ಇ-ಮೇಲ್ ಬಾಂಬ್ ತಲ್ಲಣ.. ಕಿಡಿಗೇಡಿಗಳ ಮೂಲೋಚ್ಚಾಟನೆಗೆ ಕಮೀಷನರ್ ದಯಾನಂದ್ ರಣತಂತ್ರ..

ಬೆಂಗಳೂರು: ಇಡೀ ರಾಜ್ಯವನ್ನು ತಲ್ಲಣಗೊಳಿಸಿದ್ದ ಬಾಂಬ್ ಬೆದರಿಕೆಯ ಇ-ಮೇಲ್ ಪೊಲೀಸರು ತನಿಖೆಯನ್ನು ಬಿರುಸುಗೊಳಿಸಿದ್ದಾರೆ. ಬೆಂಗಳೂರು ಮತ್ತು ಸುತ್ತಮುತ್ತಲ ಹಲವು ಶಾಲೆಗಳಿಗೆ ಶುಕ್ರವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಪೊಲೀಸರು ಬರೋಬ್ಬರಿ 48 ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಸೂಚನೆಯಂತೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್​ಗಳು ದಾಖಲಾಗಿವೆ. ಈ ಎಫ್​ಐಆರ್​ಗಳನ್ನು ಕ್ರೂಡೀಕರಿಸಿ ತನಿಖೆ ನಡೆಸುವ ಸಾಧ್ಯತೆಗಳಿವೆ ಎಂದು ಆಯುಕ್ತರ ಕಚೇರಿ ಮೂಲಗಳು ತಿಳಿಸಿವೆ.

ಶುಕ್ರವಾರ ಬೆಳಿಗ್ಗೆ 15 ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ರವಾನೆಯಾಗಿತ್ತೆಂದು ಹೇಳಲಾಗುತ್ತಿತ್ತು. ನಂತರ ಪರಿಶೀಲನೆ ಸಂದರ್ಭದಲ್ಲಿ ಸುಮಾರು 48 ಶಾಲೆಗಳಿಗೆ ಈ ರೀತಿಯ ಬೆದರಿಕೆಯ ಸಂದೇಶ ಬಂದಿರುವುದು ಬೆಳಕಿಗೆ ಬಂದಿದೆ. ಈ ಬಾಂಬ್ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಆಯುಕ್ತ ಬಿ.ದಯಾನಂದ್, ಈ ಬಗ್ಗೆ ಆಳವಾದ ತನಿಖೆಗೆ ಸೂಚನೆ ನೀಡಿದ್ದಾರೆ. ಇ-ಮೇಲ್ ಮೂಲವನ್ನು ಪತ್ತೆ ಹಚ್ಚಲೇ ಬೇಕೆಂಬ ಪಣತೊಟ್ಟಿರುವ ಅವರು ಸಿಸಿಬಿ ಹಾಗೂ ವಲಯಗಳ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ರಣತಂತ್ರ ರೂಪಿಸಿದ್ದಾರೆ.

Related posts