ನವದೆಹಲಿ: ಕೇಂದ್ರದ CAPC ಸಭೆಯಲ್ಲಿ ಕಬ್ಬಿನ FRP ದರ ನಿಗದಿ ಮಾನದಂಡ ಬದಲಾಯಿಸುವಂತೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಕಬ್ಬಿನ ಎಫ್ ಆರ್ ಪಿ ದರ ನಿಗದಿಯು ರೈತರಿಗೆ ಅನ್ಯಾಯವಾಗುತ್ತಿದೆ ಕಬ್ಬಿನ ಉತ್ಪಾದನೆ ವೆಚ್ಚಕ್ಕಿಂತ ಕಡಿಮೆ ದರ ನಿಗದಿಯಾಗುತ್ತಿದೆ ಸಕ್ಕರೆ ಇಳುವರಿ 8.5ರಿಂದ 10.25 ವರಗೆ ಏರಿಕೆ ಮಾಡಿರುವುದು ರೈತರಿಗೆ ಅನ್ಯಾಯವಾಗುತ್ತಿದೆ, ರಾಜ್ಯದಲ್ಲಿ 1-2 ಎಕರೆ ಕಬ್ಬು ಬೆಳೆಯುವ ರೈತರೆ ಹೆಚ್ಚು ಇರುವ ಕಾರಣ ಕಬ್ಬು ಉತ್ಪಾದನಾ ವೆಚ್ಚವನ್ನು ಪರಿಗಣಿಸುವಾಗ ಪ್ರತಿ ಹೆಕ್ಟರ್ ಗೆ ಬದಲಾಗಿ ಎಕ್ಕರೆಗೆ ಲೆಕ್ಕ ಹಾಕಬೇಕು ,ಈಗ FRP ದರ ಏರಿಕೆ ಮಾಡಿದ ಹೆಚ್ಚುವರಿ ಹಣ ರೈತರಿಗೆ ಸಿಗುತ್ತಿಲ್ಲ, ಕಬ್ಬಿನ ಕಟಾವು ಸಾಗಾಣಿಕೆ ರೈತರಿಗೆ ಸಂಕಷ್ಟವಾಗಿದೆ ಕಬ್ಬಿನ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿಗೊಳಿಸಿ ಪ್ರತಿ ಟನ್ ಕಬ್ಬು ಬೆಳೆಯಲು ಕನಿಷ್ಠ 3600 ಉತ್ಪಾದನಾ ವೆಚ್ಚವಾಗುತ್ತದೆ ಅದಕ್ಕೆ ಲಾಭ ಸೇರಿಸಿ 4000 ಕನಿಷ್ಠ ನಿಗದಿ ಮಾಡಬೇಕು ಎಂದು ದೆಹಲಿಯ ಕೃಷಿ ಭವನದಲ್ಲಿ ನಡೆದ CAPC ಸಭೆಯಲ್ಲಿ ರಾಜ್ಯಾಧ್ಯಕ್ಷರು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು. ರೈತರ ಸಮಸ್ಯೆ ಸಹಿತ ಹಲವಾರು ಪ್ರಮುಖ ವಿಷಯಗಳ ಬಗೆ ಕೇಂದ್ರದ ಗಮನ ಸೆಳೆದರು.
