ಸೆ.10ರಂದು ಪಂಚಮಸಾಲಿ ರಣಕಹಳೆ; ಜಗದ್ಗುರುಗಳು ಸಮುದಾಯಕ್ಕೆ ರವಾನಿಸಿದ ಸಂದೇಶ ಹೀಗಿದೆ..

ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಸಂಬಂಧ ರಣಕಹಳೆ ಮೊಳಗಿಸಿರುವ ಕೂಡಲಸಂಗಮದ ಜಗದ್ಗುರು ಬಸವಜಯ ಮೃತ್ಯುಂಜಯ ಶ್ರೀಗಳು, ಸೆಪ್ಟಂಬರ್ 10 ಭಾನುವಾರದಂದು ನಿಪ್ಪಾಣಿಯಲ್ಲಿ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ತಮ್ಮ ಹೋರಾಟ ಕುರಿತಂತೆ ಸಮುದಾಯದವರಿಗೆ ಸಂದೇಶ ರವಾನಿಸಿರುವ ಶ್ರೀಗಳು, ಸೆಪ್ಟೆಂಬರ 3ರ ಬದಲು ಸೆಪ್ಟಂಬರ್ 10 ಭಾನುವಾರದಂದು ನಿಪ್ಪಾಣಿಯಲ್ಲಿ ಈ ಹೋರಾಟ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಬೆಳಗಾವಿ ಹಾಗೂ ಶೈಕ್ಷಣಿಕ ಜಿಲ್ಲಾ ಮಟ್ಟದ ಸಾಮೂಹಿಕ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟಕ್ಕೆ ಚಾಲನೆ ನೀಡಲಾತ್ತದೆ. ಈ ಅಂಗವಾಗಿ ಆಗಸ್ಟ್‌ 30ರಂದು ಅಥಣಿ ತಾಲ್ಲೂಕಿನಲ್ಲಿ ಬಡೆದ ಪೂರ್ವಭಾವಿ ಶ್ರಾವಣ ಸಂದೇಶ ಸಭೆ ಯಶಸ್ವೀಯಾಗಿ ನಡೆದಿದೆ ಎಂದು ತಿಳಿಸಿದರು. ಇದೇ ವೇಳೆ, ಬೆಳಗಾವಿ ಜಿಲ್ಲೆ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಸಮಾಜ ಬಾಂಧವರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಜಗದ್ಗುರುಗಳು ಕರೆ ನೀಡಿದರು.

ಸಮುದಾಯದ ಪ್ರಮುಖರಾದ ರಮೇಶ್ ಪಾಟೀಲ್, ಬಿಎಲ್ ಪಾಟೀಲ್, ಅವಿನಾಶ್ ನಾಯಕ್, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts