ದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೋಮವಾರ ತನ್ನ ವಿಶ್ವಕಪ್ ಸಾಧಕರ ಪಟ್ಟಿಯನ್ನೊಳಗೊಂಡ ತಂಡವನ್ನು ಸೋಮವಾರ ಪ್ರಕಟಿಸಿದೆ. ಈ ತಂಡದಲ್ಲಿ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತ ಕ್ರಿಕೆಟ್ ತಂಡದ 6 ಮಂದಿ ಆಟಗಾರರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಐಸಿಸಿ ವಿಶ್ವಕಪ್ ತಂಡದ ಆಯ್ಕೆ ಸಮಿತಿಯು ವೆಸ್ಟ್ ಇಂಡೀಸ್ ಶ್ರೇಷ್ಠ ಇಯಾನ್ ಬಿಷಪ್, ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಶೇನ್ ವ್ಯಾಟ್ಸನ್ ಮತ್ತು ಐಸಿಸಿ ಜನರಲ್ ಮ್ಯಾನೇಜರ್ ವಾಸಿಂ ಖಾನ್ ಸೇರಿದಂತೆ ಪ್ರಮುಖರನ್ನೊಳಗೊಂಡ ಸಮಿತಿಯು ಈ ಪಟ್ಟಿಯನ್ನು ಪ್ರಕಟಿಸಿದೆ. ಐಸಿಸಿ ಪ್ರಕಟಿಸಿದ ಈ ಪಟ್ಟಿಯಲ್ಲಿ ಭಾರತದ ಆರು ಆಟಗಾರರು ಇದ್ದರೆ ಚಾಂಪಿಯನ್ ಶಿಪ್ ಗೆದ್ದ ಆಸ್ಟ್ರೇಲಿಯಾದ ಕೇವಲ ಇಬ್ಬರು ಮಾತ್ರ ಸ್ಥಾನ ಪಡೆದಿದ್ದಾರೆ.
ಪಟ್ಟಿ ಹೀಗಿದೆ:
-
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) (ದಕ್ಷಿಣ ಆಫ್ರಿಕಾ)
-
ರೋಹಿತ್ ಶರ್ಮಾ (ನಾಯಕ) (ಭಾರತ)
-
ವಿರಾಟ್ ಕೊಹ್ಲಿ (ಭಾರತ)
-
ಡೇರಿಲ್ ಮಿಚೆಲ್ (ನ್ಯೂಜಿಲೆಂಡ್)
-
ಕೆಎಲ್ ರಾಹುಲ್ (ಭಾರತ)
-
ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ)
-
ರವೀಂದ್ರ ಜಡೇಜಾ (ಭಾರತ)
-
ಜಸ್ಪ್ರೀತ್ ಬುಮ್ರಾ (ಭಾರತ)
-
ದಿಲ್ಶನ್ ಮಧುಶಂಕ (ಶ್ರೀಲಂಕಾ)
-
ಆಡಮ್ ಝಂಪಾ (ಆಸ್ಟ್ರೇಲಿಯಾ)
-
ಮೊಹಮ್ಮದ್ ಶಮಿ (ಭಾರತ)
-
ಜೆರಾಲ್ಡ್ ಕೋಟ್ಜಿ (ದಕ್ಷಿಣ ಆಫ್ರಿಕಾ)