ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಮೇಲಾಟ ಶುರುವಾಗಿದೆ. ಇದೇ ವೇಳೆ ಮಧ್ಯಪ್ರದೇಶ ವಿಧಾನಸಭಾ ಕ್ಷೇತ್ರಗಳ ಪೈಕಿ 88 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ 88 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಹಿಂದಿನ ಪಟ್ಟಿಯಿಂದ ಮೂವರು ಅಭ್ಯರ್ಥಿಗಳನ್ನು ಸಹ ಬದಲಾಯಿಸಲಾಗಿದೆ.
ಮೊರೆನಾ ವಿಧಾನಸಭಾ ಕ್ಷೇತ್ರದಿಂದ ದಿನೇಶ್ ಗುರ್ಜರ್, ದಿಮಾನಿಯಿಂದ ರವೀಂದ್ರ ಸಿಂಗ್ ತೋಮರ್, ಗ್ವಾಲಿಯರ್ನಿಂದ ಸುನೀಲ್ ಶರ್ಮಾ, ಗುಣಾ (ಎಸ್ಸಿ) ಕ್ಷೇತ್ರದಿಂದ ಪಂಕಜ್ ಲನೇರಿಯಾ ಅವರನ್ನು ಪಕ್ಷ ಕಣಕ್ಕಿಳಿಸಿದೆ. ದಾತಿಯಾದಿಂದ ಅವಧೇಶ್ ನಾಯಕ್ ಬದಲಿಗೆ ರಾಜೇಂದ್ರ ಭಾರತಿ, ಪಿಚೋರ್ನಿಂದ ಶೈಲೇಂದ್ರ ಸಿಂಗ್ ಬದಲಿಗೆ ಅರವಿಂದ್ ಸಿಂಗ್ ಲೋಧಿ, ಗೋಟೆಗಾಂವ್ ಎಸ್ಸಿ ಸ್ಥಾನದಿಂದ ಶೇಖರ್ ಚೌಧರಿ ಬದಲಿಗೆ ನಾರದ ಪ್ರಸಾದ್ ಪ್ರಜಾಪತಿ ಅವರನ್ನು ಅಭ್ಯರ್ಥಿಗಳೆಂದು ಘೋಷಿಸಿದೆ.
230 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಭಾನುವಾರ 144 ಅಭ್ಯರ್ಥಿಗಳನ್ನು ಹೆಸರಿಸಿದೆ, ಇದರಲ್ಲಿ ಚಿಂದ್ವಾರ ವಿಧಾನಸಭಾ ಕ್ಷೇತ್ರದಿಂದ ಕಮಲ್ ನಾಥ್, ರಾಘೋಘರ್ ವಿಧಾನಸಭಾ ಕ್ಷೇತ್ರದಿಂದ ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಪುತ್ರ ಜೈವರ್ಧನ್ ಸಿಂಗ್ ಅವರ ಹೆಸರುಗಳು ಸೇರಿವೆ.