ಗ್ಯಾಂಗ್ಟಕ್: ಪ್ರವಾಹದ ಹೊಡೆತಕ್ಕೆ ಸಿಲುಕಿರುವ ಸಿಕ್ಕಿಂ ಅಕ್ಷರಶಃ ನಲುಗಿದೆ. ಮೇಘ ಸ್ಫೋಟದಿಂದ ಸಂಭವಿಸಿದ ದಿಢೀರ್ ಪ್ರವಾಹ ನೋವಿಗೆ ಕಾರಣವಾಗಿದೆ. ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಪ್ರವಾಸಿಗರೂ ಸಂಕಷ್ಟದಲ್ಲಿ ಸಿಲುಕಿದ್ದು ಸೇನೆಯ ಆಶ್ರಯ ಪಡೆಯುವಂತಾಗಿದೆ.
ಹಲವೆಡೆ ಸರಣಿ ಅವಘಡಗಳು ಸಂಭವಿಸಿದ್ದು, ಅವಶೇಷಗಳಿಂದ ಶವಗಳನ್ನು ಹೊರತೆಗೆಯುವ ಕಾರ್ಯಾಚರಣೆ ಮುಂದುವರಿದಿದೆ. ಈವರೆಗೂ 2,563 ಜನರನ್ನು ರಕ್ಷಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ತಂಡ ಹೇಳಿದೆ.
ಈ ನಡುವೆ, ಭೀಕರ ಪ್ರವಾಹದಿಂದಾಗಿ 41870 ಜನ ಬಾಧಿತರಾಗಿದ್ದಾರೆ. ೩೨ ಮಣಿ ಸಾವನ್ನಪ್ಪಿದ್ದಾರೆ, ಇನ್ನೂ 122 ಮಂದಿ ಕಾಣೆಯಾಗಿದ್ದಾರೆ. ಸುಮಾರು 1500 ಮನೆಗಳು ಹಾನಿಗೊಳಗಾಗಿವೆ ಎಂದು ಅಂದಾಜಿಸಲಾಗಿದೆ. ಸಿಕ್ಕಿಂನ 6 ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಒಟ್ಟು 14 ಸೇತುವೆಗಳು ಕೊಚ್ಚಿ ಹೋಗಿವೆ ಎಂದು ಮೂಲಗಳು ತಿಳಿಸಿವೆ.
https://twitter.com/snehasismiku/status/1711066127563162110