ಸಮೀಕ್ಷೆ: ಈಗಲೇ ಲೋಕಸಭಾ ಚುನಾವಣೆ ನಡೆದರೆ ಮೋದಿ ಮತ್ತೆ ಅಧಿಕಾರಕ್ಕೆ

ದೆಹಲಿ: ಲೋಲಸಭಾ ಚುನಾವಣೆಗೆ ಇನ್ನೇನು 5-6 ತಿಂಗಳುಗಳಷ್ಟೇ ಇದ್ದು ರಾಜಕೀಯ ಪಕ್ಷಗಳು ಭರ್ಜರಿ ತಯಾರಿಯಲ್ಲಿ ತೊಡಗಿವೆ. ಅದರಲ್ಲೂ ಮೋದಿ ಆಧಿಕಾರ ಯುಗವನ್ನು ಅಂತ್ಯಗೊಳಿಸಲು ಪ್ರತಿಪಕ್ಷಗಳು ಚಕ್ರವ್ಯೂಹ ರೂಪಿಸುತ್ತಿವೆ. ಈ ಸಂಬಂಧ ‘ಇಂಡಿಯಾ’ ಮೈತ್ರಿಕೂಟವನ್ನು ರಚಿಸಿದ್ದು ಮುಂಬರುವ ಲೋಕಸಭಾ ಸಮರ ತೀವ್ರ ಕುತೂಹಲ ಕೆರಳಿಸಿದೆ.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮಾಧ್ಯಮಗಳು ನಡೆಸುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆ ತೀವ್ರ ಕುತೂಹಲ ಸೃಷ್ಟಿಸುತ್ತಿದೆ. ಈ ಪೈಕಿ ಟೈಮ್ಸ್ ನೌ – ಇಟಿಜಿ ರಿಸರ್ಚ್ ಸಮೀಕ್ಷೆ ಅನಾವರಣ ಮಾಡಿರುವ ಫಲಿತಾಂಶ ಅನೇಕಾನೇಕ ಲೆಕ್ಕಾಚಾರಗಳಿಗೆ ಮುನ್ನುಡಿ ಬರೆದಿದೆ.

ಟೈಮ್ಸ್ ನೌ – ಇಟಿಜಿ ರಿಸರ್ಚ್ ಸಮೀಕ್ಷೆ  ಪ್ರಕಾರ ಈಗಲೇ ಲೋಕಸಭಾ ಚುನಾವಣೆ ನಡೆದರೆ ಮೋದಿ ಸರ್ಕಾರ ಮರುಸ್ಥಾಪನೆಯಾಗುವುದರಲ್ಲಿ ಸಂಶಯವಿಲ್ಲ. ಈ ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ NDAಗೆ 307 ಸ್ಥಾನಗಳು ಸಿಗುವ ಸಾಧ್ಯತೆಗಳಿವೆ. ಪ್ರತಿಪಕ್ಷಗಳ ಒಕ್ಕೂಟವಾಗಿರುವ ‘ಇಂಡಿಯಾ’ ಮೈತ್ರಿಕೂಟ 175 ಸ್ಥಾನಗಳನ್ನು ಗೆಲ್ಲುವ ಅವಕಾಶ ವಿದೆ ಎಂದೂ, ಸುಮಾರು 56 ಸ್ಥಾನಗಳು ಇತರರ ಪಾಲಾಗಲಿವೆ ಎಂಬ ಮುನ್ಸೂಚನೆ ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಲೋಕಸಭೆ: ಸಮೀಕ್ಷಾ ಫಲಿತಾಂಶ: 

  • NDA – 307

  • INDIA – 175

  • OTHERS- 56

Related posts