ಅಪಘಾತ ರಹಿತ ಸೇವೆಗೈದ KSRTC ಚಾಲಕರಿಗೆ ಬೆಳ್ಳಿ ಪದಕ

ದೊಡ್ಡಬಳ್ಳಾಪುರ: ಐದು ವರ್ಷಗಳ ಕಾಲ ಅಪಘಾತ ರಹಿತ ಚಾಲನೆ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಿಕ್ಕಬಳ್ಳಾಪುರ ವಿಭಾಗದ ವ್ಯಾಪ್ತಿಯ ದೊಡ್ಡಬಳ್ಳಾಪುರ ಘಟಕದ 10 ಮಂದಿ ಚಾಲಕರಿಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದದಿಂದ ನಿಡಲಾಗುವ ಬೆಳ್ಳಿ ಪದಕ ಪ್ರದಾನ ಮಾಡಿದರು.

ದೊಡ್ಡಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರು ಪದಕ ಪ್ರದಾನ ಮಾಡಿ ಚಾಲಕರನ್ನು ಅಭಿನಂದಿಸಿದರು. ಈ ಬೆಳ್ಳಿ ಪದಕವು ಚಿನ್ನದ ಲೇಪನದೊಂದಿಗೆ 32 ಗ್ರಾಂ ಇದೆ. ವಿಜೇತ ಚಾಲಕರಿಗೆ 2,000 ರೂ. ನಗದು ಪುರಸ್ಕಾರ ಹಾಗೂ ಮಾಸಿಕ 250 ರೂ. ಭತ್ಯೆ ನೀಡಲಾಗುತ್ತದೆ.

KSRTC ದೊಡ್ಡಬಳ್ಳಾಪುರ ಘಟಕದ ಬೆಳ್ಳಿ ಪದಕ ವಿಜೇತ ಚಾಲಕರು:

  1. ಕೃಷ್ಣಪ್ಪ ಕೆ.ಎನ್ನಿಂಗಪ್ಪ ಗುಡ್ಡದಕೇರಿ

  2. ರಾಮಕೃಷ್ಣ ಜೆ ಬಸವರಾಜು

  3. ನಾರಾಯಣಸ್ವಾಮಿ ಎಂ ಎನ್

  4. ರಂಜಿತ್ ಕುಮಾರ್ 

  5. ರಾಮಾಂಜಿನಪ್ಪ ಕೆ ಶ್ರೀನಿವಾಸ ಎಂ. 

  6. ವಿಜಯ ಕುಮಾರ್ .

  7. ಎಂಮಹಾಂತೇಶ್ ಗದ್ದಿ

ಚಿಕ್ಕಬಳ್ಳಾಪುರದಲ್ಲಿ ನಡೆದ ಸಮಾರಂಭದಲ್ಲಿ ದೊಡ್ಡಬಳ್ಳಾಪುರದ ಕೆಎಸ್ಆರ್ಟಿಸಿ ಘಟಕದ ಬೆಳ್ಳಿ ಪದಕ ಚಾಲಕರನ್ನು ಅಭಿನಂದಿಸಲಾಯಿತು. ಜಿಲ್ಲಾಧಿಕಾರಿ ರವೀಂದ್ರ, ವಿಭಾಗೀಯ ನಿಯಂತ್ರಣಧಿಕಾರಿ ಹಿಮವರ್ಧನ ನಾಯ್ಡು, ವಿಭಾಗೀಯ ಯಾಂತ್ರಿಕ ಅಭಿಯಂತರ ಎಂ.ಸಿ ಕೆಳಗೇರಿ, ವಿಭಾಗೀಯ ಸಂಚಾರ ಅಧಿಕಾರಿ ಮಂಜುನಾಥ, ಉಗ್ರಾಣಾಧಿಕಾರಿ ವೆಂಕಟರಮಣಪ್ಪ, ದೊಡ್ಡಬಳ್ಳಾಪುರ ಘಟಕ ವ್ಯವಸ್ಥಾಪಕ ಸಂತೋಷ್ ಉಪಸ್ಥಿತರಿದ್ದರು. .

Related posts