ಹನೂರು ತೋಮಿಯರ್ ಪಾಳ್ಯದ ಶಾಲೆಯಲ್ಲಿ ಅನನ್ಯ ಪ್ರತಿಭಾ ಕಾರಂಜಿ.. ಕಲೋತ್ಸವದಲ್ಲಿ ಮಕ್ಕಳ ಕಮಾಲ್..

ಚಾಮರಾಜನಗರ: ಹನೂರು ತಾಲೂಕಿನ ತೋಮಿಯರ್ ಪಾಳ್ಯ ಗ್ರಾಮದ ಸಂತ ತೋಮಸ್ ಆರ್ ಸಿ ಅನುದಾನಿತ ಶಾಲೆಯಲ್ಲಿ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಗಮನಸೆಳೆಯಿತು.

ಕಾರ್ಯಕ್ರಮವನ್ನು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಮಲ್ ದಾಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಂಘದ ಅಧ್ಯಕ್ಷರು ಶಿವಮಲ್ಲು ಹಾಗೂ ಸಂತ ತೋಮಸ್ ಶಾಲೆಯ ವ್ಯವಸ್ಥಾಪಕರಾದ ಪಾಧರ್ ಸೂಸೈ ರವರು ಉದ್ಘಾಟನೆ ನೆರವೇರಿಸಿದರು. .

ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಮಲ್ ದಾಸ್ ಮಾತನಾಡಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಸ್ಪರ್ಧೆಯಲ್ಲಿ ಸೋತೆ ಎಂದು ಕುಗ್ಗಬಾರದು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಮುಖ್ಯವಾಗಿದೆ,ವಿದ್ಯಾರ್ಥಿಗಳಲ್ಲಿ ಸುಪ್ತ ಪ್ರತಿಭೆಗಳನ್ನು ಹೊರ ತೆಗೆಯಲು ಪ್ರತಿಭಾಕಾರಂಜಿ ಕಾರ್ಯಕ್ರಮವು ಅನುಕೂಲವಾಗಿದೆ ಎಂದರು.

ಶಾಗ್ಯ ಕ್ಲಸ್ಟರ್ ನ ಸಿ ಆರ್ ಪಿ ಮುನಿರಾಜುರವರು ಮಾತನಾಡಿ ಶಾಗ್ಯ ಕ್ಲಸ್ಟರ್ ವತಿಯಿಂದ 18 ಶಾಲೆಯ ಮಕ್ಕಳು ಭಾಗವಹಿಸಿದ್ದು, ಮಕ್ಕಳು ಬಹಳ ಪ್ರತಿಭಾವಂತರು ಅವರಿಗೆ ಕೇವಲ ಸುಗಮಕಾರರಾದರೆ ಸಾಕು ತಮ್ಮಷ್ಟಕ್ಕೆ ತಾವೇ ಉನ್ನತ ಮಟ್ಟಕ್ಕೆ ತಲುಪುತ್ತಾರೆ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಮೊದಲಿನಿಂದಲೂ ನೋಡಿಕೊಂಡು ಬಂದಿದ್ದೇವೆ ಈ ಬಾರಿ ಸಹ ನಮ್ಮ ಗ್ರಾಮೀಣ ಭಾಗದ ಮಕ್ಕಳು ಹನೂರು ಶೈಕ್ಷಣಿಕ ವಲಯದ ಮಕ್ಕಳು ರಾಜ್ಯಮಟ್ಟಕ್ಕೆ ತಲುಪಲಿ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮೆರುಗು ತಂದ ಛದ್ಮವೇಷ ಸ್ಪರ್ಧೆ:

ಶ್ರೀ ಗುರು ರಾಘವೇಂದ್ರಸ್ವಾಮಿ, ಗಗನಸಖಿ ಹಾಗೂ ಆಮೆಯ ವೇಷಭೂಷಣ ಗಮನಸೆಳೆಯಿತು. ಪುಟಾಣಿ ಮಕ್ಕಳು ವಿವಿಧ ವೇಷಭೂಷಣ ಮೂಲಕ ನೋಡುಗರನ್ನು ರಂಜಿಸಿದರು.

ಪ್ರತಿಭಾ ಕಾರಂಜಿಯಲ್ಲಿ ಜನಪದ ನೃತ್ಯ ,ಭಾವಗೀತೆ , ರಸಪ್ರಶ್ನೆ ,ಚರ್ಚಾ ಸ್ಪರ್ಧೆ ,ಹಾಗೂ ಛದ್ಮವೇಷ ಇನ್ನಿತರ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿದ್ದರು, ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.

ಶಾಗ್ಯ ಕ್ಲಸ್ಟರ್ ಶಾಲೆಗಳಿಂದ ವರ್ಗಾವಣೆಗೊಂಡ ಶಿಕ್ಷಕರಿಗೆ ಬೀಳ್ಕೊಡುಗೆ:

2023 -24 ನೇ ಸಾಲಿನಲ್ಲಿ ಶಾಗ್ಯ ಕ್ಲಸ್ಟರ್ ಶಾಲೆಗಳಿಂದ ವರ್ಗಾವಣೆಗೊಂಡ ಶಿಕ್ಷಕರನ್ನು ಆಹ್ವಾನಿಸಿ ಕ್ಲಸ್ಟರ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಶಾಗ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ವೀರತಪ್ಪ , ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಿವಮಲ್ಲು, ಪಿಜಿ ಪಾಳ್ಯ ಕ್ಲಸ್ಟರ್ ನ ಸಿ.ಆರ್.ಪಿ. ದೇವರಾಜ್, ಸಂತ ತೋಮಸ್ ಶಾಲೆಯ ಮುಖ್ಯ ಶಿಕ್ಷಕರಾದ ರಾಯಪ್ಪ ಹಾಗೂ ಮುಖ್ಯ ಶಿಕ್ಷಕಿಯಾದ ಆರೋಕ್ಯ ಮೇರಿ, ಕ್ಲಸ್ಟರ್ ನ ಎಲ್ಲಾ ಶಾಲೆಯ ಶಿಕ್ಷಕ ಶಿಕ್ಷಕಿಯರು , ವಿವಿಧ ಶಾಲೆಗಳಿಂದ ಆಗಮಿಸಿದ ತೀರ್ಪುಗಾರರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

Related posts