ನೇಪಾಳ, ಅಫಘಾನಿಸ್ತಾನ ಸಹಿತ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಭೂಕಂಪನ

ದೆಹಲಿ: ನೇಪಾಳ, ಅಫಘಾನಿಸ್ತಾನ ಸಹಿತ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಇಂದು ಭೂಕಂಪನ ಉಂಟಾಗಿದೆ. ಹಿಮಾಲಯ ರಾಷ್ಟ್ರ ನೇಪಾಳದ ಹಲವು ಭಾಗಗಳು ಭೂಕಂಪನದ ಹೊಡೆತದಿಂದ ತತ್ತರಿಸಿದೆ. ಪಶ್ಚಿಮ ನೇಪಾಳದಲ್ಲಿ ಈ ಭೂಕಂಪನದ ಕೇಂದ್ರಬಿಂದು ಗೊತ್ತಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇದೇ ವೇಳೆ, ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ. ದೆಹಲಿಯಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು ಹಲವು ಪ್ರದೇಶಗಳಲ್ಲಿ ಜನರು ಬಹುಮಹಡಿ ಕಟ್ಟಡಗಳಿಂದ ಹೊರಗಡೆ ತೆರಳಿ ಪ್ರಾಣಾಪಾಯದಿಂದ ಪಾರಾಗಲು ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ದೆಹಲಿ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Related posts