ನಿಂಬೆ ಹಣ್ಣಿನ ಆರೋಗ್ಯ ಪ್ರಯೋಜನಗಳು ಅನೇಕ. ಈ ಹಣ್ಣು ರೋಗ ನಿವಾರಣೆಯಲ್ಲಿ ತುಂಬಾ ಸಹಾಯಕವಾಗಿದೆ. ಅನೇಕ ಜನರು ನಿಂಬೆಹಣ್ಣನ್ನು ತಮ್ಮ ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುತ್ತಾರೆ. ಇದು ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಅನೇಕ ಪೋಷಕಾಂಶಗಳನ್ನು ಹೊಂದಿದೆ.
ಅದರಲ್ಲಿರುವ ವಿಟಮಿನ್ ಸಿ ರೋಗ ನಿರೋಧನಾ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಂಬೆಯ ಸಿಪ್ಪೆಗಳು ಕೂದಲು ಮತ್ತು ಚರ್ಮಕ್ಕೆ ಒಳ್ಳೆಯವು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅದರಲ್ಲಿರುವ ಪಾಲಿಫಿನಾಲ್ ಫ್ಲೇವನಾಯ್ಡ್‌ಗಳು ಸಹಾಯಕವಾಗಿವೆ.
- ನಿಂಬೆ ಸಿಪ್ಪೆ ತ್ವಚೆಯ ಅಣುಗಳನ್ನು ಪುನರುಜ್ಜೀವನಗೊಳಿಸುತ್ತದೆ ಮತ್ತು ಹೊಳಪಿಸುತ್ತದೆ.
- ನಿಂಬೆಯ ಸಿಪ್ಪೆ ಗಾಯವನ್ನು ಗುಣಮಾಡುತ್ತದೆ.
- ಮನೋಲ್ಲಾಸಕ್ಕೆ ಮತ್ತು ಮನಸ್ಸಿನ ಸ್ಥಿತಿಯನ್ನು ಸುಧಾರಿಸಲು ನಿಂಬೆಯ ಸಿಪ್ಪೆಗಳ ಸೇವನೆ ಉತ್ತಮ.
- ನಿಂಬೆಯ ಸಿಪ್ಪೆಯನ್ನು ಸಾಬೂನುಗಳಲ್ಲಿ ಬಳಸಿದಾಗ, ಅದು ತ್ವಚೆಗೆ ಅತಿಯಾದ ರಕ್ಷಣೆಯನ್ನು ನೀಡುತ್ತದೆ.
- ನಿಂಬೆಯ ಸಿಪ್ಪೆಗಳನ್ನು ಸಾಬೂನುಗಳ ಮತ್ತು ಕ್ರೀಮ್‌ಗಳಲ್ಲಿ ಬಳಸಿದಾಗ, ಅವು ತ್ವಚೆಯ ಅಣುಗಳನ್ನು ಸುಧಾರಿಸುವ ಗುಣವನ್ನು ಹೊಂದಿವೆ