ಹಿಂದೂತ್ವವೇ ವಂಚನೆಗೆ ‘ಚೈತ್ರಾ’ಸ್ತ್ರ..! ಹಣ ವಾಪಸ್ ಕೇಳಿದರೆ ಅತ್ಯಾಚಾರ ಕೇಸ್ ಬೆದರಿಕೆ..?

ಬೆಂಗಳೂರು: ಹಿಂದೂ ಸಂಘಟನಗಳ ಕಾರಗಯಕರ್ತೆ ಎಂದು ಹೇಳಿಕೊಂಡು ಪ್ರಚೋದನಕಾರಿ ಭಾಷಣ ಮಾಡುತ್ತಾ ಹಿಂದೂ ಕಾರ್ಯಕರ್ತರ ಗಮನಸೆಳೆಯುತ್ತಿದ್ದ ಚೈತ್ರಾ ಕುಂದಾಪುರ ಇದೀಗ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಚೈತ್ರಾ ಅವರ ಸಾಲು ಸಾಲು ವಂಚನೆ ಪುರಾಣ ಬಯಲಾಗುತ್ತಿದ್ದು, ಅವರು ಬಂಧನದಲ್ಲಿದ್ದಾಗಲೇ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ.

ಬಿಜೆಪಿ ಕಾರ್ಯಕರ್ತನಿಗೆ ವಂಚಿಸಿದ್ದಾರೆನ್ನಲಾದ ಚೈತ್ರಾ ಕುಂದಾಪುರ, ವಂಚನೆಗೊಳಗಾದವರು ಹಣ ವಾಪಸ್ ಕೇಳಿದರೆ ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆಯೊಡ್ಡಿದ್ದಾರಂತೆ. ಇದೇ ಅಂಶಗಳನ್ನು ಉಲ್ಲೇಖಿಸಿ ಉಡುಪಿ ಜಿಲ್ಲೆ ಕೋಟಾ ಪೊಲೀಸ್ ಠಾಣೆಯಲ್ಲಿ ಎಫ್‌ಐ‌ಆರ್ ದಾಖಲಾಗಿದೆ. ಬ್ರಹ್ಮಾವರ ಸಮೀಪದ ಸುದೀನ ಎಂಬವರು ಕೋಟಾ ಪೊಲೀಸ್ ಠಾಣೆಯಲ್ಲಿ ನೀಡಿರುವ  ದೂರಿನ ಹಿನ್ನೆಲೆಯಲ್ಲಿ ಈ ಎಫ್‌ಐಆರ್ ದಾಖಲಾಗಿದೆ.

ಏನಿದು ವಂಚನೆ ಪುರಾಣ?

ಹಿಂದೂ ಕಾರ್ಯಕರ್ತರನ್ನೇ ಚೈತ್ರಾ ವಂಚಿಸುತ್ತಿದ್ದರಾ? ಚೈತ್ರಾ ಕುಂದಾಪುರ ಅವರಿಗೆ ಹಿಂದೂ ಕಾರ್ಯಕರ್ತರೇ ಟಾರ್ಗೆಟ್? ಎಂಬ ಪ್ರಶ್ನೆ ಉದ್ಭವವಾಗಿದೆ. ಅದಕ್ಕೆ ಪುಷ್ಟಿ ನೀಡಿರುವ ಕೋಟಾ ಕೇಸ್ ಕೂಡಾ ಬೆಂಗಳೂರಿನಲ್ಲಿ ದಾಖಲಾಗಿರುವ ಟಿಕೆಟ್ ಡೀಲ್ ಪ್ರಕರಣವನ್ನೇ ಹೋಲುತ್ತಿದೆ.

ಮತ್ತೊಂದು ವಂಚನೆ ಪ್ರಕರಣದಲ್ಲಿ ಸಿಲುಕಿರುವ ಭಾಷಣಗಾರ್ತಿ ವಿರುದ್ದ ತವರು ಜಿಲ್ಲೆ ಉಡುಪಿಯಲ್ಲಿ ಬಿಜೆಪಿ ಕಾರ್ಯಕರ್ತನೇ ದೂರು ನೀಡಿದ್ದಾರೆ. ಬ್ರಹ್ಮಾವರದ ಸುದಿನ ಎಂಬವರು ನೀಡಿರುವ ದೂರು ಇದಾಗಿದ್ದು, ಬಟ್ಟೆ ಅಂಗಡಿ ತೆರೆಯುವ ಹೆಸರಲ್ಲಿ ವಂಚನೆ ನಡೆದಿದೆ ಎಂದು ಆರೋಪ ಮಾಡಿದ್ದಾರೆ.

ಹಿಂದೂ ಧ್ವಜ, ಕೇಸರಿ ಬ್ಯಾಂಟಿಂಗ್ ಮಾರಾಟಕ್ಕೆ ಅವಕಾಶ ಸಿಗುವ ರೀತಿ ಬಟ್ಟೆ ಉದ್ಯಮ ಮಾಡಿಸಿ ಕೊಡುವುದಾಗಿ ಚೈತ್ರಾ ಸುಮಾರು 5 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆಂಬುದು ಸುದಿನ ಅವರ ಆರೋಪ. ಹಣ ಪಡೆದು ವಂಚಿಸಿರುವ ಚೈತ್ರಾರಲ್ಲಿ ಹಣ ವಾಪಸ್ ಕೇಳಿದರೆ ಸ್ಪಂಧಿಸುತ್ತಿಲ್ಲ.ಸಚಿವರು, ಶಾಸಕರ ಪ್ರಭಾವ ಇದೆ ಎಂದು ಹೇಳಿ ಯಾಮಾರಿಸಿದ್ದಾರೆ. ದೂರು ನೀಡಲು ಮುಂದಾದರೆ ಅತ್ಯಾಚಾರ ಕೇಸ್ ಹಾಕುವುದಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಸುದೀನ ದೂರಿದ್ದಾರೆ.

ಚೈತ್ರಾ ಅವರು ಪ್ರಭಾವಿ ಹಿಂದೂ ನಾಯಕಿಯಂತೆ ಬಿಂಬಿಸಿಕೊಳ್ಳುತ್ತಿದ್ದುದರಿಂದ ವಂಚನೆ ಬಗ್ಗೆ ದೂರು ನೀಡಲು ಹಿಂದೇಟು ಹಾಕುತ್ತಿದ್ದ ಸುದೀನಾ, ಯಾವಾಗ ಗೋವಿಂದ ಪೂಜಾರಿ ಪ್ರಕರಣ ಸದ್ದು ಮಾಡಿತೋ ಅದಾಗಲೇ ಸುದೀನಾ ಅವರಿಗೂ ಧೈರ್ಯ ಬಂದಂತಿದೆ. ಸೋಮವಾರ ಕೋಟಾ ಠಾಣೆಗೆ ತೆರಳಿ ಅವರು ದೂರು ನೀಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Related posts