ವಿಶಾಖಪಟ್ಟಣಂ: ಆಂದ್ರಪ್ರದೇಶದ ವಿಶಾಖಪಟ್ಟಣಂ ಕಡಲ ಕಿನಾರೆಯಲ್ಲಿ ಮೀನುಗಾರಿಕಾ ಬೋಟ್ಗಳು ಲಂಗರು ಹಾಕಿದ್ದ ಪ್ರದೇಶದಲ್ಲಿ ಭೀಕರ ಅಗನಿ ಅನಾಹುತ ಸಂಭವಿಸಿದೆ.
ಭಾನುವಾರ ತಡರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 40ಕ್ಕೂ ಹೆಚ್ಚು ಬೋಟ್ಗಳು ಬೆಂಕಿಗೆ ಆಹುತಿಯಾಗಿದೆ. ರಾತ್ರಿ ಇದ್ದಕ್ಕಿದ್ದಂತೆಯೇ ಕಾಣಿಸಿಕೊಂಡ ಬೆಂಕಿ ಏಕಾಏಕಿ ಹಬ್ಬಿದೆ. ಸ್ವಲ್ಪ ಹೊತ್ತಿನಲ್ಲೇ ಅಪಾರ ಸಂಖ್ಯೆಯ ಬೋಟುಗಳು ಧಗಧಗಿಸಿ ಹೊತ್ತಿ ಉರಿದಿದೆ.
ಮೀನುಗಾರಿಕೆಯಲ್ಲಿ ತೊಡಗಿರುವ ಮೀನುಗಾರರ ತಂಡಗಳು ರಾತ್ರಿ ವೇಳೆ ಬೋಟ್ಗಳಲ್ಲಿ ತಂಗುವುದು ಸಾಮಾನ್ಯ. ಅದೇ ರೀತಿ ಕಳೆದ ರಾತ್ರಿಯೂ ಮೀನುಗಾರರು ದೋಣಿಗಳಲ್ಲಿ ವಿರಮಿಸಿರಬಹುದೆಂಬ ಸಂಶಯ ಕಾಡಿದೆ.
Vizag Harbour: Sunday (Nov 19th,2023):
On sunday Night, Massive Fire at Vizag Harbour has led to damage of around 40 fishing boats, each boat costing at least Rs 50 lakh.
At least 25 to 40 boats caught fire as per reports . However, No loss of life reported. Reason for the… pic.twitter.com/xRWjn8s4AO
— Phani Gosala (@PhaniGosala) November 20, 2023