ಮತ್ತೊಂದು ಸಾಧನೆಯತ್ತ ಭಾರತ; ‘ಸೂರ್ಯಯಾನ’ದ ಯಶಸ್ವೀ ಹೆಜ್ಜೆ

ಶ್ರೀಹರಿಕೋಟಾ: ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲಷ್ಟೇ, ಭಾರತ ಮತ್ತೊಂದು ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ. ಭಾರತದ ಮಹತ್ವಾಕಾಂಕ್ಷೆಯ ಸೂರ್ಯ ಯಾನ ಆಂಗವಾಗಿ ‘ಆದಿತ್ಯಾ L1’ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಸ್ರೋ ಸಾರಥ್ಯದಲ್ಲಿ ಆದಿತ್ಯಾ ಎಲ್ 1 ನೌಕೆಯನ್ನು ಹೊತ್ತ ಪಿಎಲ್ಎಲ್ ವಿ- ಸಿ-57 ರಾಕೆಟ್ ಬೆಳಗ್ಗೆ 11.50ಕ್ಕೆ ನಭಕ್ಕೆ ಹಾರಿತು. ಪಿಎಸ್ ಎಲ್ ವಿ ಸಿ 57 ನೌಕೆ ಎಲ್ಲ ಮೂರೂ ಹಂತಗಳನ್ನು ಯಶಸ್ವಿಯಾಗಿ ನಿಭಾಯಿಸಿ ನೌಕೆಯನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ತಲುಪಿಸಿತು ಎಂದು ಇಸ್ರೋ ಹೇಳಿದೆ.

 

Related posts