ಬೆಲ್ಲದ ಆಲೆಮನೆ ಗಾಣಗಳಲ್ಲಿ ಕಬ್ಬಿನಿಂದ ಎತನಾಲ್ ಉತ್ಪಾದಿಸಲು ರೈತರಿಗೆ ಅವಕಾಶ ಕೊಡಬೇಕು. ಸಕ್ಕರೆ ಕಾರ್ಖಾನೆಗಳು ಉತ್ಪಾದಿಸಿದ ವಿದ್ಯುತ್ತನ್ನು ಸಂಪೂರ್ಣವಾಗಿ ಸರ್ಕಾರ ಖರೀದಿಸಿ ಇದರ ಹಣವನ್ನು ರೈತರ ಕಬ್ಬಿನ ಬಿಲ್ ಬಾಕಿಗೆ ಸರ್ಕಾರವೇ ರೈತರಿಗೆ ನೀಡಲು ಬಳಸಬೇಕು, ಕಬ್ಬಿನ ಬೆಳೆ ಸಾಲ 12 ತಿಂಗಳಿಗೆ ಸುಸ್ತಿಯಾಗುತ್ತದೆ ಯಾವುದೇ ರೈತ 14-15 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಕಡಿತ ಮಾಡುವುದಿಲ್ಲ ಆದ್ದರಿಂದ ಕಬ್ಬು ಬೆಳೆಗಾರರಿಗೆ ಸರ್ಕಾರದ ರಿಯಾಯಿತಿ ಬಡ್ಡಿ ಸಾಲ ಸಿಗುವುದಿಲ್ಲ ಕಬ್ಬಿನ ಬೆಳೆ ಸಾಲದ ಅವಧಿಯನ್ನು 18 ತಿಂಗಳಿಗೆ ವಿಸ್ತರಿಸಬೇಕು ಇದರಿಂದ ರೈತರಿಗೆ ಸಿಬಿಲ್ ಸ್ಕೋರಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಸಕ್ಕರೆ ಕಾರ್ಖಾನೆಗಳು ಪರಿಶೀಲಿಸಿ ವರದಿ ಕೊಡುವ ಕಾರಣ ಇಳುವರಿ ರೈತರಿಗೆ ಮೋಸವಾಗುತ್ತಿದೆ ,ನ್ಯಾಯ ಸಮ್ಮತವಾಗಿ ಕೊಡುತ್ತಿಲ್ಲ ,ತೂಕದಲ್ಲೂ ರೈತರಿಗೆ ಮೋಸವಾಗುತ್ತಿದೆ ,ಇದನ್ನು ತಪ್ಪಿಸಲು ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸುವಂತೆ ಸರ್ಕಾರ ಯೋಜನೆ ರೂಪಿಸಬೇಕು ಎಂದವರು ಆಗ್ರಹಿಸಿದರು.
ಕಬ್ಬಿಗೆ ಬೆಂಕಿ ಬಿದ್ದಾಗ ಸಕ್ಕರೆ ಕಾರ್ಖಾನೆಗಳು FRP ಹಣದಲ್ಲಿ ಶೇಕಡ 25ರಷ್ಟು ಹಣ ಕಡಿತ ಮಾಡಿಕೊಂಡು ಪಾವತಿಸುತ್ತಿದ್ದಾರೆ ಇದು ಅವೈಜ್ಞಾನಿಕ ಇದನ್ನು ತಪ್ಪಿಸಲು ಸಕ್ಕರೆ ನಿಯಂತ್ರಣ ಕಾಯ್ದೆ ಕಾನೂನು ತಿದ್ದುಪಡಿ ಮಾಡಬೇಕು, ಸಕ್ಕರೆ ನಿಯಂತ್ರಣ ಕಾಯ್ದೆ ಪ್ರಕಾರ 14 ದಿನದಲ್ಲಿ ಕಬ್ಬಿನ ಹಣ ಪಾವತಿ ಮಾಡದೆ ಇರುವ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಮುಖದಮೆ ದಾಖಲಿಸುವ ಕಾನೂನು ತಿದ್ದುಪಡಿ ಮಾಡಿ ಜಾರಿ ಮಾಡಬೇಕು ,ಅತಿವೃಷ್ಟಿ, ಪ್ರವಾಹಹಾನಿ, ಬರಗಾಲ ತುತ್ತದಾಗ ಬೆಳೆ ನಷ್ಟ ಪರಿಹಾರ ಸಿಗುವಂತಾಗಲು ಏನ್ ಡಿ ಆರ್ ಎಫ್ ಮಾನದಂಡ ತಿದ್ದುಪಡಿ ಮಾಡಬೇಕು ಕಬ್ಬಿಗೆ ಬೆಳೆ ವಿಮೆ ಜಾರಿ ತರಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದ ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತ ರವಿಕುಮಾರ್, ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ ಖಂಡಗಾವಿ ಬಾಗಲಕೋಟೆ ರೈತ ಮುಖಂಡ ಸುಭಾಸ್ ಶಿರಬೂರ್ ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸಿದರು
ದೇಶಾದ್ಯಂತ ಕಬ್ಬು ಬೆಳೆಯುವ ರಾಜ್ಯಗಳ ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರುಗಳು, ಕಬ್ಬು ಅಭಿವೃದ್ಧಿ ಸಂಶೋಧನಾ ಸಂಸ್ಥೆಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು CAPC ಚೇರ್ಮನ್. ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.