ಬೆಳ್ತಂಗಡಿ ‘ವೀರಕೇಸರಿ’ ಯುವಕರ ಸಾಧನೆ.. 175ನೇ ಯೋಜನೆಯ 7ನೇ ಆಸರೆ ಮನೆ ನಿರ್ಮಾಣ.. ಅಸಹಾಯಕರ ಪಾಲಿಗೆ ಈ ಯುವಕರೇ ಶಕ್ತಿ..
ಮಂಗಳೂರು: ಸಾಮಾಜಿಕ ಕಳಕಳಿ ಮೂಲಕ ಸೇವಾ ಕೈಂಕರ್ಯ ನಡೆಸುತ್ತಿರುವ ಬೆಳ್ತಂಗಡಿಯ ‘ವೀರಕೇಸರಿ’ ತಂಡ ಇದೀಗ ಮತ್ತೊಂದು ಕೆಲಸದ ಮೂಲಕ ನಾಡಿನ ಗಮನಸೆಳೆದಿದೆ. ಬೆಳ್ತಂಗಡಿ ಸಮೀಪದ ಶಿರ್ತಾಡಿ ವಿದ್ಯಾನಗರ ಮಕ್ಕಿಯಲ್ಲಿ ಅಸಹಾಯಕ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
ತಾಯಿ ಮಗ. ಇಬ್ಬರೇ ಇರುವ ಹರೀಶ್ ಎಂಬವರ ಕುಟುಂಬಕ್ಕೆ 15.10.2023 ಭಾನುವಾರ ಈ ಮನೆ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿರುವ ವೀರ ಕೇಸರಿ ಹುಡುಗರು, ತಮ್ಮ ಸಂಘಟನೆಯ 175ನೇ ಯೋಜನೆಯ 7ನೇ ಆಸರೆ ಮನೆ ನಿರ್ಮಿಸಿಕೊಡುವ ಸಾಧನೆಯ ಹುಮ್ಮಸ್ಸಿನಲ್ಲಿದ್ದಾರೆ.
ಭಾನುವಾರ ಬೆಳಿಗ್ಗೆ ನೆರವೇರಿದ ಈ ಸಮಾರಂಭದಲ್ಲಿ ಶಾಸಕರಾದ ಪ್ರತಾಪ್ ಸಿಂಹ ನಾಯಕ್, ಭಾರತೀಯ ಜನತಾ ಪಕ್ಷ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಮಾಜಿ ಸೈನಿಕರಾದ ವೆಂಕಟ್ರಮಣ ಶಮಾ೯ ಗುರುವಾಯನಕೆರೆ, ಪೆರಾಡಿಯಾ ನೆಲ್ಲಿಂಗೇರಿ ಶ್ರೀ ದುಗಾ೯ಪರಮೇಶ್ವರಿ ಅಮ್ಮನವರ ಕ್ಷೇತ್ರದ ಪ್ರಮುಖರಾದ ಶಶಿಕಲಾ, ಅಧ್ಯಾ ಪೌಂಡೇಶನ್ ಪಡುಬಿದ್ರಿ ಇದರ ಸ್ಥಾಪಕಧ್ಯಕ್ಷರಾದ ರಾಕೇಶ್ ಅಜಿಲ, ಸಮಾಜ ಸೇವಕರಾದ ಪ್ರಭಾಕರ್ ಸಿ.ಜಿ., ಹಿಂದೂ ಜಾಗರಣೆ ವೇದಿಕೆ ಮುಖಂಡ ಗಣೇಶ್ ಕುಲಾಲ್ ಕೆದಿಲ, ಲೆಕ್ಕ ಪರಿಶೋದಕರಾದ ಕೃಷ್ಣ ಮೂತಿ೯, ಅಮಂತ್ರಣ ಪರಿವಾರ ಸ್ಥಾಪಕಧ್ಯಕ್ಷರಾದ ವಿಜಯ್ ಕುಮಾರ್ ಜೈನ್, ಯುವರಾಜ್ ಕುಲಾಲ್ (ಭಗವತಿ ಗ್ರೂಪ್ ಪಡುಬಿದ್ರಿ), ಹುಕಾರಾಂ ( ಶಾರದಾ ಶೋರೂಂ ಉಜಿರೆ), ಹಾಗೂ ‘ವೀರ ಕೇಸರಿ’ ಬೆಳ್ತಂಗಡಿ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ಪದ್ಮನಾಭ ಪೂಜಾರಿಸೇರಿದಂತೆ ಅನೇಕ ಪ್ರಮುಖರು, ಗಣ್ಯರು ಭಾಗವಹಿಸಿದ್ದರು.