSRTCಯಿಂದ ಇನ್ನು ಮುಂದೆ ‘ಪಾಯಿಂಟ್ ಟು ಪಾಯಿಂಟ್’ ಹೈಸ್ಪೀಡ್ ಸೇವೆ.. ನೂತನ ‘ಪ್ರೋಟೋ ಟೈಪ್ ವಾಹನ’ ಹೇಗಿದೆ ಗೊತ್ತಾ..?

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ‘ಪಾಯಿಂಟ್ ಟು ಪಾಯಿಂಟ್’ ಮತ್ತು ವೇಗದೂತ ಕಾರ್ಯಾಚರಣೆಗೆ ಹೊಸ ವ್ಯವಸ್ಥೆ ರೂಪಿಸಿದೆ. ಈ ಸೇವೆಗಾಗಿ ನಿಯೋಜಿಸಲಾಗುವ ನೂತನ ಕರ್ನಾಟಕ ಸಾರಿಗೆ ವಾಹನ ‘ಪ್ರೋಟೋ ಟೈಪ್ ವಾಹನ’ ವಿನ್ಯಾಸ ಗಮನಸೆಳೆದಿದೆ. ಈ ವಿನ್ಯಾಸವನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಪರಿಶೀಲಿಸಿದರು. ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಬಸ್ಸುಗಳನ್ನು ಪರಿಶೀಲಿಸಿದ ಸಚಿವರು ಮಾಹಿತಿ ಪಡೆದರು.

ಈ ನೂತನ ವ್ಯವಸ್ಥೆಯ ಹೈಲೈಟ್ಸ್ ಹೀಗಿದೆ: 

ನೂತನವಾಗಿ ಕಾರ್ಯಾಚರಣೆಗೆ ನಿಯೋಜಿಸಲಾಗುವ ಕರ್ನಾಟಕ ಸಾರಿಗೆ ವಾಹನವನ್ನು ಮೆ. ಕೆ.ಎಂ.ಎಸ್. ಕೋಚ್ ಬಿಲ್ಡರ್ಸ್‌ರವರು ನಿರ್ಮಾಣ ಮಾಡಿದ್ದಾರೆ. ಈ ಬಸ್ಸುಗಳು ಹಲವಾರು ವಿಶಿಷ್ಟತೆಗಳನ್ನು ಹೊಂದಿವೆ.

  •  ವಾಹನದ ಎತ್ತರ 3420 ಮಿ.ಮಿ.

  • ಆಸನಗಳ ಸಂಖ್ಯೆ 52

  •  ಪ್ರಯಾಣಿಕರ ಆಸನ ಬಕೆಟ್ ಟೈಪ್

  • ವಾಹನದ ಮುಂದಿನ/ ಹಿಂದಿನ ಗಾಜು ವಿಶಾಲವಾಗಿರುತ್ತದೆ.

  •  ಪ್ರಯಾಣಿಕರ ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿರುತ್ತದೆ

  • ಕಿಟಕಿ ಗಾಜು ದೊಡ್ಡದಾದ ಟಿಂಟೆಡ್ ಗಾಜುಗಳು

  • ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್ ವಿನೂತನ ವಿನ್ಯಾಸ.

  • ಒಳಾಂಗಣದ ದೀಪ ಸತತವಾದ ಎಲ್.ಇ. ಡಿ ದೀಪ

  • ಹಿಂದಿನ/ಮುಂದಿನ ಮಾರ್ಗ ಎಲ್.ಇ.ಡಿ ಮಾರ್ಗ ಫಲಕ ಅಳವಡಿಕೆ

  • ಬ್ಯಾನೆಟ್ ಇನ್ಸುಲೇಶನ್ ಮತ್ತು ರೆಕ್ಸಿನ್ ಪ್ಯಾಡಿಂಗ್

  • ಪ್ರಯಾಣಿಕರ ಬಾಗಿಲು ಸ್ವಯಂಚಾಲಿತ ಸೆನ್ಸ್ರ್ರ್ ಮತ್ತು ತುರ್ತು ಬಟನ್‌ ವ್ಯವಸ್ಥೆ

  • ವಾಹನದ ಮುಂಭಾಗ ವಿನೂತನ ಆರ್ಕಷಕ ವಿನ್ಯಾಸ ದೊಡ್ಡ ಗ್ಲಾಸ್

  • ಲಗ್ಗೇಜ್ ಕ್ಯಾರಿಯರ್ ವಿಶಾಲವಾಗಿದ್ದು, ಒಳ ಭಾಗದಲ್ಲಿ ಹೆಚ್ಚು ಎತ್ತರವಾಗಿದ್ದು, ಹೆಚ್ಚಿನ ಸಾಮಗ್ರಿಗಳನ್ನು ಸಾಗಿಸಬಹುದಾಗಿದೆ.

  • ಎಲ್ಲಾ ಜಿಲ್ಲಾ‌ ಕೇಂದ್ರದಿಂದ ಬೆಂಗಳೂರಿಗೆ ಸಂಪರ್ಕ‌ ಕಲ್ಪಿಸಲಿದೆ‌.

  • ಆಸನಗಳ ಮಧ್ಯೆ ( leg space ) ಸ್ಥಳಾವಕಾಶ ಹೆಚ್ಚಿದೆ.

ಪ್ರಸ್ತುತ ಇಂದು ಪರಿಶೀಲಿಸಲಾದ ಪ್ರೋಟೋ ಟೈಪ್ ವಾಹನವು ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ವಾಹನವನ್ನಾಗಿ ಉಪಯೋಗಿಸಲಿದ್ದು, ಮುಂಬರುವ ಎಲ್ಲಾ ಹೊಸ ಬಸ್ಸುಗಳು ಈ ರೀತಿಯ ವಿನ್ಯಾಸ ವನ್ನು ಹೊಂದಲಿದೆ.

ಈ ಪ್ರೋಟೋ ಟೈಪ್ ಮಾದರಿಯನ್ನು ಪರಿಶೀಲಿಸಿದ ಮಾನ್ಯ ಸಾರಿಗೆ ಮಾತ್ತು ಮುಜರಾಯಿ ಸಚಿವರು ಹಾಗೂ ಅಧ್ಯಕ್ಷರು,‌ಮಾತನಾಡಿ, ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ವಾಹನಗಳನ್ನು ಕಾರ್ಯಾಚರಣೆಗೊಳಿಸಿ, ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಎಲ್ಲಾ ಬದಲಾವಣೆಗಳನ್ನು ತರಲಾಗಿದೆ ಹಾಗೂ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಒಂದು ತಿಂಗಳ ಅವಧಿಯಲ್ಲಿ ಹೊಸ ಬಸ್ಸುಗಳು ಬರಲಿದ್ದು, ಎಲ್ಲಾ ಹೊಸ ವಾಹನಗಳು ಈ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾ ನಿರ್ದೇಶಕರಾದ ಜಿ.ಸತ್ಯವತಿ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related posts